ಟಾಸ್ ​​ಗೆದ್ದ ರೋಹಿತ್ ಶರ್ಮಾ; ಟೀಂ ಇಂಡಿಯಾ ಪ್ಲೇಯಿಂಗ್11ನಿಂದ ಇಬ್ಬರಿಗೆ ಗೇಟ್​ಪಾಸ್​..!

author-image
Ganesh
Updated On
ಟಾಸ್ ​​ಗೆದ್ದ ರೋಹಿತ್ ಶರ್ಮಾ; ಟೀಂ ಇಂಡಿಯಾ ಪ್ಲೇಯಿಂಗ್11ನಿಂದ ಇಬ್ಬರಿಗೆ ಗೇಟ್​ಪಾಸ್​..!
Advertisment
  • ಭಾರತ ಆಸ್ಟ್ರೇಲಿಯಾ ನಡುವೆ ಮೂರನೇ ಟೆಸ್ಟ್ ಪಂದ್ಯ
  • ಟಾಸ್​ ಸೋತ ಆಸ್ಟ್ರೇಲಿಯಾ ಮೊದಲು ಬ್ಯಾಟಿಂಗ್​​ಗೆ ಬಂದಿದೆ
  • ಪ್ಲೇಯಿಂಗ್​-11ನಲ್ಲಿ ಸ್ಥಾನ ಪಡೆದ ಇಬ್ಬರು ಆಟಗಾರರು ಯಾರು?

ಬ್ರಿಸ್ಬೇನ್‌ನಲ್ಲಿ ಗಬ್ಬಾ ಟೆಸ್ಟ್ ಆರಂಭವಾಗಿದ್ದು, ಟಾಸ್​ ಗೆದ್ದಿರುವ ಟೀಂ ಇಂಡಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲ ಪಂದ್ಯ ಗೆದ್ದು ಎರಡನೇ ಟೆಸ್ಟ್ ಸೋತಿರುವ ಟೀಂ ಇಂಡಿಯಾಗೆ ವಿಶ್ವಟೆಸ್ಟ್​ ಚಾಂಪಿಯನ್​ಶಿಪ್ ಹಿನ್ನೆಲೆಯಲ್ಲಿ ಮೂರನೇ ಟೆಸ್ಟ್​ ಗೆಲ್ಲಲೇಬೇಕಿದೆ.

ಮೂರನೇ ಟೆಸ್ಟ್​ನಲ್ಲಿ ಟೀಂ ಇಂಡಿಯಾ ಪ್ಲೇಯಿಂಗ್ ಇಲೆವೆನ್​ನಲ್ಲಿ ಬದಲಾವಣೆ ಮಾಡಿಕೊಂಡಿದೆ. ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ ಹಾಗೂ ಹರ್ಷಿತ್ ರಾಣಾಗೆ ಕೊಕ್ ನೀಡಿದೆ. ಅವರ ಬದಲಿಗೆ ಆಕಾಶ್​ ದೀಪ್, ಆಲ್​ರೌಂಡರ್ ರವೀಂದ್ರ ಜಡೇಜಾರನ್ನು ಕಣಕ್ಕೆ ಇಳಿಸಿದೆ.

ತಂಡದಲ್ಲಿ ಯಾಱರು..?
ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ರಿಷಬ್ ಪಂತ್, ರೋಹಿತ್ ಶರ್ಮಾ, ರವಿಂದ್ರ ಜಡೇಜಾ, ನಿತಿಶ್ ಕುಮಾರ್ ರೆಡ್ಡಿ, ಜಸ್​​ಪ್ರಿತ್ ಬುಮ್ರಾ, ಮೊಹ್ಮದ್ ಸಿರಾಜ್, ಆಕಾಶ್ ದೀಪ್.

ಇದನ್ನೂ ಓದಿ:BBK11: ಬಿಗ್​ಬಾಸ್​ ಸ್ಪರ್ಧಿಗಳಿಗೆ ಬಿಗ್​ ಶಾಕ್​; ಈ ವಾರ ಡಬಲ್​ ಎಲಿಮಿನೇಷನ್ ಫಿಕ್ಸ್​?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment