newsfirstkannada.com

ಆಸಿಸ್​ ಟಾರ್ಗೆಟ್​ ಒಬ್ಬನೇ ಒಬ್ಬ.. ಟೀಂ ಆಸ್ಟ್ರೇಲಿಯಾಗೆ ಭಾರತದ ಈ ಆಟಗಾರ ಅಂದರೆ ಭಯ..!

Share :

Published November 18, 2023 at 12:42pm

  ಇಂಡೋ-ಆಸಿಸ್​ ಫೈನಲ್​ ಫೈಟ್​ಗೆ ಕೌಂಟ್​ಡೌನ್​

  ಸೇಡಿನ ಸಮರದಲ್ಲೂ ಆಸಿಸ್​ಗೆ ಕಾದಿದೆ ಮಾರಿಹಬ್ಬ

  ನಾಳೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಫೈನಲ್ ಪಂದ್ಯ

ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ಟಾರ್ಗೆಟ್​​ ಒಬ್ಬನೇ. ಟೀಮ್​ ಇಂಡಿಯಾ 11 ರಣಕಲಿಗಳು ಕಣಕ್ಕಿಳೀತಾ ಇದ್ರೂ ಕಾಂಗರೂಗಳ ಟಾರ್ಗೆಟ್​ ಒಬ್ಬನೇ. ಅದೇ ಕಿಂಗ್​ ಕೊಹ್ಲಿ.. ವಿರಾಟ್​ ಕೊಹ್ಲಿ ಅಕ್ಷರಶಃ ಆಸಿಸ್​ ಪಡೆಯನ್ನು ಸಿಂಹಸ್ವಪ್ನದಂತೆ ಕಾಡಿದ್ದಾರೆ. ಕಿಂಗ್​ ಹೆಸರು ಕೇಳಿದ್ರೆ ಕಾಂಗರೂಗಳ ಪಡೆ ಬೆಚ್ಚಿ ಬೀಳುತ್ತದೆ.

ಇಂಡೋ-ಆಸಿಸ್​ ಫೈನಲ್​ ಫೈಟ್​ಗೆ ವೇದಿಕೆ ಸಜ್ಜಾಗಿದೆ. ವಿಶ್ವ ಸಮರವನ್ನು ಗೆದ್ದು ಒನ್​ ಡೇ ಕ್ರಿಕೆಟ್​ನ ಅಧಿಪತಿ ಯಾರಾಗ್ತಾರೆ ಅನ್ನೋ ಕುತೂಹಲದ ಪ್ರಶ್ನೆ ವಿಶ್ವ ಕ್ರಿಕೆಟ್​ ಲೋಕವನ್ನ ಆವರಿಸಿದೆ. 5 ಬಾರಿಯ ಚಾಂಪಿಯನ್​ ಆಸ್ಟ್ರೇಲಿಯಾ 2 ಬಾರಿಯ ಚಾಂಪಿಯನ್​​ ಟೀಮ್​ ಇಂಡಿಯಾ ತೊಡೆ ತಟ್ಟಲು ಸಜ್ಜಾಗಿವೆ. ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ರೆಡಿಯಾಗಿದೆ.

ಫಿನಿಕ್ಸ್​ನಂತೆ ಎದ್ದು ಬಂದ ಆಸಿಸ್​ಗೆ ಒಬ್ಬನೇ ಟಾರ್ಗೆಟ್​

ಈ ಬಾರಿಯ ವಿಶ್ವಕಪ್​ ಸಮರದಲ್ಲಿ ಆಸ್ಟ್ರೇಲಿಯಾ ಗೆದ್ದು ಬಂದ ರೀತಿಯೇ ರೋಚಕ. ಆರಂಭದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಆಸಿಸ್​ ಪಡೆ ಪಾಯಿಂಟ್ಸ್​​ ಟೇಬಲ್​ನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿತ್ತು. ಪಾತಾಳಕ್ಕೆ ಕುಸಿದಿದ್ದ ಆಸಿಸ್​ ಫೈನಲ್​ಗೆ​ ಬರುತ್ತೆ ಅಂತಾ ಯಾವೊಬ್ಬ ಕೂಡ ಯೋಚನೆ ಮಾಡಿರಲಿಲ್ಲ. ಎಲ್ಲರಿಗೂ ಶಾಕ್​ ಕೊಟ್ಟ ಆಸಿಸ್​ ಇದೀಗ ಫೈನಲ್​ ಫೈಟ್​ನಲ್ಲಿ ತೊಡೆ ತಟ್ಟಲು ಸಜ್ಜಾಗಿದೆ. ಆಸಿಸ್​ ಪಾಳಯದಲ್ಲಿ ಫೈನಲ್​ ತಲುಪಿದ ಖುಷಿಗಿಂತ ಆತಂಕವೇ ಹೆಚ್ಚಾಗಿದೆ. ಟೀಮ್​ ಇಂಡಿಯಾ ಅಲ್ಲ, ಈ ಒಬ್ಬನದ್ದೇ ಆಸಿಸ್​ಗೆ ಟೆನ್ಶನ್​.

ಇದು ಇಂಡೋ vs ಆಸಿಸ್​ ಕದನ ಅಲ್ಲ..!

ಫೈನಲ್​ ಫೈಟ್​ನಲ್ಲಿ ಆಸ್ಟ್ರೇಲಿಯಾದ ಏಕೈಕ ಟಾರ್ಗೆಟ್​ ಕಿಂಗ್​ ಕೊಹ್ಲಿ ಮಾತ್ರ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧ ಆಡೋದಂದ್ರೆ ಕಿಂಗ್​ ಕೊಹ್ಲಿ ಸಿಕ್ಕಾಪಟ್ಟೆ ಇಷ್ಟ. ಅದು ಇಂಡೋ-ಆಸಿಸ್​ ನಡುವಿನ 2016ರ ಟಿ20 ವಿಶ್ವಕಪ್​ ಸಮರ. ಸೆಮಿಫೈನಲ್​ಗೆ ಎಂಟ್ರಿ ಕೊಡಲು ಗೆಲ್ಲಲೇಬೇಕಾದ ಒತ್ತಡ ಉಭಯ ತಂಡಗಳಿಗಿತ್ತು. 161 ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ಟೀಮ್​ ಇಂಡಿಯಾ 49 ರನ್​ಗಳಿಗೆ 3 ಪ್ರಮುಖ ವಿಕೆಟ್​ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆಸ್ಟ್ರೇಲಿಯಾ ಗೆದ್ದೆ ಬಿಟ್ವಿ ಅನ್ನೋ ಆತ್ಮವಿಶ್ವಾಸದ ಅಲೆಯಲ್ಲಿ ತೇಲಾಡ್ತಿತ್ತು. ಆಗ್ಲೇ ನೋಡಿ ಕಿಂಗ್​ ಕೊಹ್ಲಿ ಕೊಟ್ಟಿದ್ದು ಶಾಕ್​ ಟ್ರೀಟ್​ಮೆಂಟ್​.

ಅಂದು ಆಸಿಸ್​ ಆಟಗಾರರು ಕನಸಲ್ಲೂ ಊಹಿಸದ ರೀತಿಯಲ್ಲಿ ಕೊಹ್ಲಿ ಬ್ಯಾಟಿಂಗ್​ ನಡೆಸಿದ್ರು. ಕಿಂಗ್​ ಕೊಹ್ಲಿಯ ಆರ್ಭಟಕ್ಕೆ ಆಸಿಸ್​ ಪಡೆ ಬೆಚ್ಚಿ ಬಿದ್ದಿತ್ತು. 6 ವಿಕೆಟ್​​ಗಳ ಸೋಲು ಕಂಡ ಆಸಿಸ್​​, ಟೂರ್ನಿಯಿಂದ ಹೊರಬಿದ್ರೆ, ಟೀಮ್​ ಇಂಡಿಯಾ ಸೆಮೀಸ್​​ಗೆ ಎಂಟ್ರಿ ಕೊಟ್ಟಿತ್ತು.

ಸೇಡಿನ ಸಮರದಲ್ಲೂ ಆಸಿಸ್​ಗೆ ಕಾದಿದೆ ಮಾರಿ ಹಬ್ಬ

ಅಂದು ಭಾರತದ ನೆಲದಲ್ಲಿ ಸೋಲುಂಡು ಆಸಿಸ್​ಗೆ​ ಫ್ಲೈಟ್​ ಹತ್ತಿದ್ದ ಕಾಂಗರೂಗಳ ಪಡೆಗೆ ಫೈನಲ್​ ಪಂದ್ಯ ಸೇಡಿನ ಸಮರ. ಆ ಸೋಲಿನ ಸೇಡು ತೀರಿಸಿಕೊಳ್ಳೋ ಲೆಕ್ಕಾಚಾರ ಕಾಂಗರೂಗಳದ್ದು. ಅದು ಅಷ್ಟು ಸಲಭದ ಮಾತು ಅಲ್ಲವೇ ಅಲ್ಲ. ಈ ಬಾರಿಯೂ ಕೊಹ್ಲಿಯನ್ನ ಕಟ್ಟಿ ಹಾಕೋದು ಅಸಾಧ್ಯದ ಮಾತೇ.

ಮೆಗಾ ಟೂರ್ನಿಯಲ್ಲಿ ವಿರಾಟ ರೂಪ ದರ್ಶನ

ಈ ಬಾರಿಯ ವಿಶ್ವಕಪ್​ ಇಡೀ ವಿಶ್ವಕ್ಕೆ ವಿರಾಟ ರೂಪ ದರ್ಶನವಾಗಿದೆ. ಟೂರ್ನಿಯ ಮೊದಲ ಪಂದ್ಯದಲ್ಲೇ ಕಾಂಗರೂಗಳನ್ನ ಕೊಹ್ಲಿ ಕಾಡಿದ್ರು. ಚೆಪಾಕ್​ ಅಂಗಳದಲ್ಲಿ ಆಸಿಸ್​ ಬೆಂಡೆತ್ತಿದ್ದ ಕೊಹ್ಲಿ 85 ರನ್​ಗಳ ಸಾಲಿಡ್​ ಇನ್ನಿಂಗ್ಸ್​ ಕಟ್ಟಿದ್ರು. ಟೂರ್ನಿಯಲ್ಲಿ ಅದ್ಭುತ ಆಟವಾಡಿ ಹೈಯೆಸ್ಟ್​ ರನ್​ ಗೆಟ್ಟರ್​ ಪಟ್ಟವನ್ನೇರಿದ್ದಾರೆ. ಮದಗಜನಂತೆ ಹೋರಾಡ್ತಿರೋ ಕೊಹ್ಲಿಯನ್ನು ಕಟ್ಟಿ ಹಾಕೋಕಾಗುತ್ತಾ?

ಕಾಂಗರೂಗಳನ್ನ ಬೇಟೆಯಾಡಲು ಕೊಹ್ಲಿ ಸದಾ ಸಿದ್ಧ

ಬಿಗ್​​ ಸ್ಟೇಜ್​ನಲ್ಲಿ ಬಿಗ್​ ಟೀಮ್​ ಎದುರು ಹೈಪ್ರೆಶರ್​ನಲ್ಲಿ ಆಡೋದ್ರಲ್ಲಿ ಕೊಹ್ಲಿ ಪಂಟರ್​. ಅದ್ರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಅಂದ್ರೆ ಕೊಹ್ಲಿ, ತೊಡೆ ತಟ್ಟಲು ತಯಾರಾಗಿರ್ತಾರೆ. ಅದ್ರಲ್ಲೂ ಭಾರತದ ನೆಲದಲ್ಲಿ ಆಸಿಸ್​​ ವಿರುದ್ಧ ಆಡೋಕಂತೂ ಕಿಂಗ್​ ಕೊಹ್ಲಿ ಕಾದು ಕುಳಿತಿರ್ತಾರೆ. ಈ ಹಿಂದಿನ ಟ್ರ್ಯಾಕ್​ ರೆಕಾರ್ಡ್​ ಇದಕ್ಕೆ ಸಾಕ್ಷಿಯಾಗಿದೆ.

ಭಾರತದಲ್ಲಿ ಆಸಿಸ್​ ವಿರುದ್ಧ ಕೊಹ್ಲಿ

ಈವರೆಗೆ ಆಸ್ಟ್ರೇಲಿಯಾ ವಿರುದ್ಧ ಭಾರತದ ನೆಲದಲ್ಲಿ 28 ಪಂದ್ಯಗಳನ್ನ ಆಡಿರೋ ಕೊಹ್ಲಿ 1429 ರನ್​ಗಳಿಸಿದ್ದಾರೆ. ಬರೋಬ್ಬರಿ 57.16ರ ಸರಾಸರಿಯಲ್ಲಿ ರನ್​ಗಳಿಸಿರೋ ಕೊಹ್ಲಿ, 5 ಸೆಂಚುರಿ, 8 ಹಾಫ್​ ಸೆಂಚುರಿ ಸಿಡಿಸಿದ್ದಾರೆ. ಒಟ್ಟಿನಲ್ಲಿ ಆಸಿಸ್​ ವಿರುದ್ಧ ಅದ್ಭುತ ಟ್ರ್ಯಾಕ್​ ರೆಕಾರ್ಡ್​ ಹೊಂದಿರೋ ಕೊಹ್ಲಿ, ಕಾಂಗರೂಗಳ ಪಾಲಿಗೆ ವಿಲನ್​ ಆಗಿದ್ರೆ, ಅಸಂಖ್ಯ ಭಾರತೀಯರ ಪಾಲಿನ ಭರವಸೆಯಾಗಿದ್ದಾರೆ. ಈ ಬಾರಿಯ ವಿಶ್ವಕಪ್​ನಲ್ಲಿ ಕೊಹ್ಲಿಯ ಹೋರಾಟದಿಂದಲೇ ಚೆನ್ನೈನಲ್ಲಿ ಆಸಿಸ್​ ವಿರುದ್ಧವೇ ಟೀಮ್​ ಇಂಡಿಯಾ ಗೆಲುವಿನ ಅಕೌಂಟ್​ ಓಪನ್​ ಮಾಡಿತ್ತು. ಇದೀಗ ಅಂತಿಮ ಫೈಟ್​ನಲ್ಲೂ ಆಸಿಸ್​ ಎದುರಾಳಿಯಾಗಿದ್ದು, ಕೊಹ್ಲಿ ಆರ್ಭಟಿಸಲಿ ಅನ್ನೋದಯ ಫ್ಯಾನ್ಸ್ ಆಶಯ

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಆಸಿಸ್​ ಟಾರ್ಗೆಟ್​ ಒಬ್ಬನೇ ಒಬ್ಬ.. ಟೀಂ ಆಸ್ಟ್ರೇಲಿಯಾಗೆ ಭಾರತದ ಈ ಆಟಗಾರ ಅಂದರೆ ಭಯ..!

https://newsfirstlive.com/wp-content/uploads/2023/10/AUS-3.jpg

Load More