/newsfirstlive-kannada/media/post_attachments/wp-content/uploads/2025/06/RABADA_SMITH.jpg)
ಐಸಿಸಿ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಮಾರಕ ಬೌಲಿಂಗ್​ ದಾಳಿಗೆ ಆಸ್ಟ್ರೇಲಿಯಾ ಟೀಮ್ ಥಂಡಾ ಹೊಡೆದಿದೆ. ಹರಿಣಗಳ ಏಟಿಗೆ ಆಸಿಸ್​ ಕೇವಲ 212 ರನ್​ಗೆ ಆಲೌಟ್​ ಆಗಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಕಗಿಸೊ ರಬಾಡ 5 ವಿಕೆಟ್​ ಕಬಳಿಸಿ ಮಿಂಚಿದರು.
ಲಂಡನ್​ನ ಲಾರ್ಡ್ಸ್​ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್​ ಚಾಂಪಿಯನ್​​ಶಿಪ್​ ಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ಟೆಂಬಾ ಬವುಮಾ ಟಾಸ್ ಗೆದ್ದು ಫೀಲ್ಡಿಂಗ್ ತೆಗೆದುಕೊಂಡರು. ಇದರಿಂದ ಆಸ್ಟ್ರೇಲಿಯಾ ತಂಡ ಮೊದಲ ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಆರಂಭಿಕರಾಗಿ ಕ್ರೀಸ್​ಗೆ ಆಗಮಿಸಿದ ಉಸ್ಮಾನ್ ಖವಾಜಾ, ಮಾರ್ನಸ್ ಲ್ಯಾಬುಸ್ಚಾಗ್ನೆ ದೊಡ್ಡ ವೈಫಲ್ಯ ಅನುಭವಿಸಿದರು.
ಉಸ್ಮಾನ್ ಖವಾಜಾ ಡಕೌಟ್ ಆದರೆ, ಮಾರ್ನಸ್ ಲ್ಯಾಬುಸ್ಚಾಗ್ನೆ 17 ರನ್​ಗೆ ವಿಕೆಟ್​ ಒಪ್ಪಿಸಿದರು. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬಂದ ಗ್ರೀನ್,​ ರಬಾಡ ಅವರ ಬೌಲಿಂಗ್​ನಲ್ಲಿ ಕ್ಯಾಚ್ ಕೊಟ್ಟರು. ಬಳಿಕ ಬಂದ ಅನುಭವಿ ಆಟಗಾರ ಸ್ಟೀವ್ ಸ್ಮಿತ್ ತಂಡಕ್ಕೆ ಕೊಂಚ ಆಸರೆ ಆದರು. ಪಂದ್ಯದಲ್ಲಿ 112 ಬಾಲ್​ಗಳನ್ನು ಎದುರಿಸಿದ ಸ್ಟೀವ್ ಸ್ಮಿತ್, 10 ಬೌಂಡರಿಗಳಿಂದ 66 ರನ್​ ಗಳಿಸಿ ಔಟ್ ಆದರು.
/newsfirstlive-kannada/media/post_attachments/wp-content/uploads/2025/06/RABADA.jpg)
ಬ್ಯೂ ವೆಬ್ಸ್ಟರ್ ( Beau Webster) ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ಮಾಡಿ 92 ಬಾಲ್​ಗಳಲ್ಲಿ 72 ರನ್​ ಗಳಿಸಿ ಆಸ್ಟ್ರೇಲಿಯಾದ ಮಾನ ಕಾಪಾಡಿದರು. ಉಳಿದಂತೆ ಯಾವ ಬ್ಯಾಟರ್​ ಕೂಡ 23 ರನ್​ಗಳ ಗಡಿ ದಾಟುವ ಸಾಹಸ ಮಾಡಲೇ ಇಲ್ಲ. ಹೀಗಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ 212 ರನ್​ಗೆ ಆಲೌಟ್​ ಆಯಿತು.
ಮೊದಲ ದಿನವೇ ಆಸ್ಟ್ರೇಲಿಯಾ ಆಟಗಾರರ ಆಲೌಟ್​ ಆಗಿರುವ ಬೆನಲ್ಲೇ ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ಆರಂಭ ಮಾಡಿದೆ. ಓಪನರ್ಸ್​ ಐಡೆನ್ ಮಾರ್ಕ್ರಾಮ್, ರಿಯಾನ್ ರಿಕಲ್ಟನ್ ಉತ್ತಮ ಆರಂಭ ಏನೂ ಪಡೆಯಲಿಲ್ಲ. ಆಸಿಸ್​ ಓಪನರ್ಸ್​ ಅಂತೆ ಮಾರ್ಕ್ರಾಮ್ ಡಕೌಟ್ ಆದರೆ, ರಿಕಲ್ಟನ್ 16 ರನ್​ಗೆ ಕ್ಯಾಚ್ ಕೊಟ್ಟರು. ಸದ್ಯ ಆಫ್ರಿಕಾ ತಂಡ 43 ರನ್​ಗೆ ಪ್ರಮುಖವಾದ 4 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ ಎನ್ನಬಹುದು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us