newsfirstkannada.com

ಆಸಿಸ್​ ಬಾಲ್​ ಟ್ಯಾಂಪರಿಂಗ್?​ ಕುತಂತ್ರದಾಟಕ್ಕೆ ಬಲಿಪಶುವಾದ್ರಾ ಕೊಹ್ಲಿ, ಪೂಜಾರ, ಜಡೇಜಾ?

Share :

11-06-2023

  ಆಸಿಸ್​ ಶುರು ಮಾಡ್ತಾ ಕುತಂತ್ರದಾಟ?

  ಆಸೀಸ್​​​​​​ನ ಡೆಡ್ಲಿ ದಾಳಿಗೆ ದಿಗ್ಗಜರ ಆಟ ನಡಿಲಿಲ್ಲ

  ಗೆಲ್ಲೋಕೆ ಹೀಗೆಲ್ಲಾ ಮಾಡ್ತಾರಾ ಆಸಿಸ್​ ಕ್ರಿಕೆಟಿಗರು?

ಆಸ್ಟ್ರೇಲಿಯಾ ತಂಡ ಮ್ಯಾಚ್ ಗೆಲ್ಲಲು ಏನ್ ಬೇಕಾದ್ರು ಮಾಡುತ್ತೆ. ಅಡ್ಡದಾರಿ ಹಿಡಿಯೋಕು ಅದು ಹೇಸಲ್ಲ. ವಿಶ್ವಟೆಸ್ಟ್ ಚಾಂಪಿಯನ್​ಶಿಪ್​​​​​ ಫೈನಲ್​​ನಲ್ಲಿ ಆಸ್ಟ್ರೇಲಿಯನ್ನರು ನೀಚ ಬುದ್ಧಿಯನ್ನ ತೋರಿಸಿದ್ದಾರೆ. ಇವರ ಕುತಂತ್ರಕ್ಕೆ ಟೀಮ್ ಇಂಡಿಯಾದ ಘಟಾನುಘಟಿ ಬ್ಯಾಟ್ಸ್​​ಮನ್​​ಗಳು ಬಲಿಯಾದ್ರಾ ಅನ್ನೋ ಅನುಮಾನ ಕಾಡೋಕೆ ಶುರುವಾಗಿದೆ.

ವಿರಾಟ್​ ಕೊಹ್ಲಿ– 14 ರನ್​​

ಪೂಜಾರ-14 ರನ್

ರೋಹಿತ್​​​ ಶರ್ಮಾ-15 ರನ್​​

ವಿಶ್ವಟೆಸ್ಟ್​ ಚಾಂಪಿಯನ್​ಶಿಪ್​​​​ ಫೈನಲ್​​ನಲ್ಲಿ ಟೀಮ್ ಇಂಡಿಯಾದ ಟಾಪ್ ಆರ್ಡರ್ ಬ್ಯಾಟ್ಸ್​​ಮನ್​​ಗಳ ಫೇಲಿವರ್​ ಬಗ್ಗೆ ಸಾಕಷ್ಟು ಟೀಕೆ ವ್ಯಕ್ತವಾಗ್ತಿವೆ. ಆದರೆ ಈ ಅತಿರಥ ಮಹಾರಥರ ವಿಕೆಟ್ಸ್​ ನ್ಯಾಯಯುತವಾಗಿಲ್ಲ. ಬದಲಿಗೆ ಆಸ್ಟ್ರೇಲಿಯನ್ನರ ಮಸಲತ್ತಿಗೆ ನಂಬಿಗಸ್ಥ ಬ್ಯಾಟ್ಸ್​​​ಮನ್​​ಗಳು ಬಲಿಯಾಗಿದ್ದಾರೆ.

ಆಸ್ಟ್ರೇಲಿಯನ್ನರ ಮೋಸದಾಟಕ್ಕೆ ಬಿಗ್​​​-3 ಪ್ಲೇಯರ್ಸ್​ ಬಲಿ?

ಜಗಮೆಚ್ಚಿದ ಕಿಂಗ್ ಕೊಹ್ಲಿ, ನಂಬಿಗಸ್ಥ ಪೂಜಾರ, ಸ್ಟಾರ್​ ಆಲ್​ರೌಂಡರ್ ರವೀಂದ್ರ ಜಡೇಜಾ ಈ ಮೂವರ ಪೈಕಿ ಜಡ್ಡು ಹೊರತುಪಡಿಸಿದರೆ ಕೊಹ್ಲಿ-ಪೂಜಾರ ನಿರೀಕ್ಷೆ ಹುಸಿಗೊಳಿಸಿದರು. ಆಸೀಸ್​​​​​​ನ ಡೆಡ್ಲಿ ದಾಳಿ ಮುಂದೆ ದಿಗ್ಗಜರ ಆಟ ನಡಿಲಿಲ್ಲ ಅಂತ ಎಲ್ಲರೂ ಮಾತನಾಡಿಕೊಳ್ತಿದ್ದಾರೆ. ಆದರೆ ಅಸಲಿಗೆ ಆಸ್ಟ್ರೇಲಿಯನ್ನರು ನ್ಯಾಯಯುತವಾಗಿ ಇವರ ವಿಕೆಟ್​​​​ ಅನ್ನ ಪಡಿಲೇ ಇಲ್ಲ. ಬದಲಿಗೆ ಮೋಸದಾಟಕ್ಕೆ ಸ್ಟಾರ್ ತ್ರಿಮೂರ್ತಿಗಳು ಬಲಿಪಶುವಾಗಿದ್ದಾರೆ ಅಂತ ಪಾಕ್ ಮಾಜಿ ಕ್ರಿಕೆಟಿಗನೊಬ್ಬ ಹೊಸ ಬಾಂಬ್ ಸಿಡಿಸಿದ್ದಾರೆ.

ಟೆಸ್ಟ್​ ವಿಶ್ವಕಪ್​​​ನಲ್ಲಿ ಆಸೀಸ್​​ನಿಂದ ಬಾಲ್​ ಟ್ಯಾಂಪರಿಂಗ್​​?

ಸದ್ಯ ನಡೆಯುತ್ತಿರುವ ವಿಶ್ವಟೆಸ್ಟ್​ ಚಾಂಪಿಯನ್​​​​​ಶಿಪ್​​ನಲ್ಲಿ ಬಾಲ್ ಟ್ಯಾಂಪರಿಂಗ್ ಬಿರುಗಾಳಿ ಬೀಸಿದೆ. ಮಾಜಿ ಚಾಂಪಿಯನ್​ ಆಸ್ಟ್ರೇಲಿಯನ್ನರು ಬಾಲ್​ ಟ್ಯಾಂಪರಿಂಗ್ ನಡೆಸಿದ್ದಾರೆ ಎಂದು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಬಸಿತ್​ ಅಲಿ ಆರೋಪಿಸಿದ್ದು, ಆ ಮೂಲಕ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿದ್ದಾರೆ.

ಇಂಗ್ಲೆಂಡ್ ಪಿಚ್​​​​​​​ನಲ್ಲಿ ಶೈನ್ ಹೊರಗಿದ್ರೆ ಬಾಲ್​ ಒಳಗೆ ಬರುತ್ತೆ. ಇದಕ್ಕೆ ಇನ್​​ ಸ್ವಿಂಗ್ ಅಂತಾರೆ. ಹೊರಗಿದ್ದರೆ ರಿವರ್ಸ್​ಸ್ವಿಂಗ್​​ ಆಗುತ್ತೆ. 15 ರಿಂದ 20ನೇ ಓವರ್ ನೋಡಿ. ವಿರಾಟ್ ಕೊಹ್ಲಿ, ಸ್ಟಾರ್ಕ್​ ಬೌಲಿಂಗ್ ನಲ್ಲಿ ಔಟಾದಾಗ ​​​​​​​ಬಾಲ್​ ಶೈನ್ ಆಗಿ ಹೊರಗೆ ಹೋಗಬೇಕಿತ್ತು. ಆದರೆ ಬೌನ್ಸ್ ಆಗಿ ವಿಕೆಟ್ ಕೀಪರ್​ ಕೈ ಸೇರಿತು. ಎಂತಹ ಆಶ್ಚರ್ಯ ? ಆಸ್ಟ್ರೇಲಿಯನ್ನರು ಚೆಂಡನ್ನ ಉಜ್ಜಿದ್ದಾರೆ. ಪರಿಣಾಮ ಗ್ರೀನ್ ಬೌಲಿಂಗ್​​​ನಲ್ಲಿ ಪೂಜಾರ ಔಟಾದ್ರು.ಆಗ ಬಾಲ್​ ಶೈನ್ ಆಗಿ ಒಳಗಿತ್ತು. ಬಳಿಕ ಏಕಾಏಕಿ ರಿವರ್ಸ್​ ಸ್ವಿಂಗ್​ ಆಗಿ ವಿಕೆಟ್ ಕಳೆದುಕೊಂಡ್ರು. ಇಲ್ಲಿ ನಿಜಕ್ಕೂ ತಪ್ಪುಗಳು ನಡೆದಿವೆ.

ಬಸಿತ್ ಅಲಿ, ಪಾಕ್ ಮಾಜಿ ಕ್ರಿಕೆಟಿಗ

ಇಲ್ಲಿ ಬಸಿತ್ ಅಲಿ ಹೇಳಿರುವ ಮಾತು ಸತ್ಯ ಅನ್ನಿಸುತ್ತಿವೆ.ಯಾಕಂದ್ರೆ ಡ್ಯೂಕ್​ ಬಾಲ್​​ನಲ್ಲಿ 40 ಓವರ್ಸ್​ ನಂತರವೇ ರಿವರ್ಸ್​ ಸ್ವಿಂಗ್​​ ಆಗುತ್ತೆ. ಒಂದು ವೇಳೆ ಅದಕ್ಕಿಂತ ಮುಂಚೇನೇ ಆಗಬೇಕಂದ್ರೆ ಚೆಂಡನ್ನ ಒಂದು ಕಡೆ ಉಜ್ಜಿ ಶೈನ್ ಕಳೆಯಬೇಕು. ಅದನ್ನ ಆಸ್ಟ್ರೇಲಿಯನ್ನರು ಮಾಡಿದ್ದಾರೆ ಅನ್ನೋದಕ್ಕೆ ಈ ವಿಡಿಯೋ ಮತ್ತಷ್ಟು ಪುಷ್ಠಿ ನೀಡ್ತಿದೆ.

ಆಸ್ಟ್ರೇಲಿಯನ್ನರು ಹೇಗೆ ಚೆಂಡನ್ನ ಉಜ್ಜುತ್ತಿದ್ದಾರೆ ಅನ್ನೋದನ್ನ. ಭಾರತದ ಬ್ಯಾಟಿಂಗ್ ವೇಳೆ ಮಾನರ್ಸ್​ ಲಬುಶಾನೆ ತಮ್ಮ ಬಟ್ಟೆಯಿಂದ ಚೆಂಡನ್ನ ಉಜ್ಜುತ್ತಿದ್ದಾರೆ.ಐಸಿಸಿ ನಿಯಮದ ಪ್ರಕಾರ ಅಂಪೈರ್ಸ್​ ಅನುಮತಿಯಿಲ್ಲದೇ ಬಟ್ಟೆಯಿಂದ ಚೆಂಡನ್ನ ಉಜ್ಜುವಂತಿಲ್ಲ. ಆದರಿಲ್ಲಿ ಆಸೀಸ್​​ ನಿಯಮವನ್ನೇ ಗಾಳಿಗೆ ತೂರಿದೆ.

ಅಧರ್ಮದಿಂದ ಪಂದ್ಯ ಗೆಲ್ಲೋದು ಆಸೀಸ್​ಗೆ ಖಯಾಲಿ..!

ಅಧರ್ಮದಿಂದ ಪಂದ್ಯ ಗೆಲ್ಲೋದ್ರಲ್ಲಿ ಆಸ್ಟ್ರೇಲಿಯನ್ನರು ಪಂಟರ್ಸ್​..! ಗೆಲುವಿಗಾಗಿ ಯಾವ ಹಂತಕ್ಕೆ ಬೇಕಾದ್ರು ಹೋಗ್ತಾರೆ..ಅದು ಸ್ಲೆಡ್ಜಿಂಗ್​​​​, ಮೈಂಡ್​ಗೇಮ್​​​​​​​ , ಸ್ಯಾಂಡ್ ಪೇಪರ್​​​​​​​​​ ಯಾವುದಾದ್ರು ಸೈ. ಅಷ್ಟೇ ಏಕೆ ಬಾಲ್​​ ಟ್ಯಾಂಪರಿಂಗ್​​ ನಂತಹ ಕೀಳ ಕೃತ್ಯಕ್ಕೂ ಇವರು  ಇಳಿಯಬಲ್ಲರು.

ಬಾಲ್​​ ಟ್ಯಾಂಪರಿಂಗ್ ನಡೆಸಿ ಬೆತ್ತಲು..!

ಬಾಲ್​ ಟ್ಯಾಂಪರಿಂಗ್​​​ ಈ ವಿವಾದ 2018 ರಲ್ಲಿ ಕ್ರಿಕೆಟ್ ಲೋಕದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿಸಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಬಾಲ್ ಟ್ಯಾಂಪರಿಂಗ್ ನಡೆಸಿದ್ದ ಆಸ್ಟ್ರೇಲಿಯನ್ನರು ಕ್ರಿಕೆಟ್​​​​ ಜಗತ್ತಿನ ಮುಂದೆ ಬೆತ್ತಲಾಗಿದ್ರು. ಡೇವಿಡ್​ ವಾರ್ನರ್​​, ಸ್ಟೀವ್ ಸ್ಮಿತ್​​ ಹಾಗೂ ಕ್ಯಾಮರೂನ್​​ ಬೆನ್​ಕ್ರಾಪ್ಟ್​​​ ಬ್ಯಾನ್ ಶಿಕ್ಷೆಗೆ ಗುರಿಯಾಗಿದ್ರು.

ಇಷ್ಟೆಲ್ಲಾ ನಡೆದ್ರೂ ಆಸೀಸ್​​​​​​ ಬುದ್ಧಿ ಕಲಿತಂತೆ ಕಾಣಿಸ್ತಿಲ್ಲ. ಕಾಂಗರೂಗಳ ಮೇಲೆ ಮತ್ತೆ ಬಾಲ್ ಟ್ಯಾಂಪರಿಂಗ್ ಆರೋಪ ಸುತ್ತಿಕೊಂಡಿದೆ. ಇದು ನಿಜವಾಗಿದ್ದೇ ಆದಲ್ಲಿ ಆಸ್ಟ್ರೇಲಿಯನ್ನ ಮಾನ ಮತ್ತೊಮ್ಮೆ ಮೂರು ಕಾಸಿಗೆ ಹರಾಜಗೋದು ಗ್ಯಾರಂಟಿ..

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಆಸಿಸ್​ ಬಾಲ್​ ಟ್ಯಾಂಪರಿಂಗ್?​ ಕುತಂತ್ರದಾಟಕ್ಕೆ ಬಲಿಪಶುವಾದ್ರಾ ಕೊಹ್ಲಿ, ಪೂಜಾರ, ಜಡೇಜಾ?

https://newsfirstlive.com/wp-content/uploads/2023/06/Kohli-jadeja.jpg

Load More