ಎಲ್ಲವನ್ನೂ ಹಂಚಿಕೊಂಡ ಅವಳಿ ಸಹೋದರಿಯರು ಪತಿಯನ್ನು ಹಂಚಿಕೊಳ್ಳಲು ರೆಡಿ? ಏನಿದು ಒನ್​ ಬೈ ಟು ಮ್ಯಾರೇಜ್​ ಸ್ಟೋರಿ

author-image
Gopal Kulkarni
Updated On
ಎಲ್ಲವನ್ನೂ ಹಂಚಿಕೊಂಡ ಅವಳಿ ಸಹೋದರಿಯರು ಪತಿಯನ್ನು ಹಂಚಿಕೊಳ್ಳಲು ರೆಡಿ? ಏನಿದು ಒನ್​ ಬೈ ಟು ಮ್ಯಾರೇಜ್​ ಸ್ಟೋರಿ
Advertisment
  • ಆಸ್ಟ್ರೇಲಿಯಾದಲ್ಲಿ ವಿಚಿತ್ರ ಆಸೆ ವ್ಯಕ್ತಪಡಿಸಿದ ಅವಳಿ ಸಹೋದರಿಯರು
  • ಬಾಲ್ಯದಿಂದಲೂ ಒಟ್ಟಿಗೆ, ಈಗ ಸಂಬಂಧದಲ್ಲಿಯೂ ಒಟ್ಟಿಗೆ
  • ಯಾರೇನೇ ಅಂದರೂ ಡೋಂಟ್ ಕೇರ್ ಎನ್ನುತ್ತಿರುವ ಅವಳಿ ಸಹೋದರಿಯರು

ಅವಳಿ ಸಹೋದರಿಯರು, ಅವಳಿ ಸಹೋದರರನ್ನು ಮದುವೆಯಾದ ಸುದ್ದಿ ಕೇಳಿರಬಹುದು.ಆದರೆ ಇಲ್ಲಿ ಅವಳಿ ಸಹೋದರಿಯರು ಒಬ್ಬನನ್ನೇ ಮದುವೆಯಾಗುವ ಇಚ್ಚೆ ವ್ಯಕ್ತಪಡಿಸಿದ್ದಾರೆ.ಆಸ್ಟ್ರೇಲಿಯಾದಲ್ಲಿ ವಾಸಿಸುತ್ತಿರುವ 20 ವರ್ಷದ ಏಪ್ರಿಲ್ ಮತ್ತು ಅಮೆಲಿಯಾ ಮ್ಯಾಡಿಸನ್ ಒಬನನ್ನೆ ಮದುವೆಯಾಗುವ ಇಚ್ಚೆ ವ್ಯಕ್ತಪಡಿಸಿದ್ದಾರೆ.

ಬಾಲ್ಯದಿಂದಲೂ ಒಟ್ಟಿಗೆ, ಈಗ ಸಂಬಂಧದಲ್ಲಿಯೂ ಒಟ್ಟಿಗೆ
ಏಪ್ರಿಲ್ ಮತ್ತು ಅಮೆಲಿಯಾ ಅವರ ಬಾಲ್ಯದ ಜೀವನ ತುಂಬಾ ವಿಶೇಷವಂತೆ. ಅವರು ತಮ್ಮ ಬಾಲ್ಯದಲ್ಲಿ ಬಾರ್ಬಿ ಡಾಲ್​, ಬೈಸಿಕಲ್​, ಬಟ್ಟೆ ಮತ್ತು ಮೇಕಪ್​ ಎಲ್ಲವನ್ನೂ ಹಂಚಿಕೊಂಡಿದ್ದಾರಂತೆ. ಈಗ ಇಬ್ಬರೂ ಒಬನನ್ನೇ ಸಂಗಾತಿಯಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಇದರಲ್ಲಿ ಯಾವುದೇ ವಿಶೇಷ ಇಲ್ಲ ಅಂತಾರೆ ಅವಳಿ ಸಹೋದರಿಯರು. ಏಕೆಂದರೆ ಅವರು ಯಾವಾತ್ತಿಗೂ ಎಲ್ಲದರಲ್ಲೂ ಒಂದೇ ರೀತಿಯ ಅಭಿರುಚಿ ಉಳ್ಳವರು ಅಂತೆ.

publive-image

ಇದನ್ನೂ ಓದಿ: ಪ್ರೀತಿಗೆ ಸೇತುವೆಯಾದ ಒಂದು ಚಾಕೊಲೇಟ್​.. ಸಿನಿಮಾ ಮೀರಿಸುತ್ತೆ ಅಕ್ಷರ್ ಪಟೇಲ್ ಲವ್​ ಸ್ಟೋರಿ

'ಪರಿಪೂರ್ಣ' ಸಂಗಾತಿಗಾಗಿ ಹುಡುಕಲಾಗುತ್ತಿದೆ
ನಾವಿಬ್ಬರೂ ಒಂದೇ ಹುಡುಗನನ್ನು ಇಷ್ಟಪಡುತ್ತೇವೆ. ಅವನು ಎತ್ತರ, ಹ್ಯಾಂಡ್ಸಮ್ ಆಗಿರಬೇಕು ಮತ್ತು ಉತ್ತಮ ಹಾಸ್ಯ ಪ್ರಜ್ಞೆ ಹೊಂದಿರಬೇಕು ಅಂತಾರೆ. ಬೇರೆ ಬೇರೆ ಬಾಯ್‌ಫ್ರೆಂಡ್‌ ಹೊಂದಿದ್ರೆ ಸಮಸ್ಯೆ ಅಂತಾರೆ ಅವಳಿ ಸಹೋದರಿಯರು. ನಮ್ಮ ನಡುವೆ ಚಿಕ್ಕಂದಿನಿಂದ ಆಳವಾದ, ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಬಾಂಧವ್ಯವಿದೆ. ನಾವು ಪ್ರತ್ಯೇಕ ಗೆಳೆಯರನ್ನು ಹೊಂದಲು ಪ್ರಯತ್ನಿಸಿದೆವು. ಆದರೆ ನಮ್ಮ ಬಾಂಧವ್ಯ ನೋಡಿ ಬಾಯ್​​ಫ್ರೆಂಡ್​​ ಗಳು ಅಸೂಯೆಪಟ್ಟರು ಅಂತಾರೆ ಅವಳಿ ಸಹೋದರಿಯರು.

ಇದನ್ನೂ ಓದಿ:ಮಕ್ಕಳಿಗೆ ತಾವೇ ಅಡುಗೆ ಮಾಡ್ತಾರೆ ಕೊಹ್ಲಿ, ಅನುಷ್ಕಾ.. ಸ್ಟಾರ್​ ಸೆಲೆಬ್ರಿಟಿ ಕಾಳಜಿ ಹೆಂಗಿದೆ ಗೊತ್ತಾ?

ಈಗ ಒಬ್ಬನೇ ಗೆಳೆಯನನ್ನು ಹಂಚಿಕೊಳ್ಳುತ್ತೇವೆ
ಈ ಸಮಸ್ಯೆಯನ್ನು ಪರಿಹರಿಸಲು, ಸಹೋದರಿಯರಿಬ್ಬರೂ ಈಗ ಒಬ್ಬನೇ ಗೆಳೆಯನನ್ನು ಹಂಚಿಕೊಳ್ಳಲು ನಿರ್ಧರಿಸಿದ್ದಾರೆ, ಇದರಿಂದ ಅವರ ಬಾಂಧವ್ಯದಲ್ಲಿ ಯಾವುದೇ ತೊಂದರೆಯಾಗುವುದಿಲ್ಲವಂತೆ. ಒಬ್ಬನೇ ಬಾಯ್​ಫ್ರೆಂಡ್ ಇದ್ದರೆ ನಾವು ಮೂವರೂ ಒಟ್ಟಿಗೆ ಸಮಯ ಕಳೆಯಬಹುದು, ತಿರುಗಾಡಬಹುದು ಮತ್ತು ಮಾತನಾಡಬಹುದು, ಇದರಿಂದ ಯಾರಿಗೂ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಅಂತಾರೆ.
ಜನರ ಅಭಿಪ್ರಾಯಕ್ಕೆ ತಲೆಕೆಡಿಸಿಕೊಳ್ಳಬೇಡಿ. ಜನರು ತಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದನ್ನು ನಾವು ಲೆಕ್ಕಿಸುವುದಿಲ್ಲ. ಜನ ಸಾಮಾನ್ಯವಾಗಿ ಅವರಿಗೆ ಅರ್ಥವಾಗದ ವಿಷಯಗಳ ಬಗ್ಗೆ ತೀರ್ಪು ನೀಡುತ್ತಾರೆ. ಆದರೆ ಇದು ನಮಗೆ ಸರಿಹೊಂದುತ್ತದೆ ಮತ್ತು ಇದು ನಮ್ಮ ಜೀವನ. ನಾವು ಸಂತೋಷವಾಗಿದ್ದರೆ ಮತ್ತು ಯಾರಿಗೂ ಹಾನಿ ಮಾಡದಿದ್ದರೆ, ನಾವು ಇತರರ ಅಭಿಪ್ರಾಯಗಳಿಗೆ ಡೋಂಟ್ ಕೇರ್ ಅಂತಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment