Advertisment

‘ಬೂಮ್ರಾ ಜೊತೆ ಆಡಿರೋದನ್ನ ಮೊಮ್ಮಕ್ಕಳಿಗೆ ಹೇಳ್ತೀನಿ’ ಎಂದಿದ್ದೇಕೆ ಟ್ರಾವಿಸ್ ಹೆಡ್..?

author-image
Ganesh
Updated On
‘ಬೂಮ್ರಾ ಜೊತೆ ಆಡಿರೋದನ್ನ ಮೊಮ್ಮಕ್ಕಳಿಗೆ ಹೇಳ್ತೀನಿ’ ಎಂದಿದ್ದೇಕೆ ಟ್ರಾವಿಸ್ ಹೆಡ್..?
Advertisment
  • ಜಸ್ಪ್ರೀತ್ ಬೂಮ್ರಾ ಟೀಂ ಇಂಡಿಯಾದ ಗ್ರೇಟ್ ಬೌಲರ್
  • ಆಸ್ಟ್ರೇಲಿಯಾ, ಇಂಗ್ಲೆಂಡ್​​ ದಂತಕತೆಗಳಿಂದ ಗುಣಗಾನ
  • ವಿಶ್ವ ಕ್ರಿಕೆಟ್​​ನ ಗ್ರೇಟೆಸ್ಟ್ ಪೇಸ್ ಸೆನ್ಸೇಷನ್ ಬೂಮ್ರಾ

ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬೂಮ್ರಾ ವಿಶ್ವ ಕ್ರಿಕೆಟ್​​ನ ಗ್ರೇಟೆಸ್ಟ್ ಪೇಸ್ ಸೆನ್ಸೇಷನ್. ಬೂಮ್ರಾ ಬೌಲಿಂಗ್​ಗೆ ಫಿದಾ ಆಗಿರೋ ಅದೆಷ್ಟೋ ಮಂದಿ ದಿಗ್ಗಜರು ಹಾಡಿ ಹೊಗಳುತ್ತಿದ್ದಾರೆ. ಅದ್ರಲ್ಲೂ ಆಸ್ಟ್ರೇಲಿಯಾ, ಇಂಗ್ಲೆಂಡ್​​ನ ಮಾಜಿ ಆಟಗಾರರು ಬೂಮ್ರಾ ಅವರ ಬೌಲಿಂಗ್​ನ ಗುಣಗಾನ ಮಾಡ್ತಿದ್ದಾರೆ.

Advertisment

ವಿಚಿತ್ರ ರನ್​ಅಪ್.. ವಿಚಿತ್ರ ಬೌಲಿಂಗ್ ಌಕ್ಷನ್.. ಎಕ್ಸ್ಟ್ರಾರ್ಡಿನರಿ ಪೇಸ್.. ಬಾಲ್ ಎಸೆದ್ರೆ ಎದುರಾಳಿ ಬ್ಯಾಟ್ಸ್​ಮನ್​ಗಳ ಬುಡ ಅಲ್ಲಾಡಿ ಹೋಗುತ್ತೆ.. ಬೂಮ್ರಾ ಎಸೆಯೋ ಒಂದೊಂದು ಬಾಲ್ ಹೇಗಿರುತ್ತೆ ಅನ್ನೋದನ್ನ ಎದುರಾಳಿಗಳನ್ನ ಕೇಳ್ಬೇಕು. ಬೂಮ್ರಾ ಬೌಲಿಂಗ್​ನಿಂದ ತಪ್ಪಿಸಿಕೊಂಡ್ರೆ ಸಾಕಪ್ಪ ಅಂತ ಅದೆಷ್ಟೋ ಬ್ಯಾಟ್ಸ್​ಮನ್​​ಗಳು ದೇವ್ರನ್ನ ಕೇಳಿಕೊಳ್ತಾರೆ.

ಬುಮ್ರಾ ಒಬ್ಬ ‘ಟರ್ಮಿನೇಟರ್’
ಶಾರ್ಟ್​​ ರನ್​ಅಪ್, ಒಂದು ಬಾಲ್ ಎಸೆದ ತಕ್ಷಣವೇ ಮತ್ತೊಂದು ಬಾಲ್​​​​ಗೆ ಪ್ಲಾನ್ ರೆಡಿಯಾಗಿರುತ್ತೆ. ಎದುರಾಳಿಗಳ ವೀಕ್ನೆಸ್ ಮೇಲೆ ದಾಳಿ ಮಾಡೋ ಬೂಮ್ರಾ ಒಬ್ಬ ಟರ್ಮಿನೇಟರ್ ಎಂದು ಆಸಿಸ್ ಮಾಜಿ ವೇಗಿ ಡೇಮಿಯನ್ ಫ್ಲೆಮಿಂಗ್ ಗುಣಗಾನ ಮಾಡಿದ್ದಾರೆ.

ಇದನ್ನೂ ಓದಿ:IPL 2025: ಆರ್​ಸಿಬಿಯಲ್ಲಿ 5 ಸರ್​​ಪ್ರೈಸ್ ಎಂಟ್ರಿಗಳ ಹಿಂದಿನ ಸೀಕ್ರೆಟ್ ರಿವೀಲ್..! 

Advertisment

ಬೂಮ್ರಾ ‘ಕಂಪ್ಲೀಟ್ ಪ್ಯಾಕೇಜ್’
ಪ್ರತಿ ಬಾರಿ ಬೂಮ್ರಾ ಎಸೆಯೋ ಒಂದೊಂದು ಬಾಲ್, ಡಿಫರೆಂಟ್ ಆಗಿರುತ್ತದೆ. ಒಂದೊಂದು ಬಾಲ್​ಗೂ ರಿದಮ್ ಬದಲಾಯಿಸಬೇಕು. ಬೂಮ್ರಾ ರಿವರ್ಸ್ ಸ್ವಿಂಗ್ ಮಾಡ್ತಾರೆ, ಸ್ಲೋ ಬಾಲ್ ಹಾಕ್ತಾರೆ, ಬೌನ್ಸರ್ ಕೂಡ ಹಾಕ್ತಾರೆ. ಈ ಎಲ್ಲಾ ಸ್ಕಿಲ್ಸ್​ ಇರೋ ಬೂಮ್ರಾ, ನಿಜಕ್ಕೂ ಕಂಪ್ಲೀಟ್ ಪ್ಯಾಕೇಜ್ ಅಂತ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಬೂಮ್ರಾ ದ ‘ಗ್ರೇಟೆಸ್ಟ್’ ಬೌಲರ್
ಆಸಿಸ್​​​ನ ಡೇರಿಂಗ್ ಌಂಡ್ ಡ್ಯಾಶಿಂಗ್ ಬ್ಯಾಟ್ಸ್​ಮನ್ ಟ್ರಾವಿಸ್ ಹೆಡ್, ಯಾವುದೇ ಬೌಲರ್​ ಬರ್ಲಿ ಅಟ್ಟಾಡಿಸಿಕೊಂಡು ಹೊಡಿತಾರೆ. ಬೂಮ್ರಾ ವಿರುದ್ಧ ಟ್ರಾವಿಸ್​ ಹೆಡ್​ರ ಹೆಡ್, ಸರಿಯಾಗಿ ವರ್ಕ್​ ಆಗಲ್ವಂತೆ. ಬೂಮ್ರಾ ಒಬ್ಬ ಚಾಲೆಂಜಿಂಗ್ ಬೌಲರ್​​. ಆತ ವಿಶ್ವ ಕ್ರಿಕೆಟ್​ನ ದ ಗ್ರೇಟೆಸ್ಟ್ ಬೌಲರ್. ನಾನು ಬೂಮ್ರಾ ಜೊತೆ ಆಡಿರೋದನ್ನ ನನ್ನ ಮೊಮ್ಮಕಳಿಗೆ ಹೇಳ್ತೀನಿ ಅಂತ ಟ್ರಾವಿಸ್ ಹೆಡ್ ತಿಳಿಸಿದ್ದಾರೆ.

ಬೂಮ್ರಾ ಈಸ್ ರಿಯಲಿ ಡೇಂಜರಸ್
ಗ್ಲೇನ್ ಮೆಕ್​ಗ್ರಾತ್ ಮತ್ತು ಜೇಮ್ಸ್ ಌಂಡರ್ಸನ್​​​​​, ಎದುರಾಳಿ ಬ್ಯಾಟ್ಸ್​​ಮನ್​​ಗಳ ಪಾಲಿಗೆ ಸಿಂಹಸ್ವಪ್ನರಾಗಿದ್ರು. ಈ ಇಬ್ಬರ ಹೆಸರು ಹೇಳಿದ್ರೆ ಸಾಕು ಬ್ಯಾಟ್ಸ್​ಮನ್​ಗಳು ಕನಸಿನಲ್ಲೂ ಬೆಚ್ಚಿ ಬೀಳ್ತಿದ್ರು. ಇದೀಗ ಆ ದಿಗ್ಗಜ ಸಾಲಿಗೆ ಬೂಮ್ರಾ ಸೇರ್ತಾರೆ. ಬೂಮ್ರಾ ಈಸ್ ರಿಯಲಿ ವೆರಿ ಡೇಂಜರಸ್ ಬೌಲರ್ ಅಂತ ಆಸಿಸ್ ಮಾಜಿ ನಾಯಕ ರಿಕಿ ಪಾಟಿಂಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.​​

Advertisment

ಇದನ್ನೂ ಓದಿ:ಆರ್​ಸಿಬಿ ಕ್ಯಾಪ್ಟನ್ ಹೆಸರು ರಿವೀಲ್! ಈ ಸ್ಟಾರ್​​ ತಂಡವನ್ನು ಮುನ್ನಡೆಸ್ತಾರೆ ಎಂದ ಎಬಿಡಿ

ಅಬ್ಬಾ.. ನಾನು ಬಚಾವ್!
ಫ್ಲೆಮಿಂಗ್, ಸ್ಮಿತ್, ಹೆಡ್ ಮತ್ತು ರಿಕಿ ಪಾಂಟಿಂಗ್ ಅಷ್ಟೇ ಅಲ್ಲ! ಇಂಗ್ಲೆಂಡ್​​ನ ಮಾಜಿ ವೇಗಿ ಸ್ಟೀವ್ ಫಿನ್ ಸಹ, ಬೂಮ್ರಾ ಬೌಲಿಂಗ್​​ಗೆ ಮಾರು ಹೋಗಿದ್ದಾರೆ. ಪರ್ತ್​​ ಟೆಸ್ಟ್​ನಲ್ಲಿ ಬೂಮ್ರಾ ಅಗ್ರೆಸಿವ್ ಬೌಲಿಂಗ್ ಸ್ಪೆಲ್ ನೋಡಿರೋ ಫಿನ್, ನನಗೆ ಪ್ಯಾಡ್ ಕಟ್ಟೋ ಸಂದರ್ಭ ಬಂದಿಲ್ಲ. ನಾನು ಬಚಾವ್ ​ಎಂದಿದ್ದಾರೆ ಇಂಗ್ಲಿಷ್ ಮಾಜಿ ವೇಗಿ.

ಕಂಪ್ಲೀಟ್ ಟೀಮ್ ಮ್ಯಾನ್
ಮತ್ತೊಂದೆಡೆ ಟೀಮ್ ಇಂಡಿಯಾ ಟೆಸ್ಟ್ ಸ್ಪೆಷಲಿಸ್ಟ್ ಚೆತೇಶ್ವರ ಪೂಜಾರಾ, ಬೂಮ್ರಾ ಕ್ಯಾರೆಕ್ಟರ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಬೂಮ್ರಾಗೆ ಸಲಹೆ ಕೊಡುವ ಅವಶ್ಯಕತೆ ಇಲ್ಲ. ಯಾರಾದ್ರೂ ಸಲಹೆ ಕೊಟ್ಟರೆ ಬೂಮ್ರಾ ಅದನ್ನ ಸ್ವೀಕರಿಸ್ತಾರೆ. ಹಿರಿಯರಿಗೆ ಗೌರವ ಕೊಡುವ ಬೂಮ್ರಾ ಕಿರಿಯರಿಗೆ ಟಿಪ್ಸ್ ಕೊಡ್ತಾರೆ. ಡ್ರೆಸಿಂಗ್​ ರೂಮ್​ನಲ್ಲಿ ಆತ ಎಲ್ಲರೊಂದಿಗೂ, ನಗುನಗುತಲೇ ಮಾತನಾಡ್ತಾರೆ. ಒಂದೇ ಮಾತಲ್ಲಿ ಹೇಳಬೇಕಾದ್ರೆ, ಬೂಮ್ರಾ ಒಬ್ಬ ಕಂಪ್ಲೀಟ್ ಟೀಮ್ ಮ್ಯಾನ್ ಎಂದು ಪೂಜಾರ ಬಣ್ಣಿಸಿದ್ದಾರೆ.

Advertisment

ಇದನ್ನೂ ಓದಿ:ಅಡಿಲೆಡ್​ ಟೆಸ್ಟ್​ನಲ್ಲೂ ಟೀಂ ಇಂಡಿಯಾದ ಇಬ್ಬರು ಹಿರಿಯ ಆಟಗಾರರಿಗೆ ಕೊಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment