/newsfirstlive-kannada/media/post_attachments/wp-content/uploads/2024/10/IND-vs-AUS.jpg)
ನಿರೀಕ್ಷೆಯಂತೆ ಗಬ್ಬಾ ಟೆಸ್ಟ್​​ಗೆ ಮಳೆರಾಯನ ಕಾಟ ಶುರುವಾಗಿದೆ. ಮಳೆಯಿಂದಾಗಿ ಪಂದ್ಯ ನಿಲ್ಲಿಸಿದ್ದು, ಅಭಿಮಾನಿಗಳಿಗೆ ನಿರಾಸೆ ಆಗಿದೆ. ಹವಾಮಾನ ಇಲಾಖೆ ಮೊದಲೇ ಮಳೆ ಬರುವ ಸೂಚನೆಯನ್ನು ನೀಡಿತ್ತು. ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಟೀಂ ಇಂಡಿಯಾ ಆಟಗಾರರು ನಿರಾಸೆಯಿಂದ ಪೆವಿಲಿಯನ್​​ಗೆ ವಾಪಸ್ ಆಗಿದ್ದಾರೆ.
ಇಂದು ಬೆಳಗ್ಗೆ ಆಸ್ಟ್ರೇಲಿಯಾದ ಬ್ರಿಸ್ಬೆನ್​​ನಲ್ಲಿ ಬಾರ್ಡರ್​ ಗವಾಸ್ಕರ್​​ ಸರಣಿಯ ​ಮೂರನೇ ಟೆಸ್ಟ್ ಆರಂಭವಾಗಿದೆ. ಟಾಸ್​ ಗೆದ್ದಿರುವ ಭಾರತ ತಂಡ ಎದುರಾಳಿಯನ್ನು ಬ್ಯಾಟಿಂಗ್​ಗೆ ಆಹ್ವಾನಿಸಿದೆ. ಅಂತೆಯೇ ಬ್ಯಾಟಿಂಗ್ ಕೂಡ ಶುರುವಾಗಿತ್ತು. 13.2 ಓವರ್ ಎದುರಿಸಿರುವ ಆಸ್ಟ್ರೇಲಿಯಾ ವಿಕೆಟ್​ ನಷ್ಟವಿಲ್ಲದೇ 28 ರನ್​ಗಳಿಸಿದೆ.
ಆಸ್ಟ್ರೇಲಿಯಾ ಪರ ಖವಾಜ 19, ನಥನ್ 4 ರನ್​ಗಳಿಸಿ ಆಡ್ತಿದ್ದಾರೆ. ಟೀಂ ಇಂಡಿಯಾ ಪರ ಬುಮ್ರಾ 6, ಸಿರಾಜ್ 4, ಆಕಾಶ್ ದೀಪ್ 3.2 ಓವರ್​ ಮಾಡಿದ್ದಾರೆ. ಭಾರತ ವಿಕೆಟ್ ಬೇಟೆಯಲ್ಲಿದ್ದರೆ, ಆಸ್ಟ್ರೇಲಿಯಾ ಬಿಗ್​ಸ್ಕೋರ್​ ಟಾರ್ಗೆಟ್ ಇಟ್ಕೊಂಡಿದೆ. ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಹಿನ್ನೆಲೆಯಲ್ಲಿ ಎರಡೂ ತಂಡಗಳಿಗೆ ಗೆಲುವು ಅನಿವಾರ್ಯ.
ಭಾರತ ಮೊದಲ ಟೆಸ್ಟ್ ಗೆದ್ದುಕೊಂಡರೆ, ಎರಡನೇ ಟೆಸ್ಟ್​ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದಿದೆ. ಇನ್ನುಳಿದ ಮೂರು ಟೆಸ್ಟ್​ಗಳಲ್ಲೂ ಭಾರತ ಗೆದ್ದರೆಷ್ಟೇ, ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ಗೆ ಪ್ರವೇಶ ಮಾಡಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ