ಸೆಮಿಫೈನಲ್​​ ಕದನ; ಭಾರತಕ್ಕೆ ಹೆಚ್ಚಾದ ಆಘಾತ; 35 ಓವರ್​ಗೆ ಆಸ್ಟ್ರೇಲಿಯಾ 190 ರನ್​​!

author-image
Ganesh Nachikethu
Updated On
ಸೆಮಿಫೈನಲ್​​ ಕದನ; ಭಾರತಕ್ಕೆ ಹೆಚ್ಚಾದ ಆಘಾತ; 35 ಓವರ್​ಗೆ ಆಸ್ಟ್ರೇಲಿಯಾ 190 ರನ್​​!
Advertisment
  • ದುಬೈ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಸೆಮಿಫೈನಲ್
  • ಸೆಮಿಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದಿಂದ ಶುಭಾರಂಭ
  • ತಮ್ಮ ಘನತೆಗೆ ತಕ್ಕ ಆಟವನ್ನೇ ಶುರು ಮಾಡಿದ ಆಸ್ಟ್ರೇಲಿಯಾ ಟೀಮ್​

ದುಬೈ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಸೆಮಿಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಶುಭಾರಂಭ ಮಾಡಿದೆ. ಟ್ರಾವಿಸ್ ಹೆಡ್‌ ತಮ್ಮ ಘನತೆಗೆ ತಕ್ಕ ಆಟವನ್ನೇ ಶುರು ಮಾಡಿದರು.

ಇನ್ನಿಂಗ್ಸ್​ ಆರಂಭದಲ್ಲೇ ಬಿರುಸಿನ ಬ್ಯಾಟಿಂಗ್ ನಡೆಸಿದ ಟ್ರಾವಿಸ್‌ ಹೆಡ್‌ ಭಾರತಕ್ಕೆ ತಲೆನೋವಾಗಿ ಪರಿಣಮಿಸಿದರು. ಇವರು ಟೀಮ್​ ಇಂಡಿಯಾ ಬೌಲರ್​ಗಳನ್ನು ಕಾಡಿದರು. ಮೊಹಮ್ಮದ್‌ ಶಮಿ ತಮ್ಮ ಮೊದಲ ಓವರ್‌ನಲ್ಲೇ ಟ್ರಾವಿಸ್ ಹೆಡ್‌ ಕ್ಯಾಚ್‌ ಕೈ ಚೆಲ್ಲಿದ್ದರು. ಇದಾದ ಬಳಿಕ ಹೆಡ್​ ಬ್ಯಾಟಿಂಗ್​ ಮತ್ತಷ್ಟು ಜೋರಾಗಿತ್ತು.

ಆಸೀಸ್ ಪರ ಓಪನಿಂಗ್​ ಮಾಡಿದ ಮತ್ತೋರ್ವ ಬ್ಯಾಟರ್​ ಕೂಪರ್ ಕಾನೊಲಿ ಸೊನ್ನೆ ಸುತ್ತಿದರು. ಈ ಅವಕಾಶ ಬಳಸಿಕೊಳ್ಳುವಲ್ಲಿ ಕೂಪರ್ ಕಾನೊಲಿ ವಿಫಲರಾದರು. ಟ್ರಾವಿಸ್‌ ಹೆಡ್ ದೊಡ್ಡ ಇನಿಂಗ್ಸ್ ಕಟ್ಟುವ ಸೂಚನೆ ನೀಡುತ್ತಿದ್ದಂತೆಯೇ ವರುಣ್​ ಚಕ್ರವರ್ತಿ ಖೆಡ್ಡಾ ತೋಡಿದರು. ಇದಕ್ಕೂ ಮುನ್ನ ಹೆಡ್​​ ಕುಲ್ದೀಪ್​ ಯಾದವ್​​ ಮತ್ತು ಹಾರ್ದಿಕ್​ ಪಾಂಡ್ಯ ಸಿಕ್ಸರ್​​ ಬಾರಿಸಿ ಅಬ್ಬರಿಸಿದ್ದರು.

publive-image

ಮಾರ್ನಸ್ ಲಂಬುಶೇನ್ ಮತ್ತು ಜೋಶ್​ ಇಂಗ್ಲೀಷ್​ ಕೂಡ ಕೆಲ ಕಾಲ ಕ್ರೀಸ್​ನಲ್ಲಿದ್ದರು. ಒಂದೆಡೆ ಮಾರ್ನಸ್ ಲಂಬುಶೇನ್ 29 ರನ್​ ಗಳಿಸಿದರೆ, ಜೋಶ್​ ಇಂಗ್ಲೀಷ್​​ 11 ರನ್​ಗೆ ವಿಕೆಟ್​ ಒಪ್ಪಿಸಿದರು.

ಸದ್ಯ ಸ್ಟೀವ್​ ಸ್ಮಿತ್​ ಕ್ರೀಸ್​ನಲ್ಲಿ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ. ಇವರು 1 ಸಿಕ್ಸರ್​​, 4 ಫೋರ್​ ಸಮೇತ 70 ರನ್​ ಚಚ್ಚಿದ್ದಾರೆ. ಅಲೆಕ್ಸ್ ಕ್ಯಾರಿ 1 ಸಿಕ್ಸರ್​​, 5 ಫೋರ್​ನೊಂದಿಗೆ 33 ರನ್​​ ಗಳಿಸಿದರು. 35 ಓವರ್​ಗೆ ಆಸ್ಟ್ರೇಲಿಯಾ 4 ವಿಕೆಟ್​ ನಷ್ಟಕ್ಕೆ 190 ರನ್​ ಕಲೆ ಹಾಕಿದೆ.

ಇದನ್ನೂ ಓದಿ:ಟೀಮ್​ ಇಂಡಿಯಾ ನಿಟ್ಟುಸಿರು; ಟ್ರಾವಿಸ್‌ ಹೆಡ್‌ಗೆ ಖೆಡ್ಡಾ ತೋಡಿದ ವರುಣ್​​ ಚಕ್ರವರ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment