/newsfirstlive-kannada/media/post_attachments/wp-content/uploads/2025/01/NITISH-RANA.jpg)
ಸಿಡ್ನಿ​ಯಲ್ಲಿ ನಡೆಯುತ್ತಿರುವ ಕೊನೆಯ ಟೆಸ್ಟ್​ ರೋಚಕ ಘಟ್ಟ ತಲುಪಿದೆ. ಮೊದಲ ಇನ್ನಿಂಗ್ಸ್​ನಲ್ಲಿ ಟೀಂ ಇಂಡಿಯಾ ಮೇಲುಗೈ ಸಾಧಿಸಿದೆ. ಎದುರಾಳಿ ಆಸ್ಟ್ರೇಲಿಯಾವನ್ನು 181 ರನ್​​ಗೆ ಕಟ್ಟಿಹಾಕುವಲ್ಲಿ ಭಾರತ ತಂಡ ಯಶಸ್ವಿಯಾಗಿದೆ.
ಮೊದಲ ಇನ್ನಿಂಗ್ಸ್​ನಲ್ಲಿ ಭಾರತ ತಂಡ 185 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನುಹತ್ತಿದ್ದ ಆಸ್ಟ್ರೇಲಿಯಾ ತಂಡ 181 ರನ್​ಗಳಿಸಿ ಆಲೌಟ್ ಆಗಿದೆ. ಬುಮ್ರಾ ಗಾಯದ ಸಮಸ್ಯೆ ಕಾಡಿದೆ. ಆದರೂ ಎರಡು ವಿಕೆಟ್ ಕಿತ್ತುಕೊಟ್ಟು ಪಂದ್ಯದಿಂದ ಹೊರಗುಳಿದಿದ್ದಾರೆ. ನಂತರ ಬುಮ್ರಾ ಅವರ ಕೆಲಸವನ್ನು ಸಿರಾಜ್, ಪ್ರಸಿದ್ಧ್ ಕೃಷ್ಣ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2025/01/Bumrah-1.jpg)
ಸಿರಾಜ್ ಹಾಗೂ ಪ್ರಸಿದ್ಧ್ ಕೃಷ್ಣ ತಲಾ ಮೂರು ವಿಕೆಟ್ ಕಿತ್ತು ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​​ಗಳ ಬೆನ್ನೆಲುಬು ಮುರಿಯುವಲ್ಲಿ ಯಶಸ್ವಿಯಾದರು. ಇನ್ನು ನಿತಿಶ್ ರೆಡ್ಡಿ ಕೂಡ 2 ವಿಕೆಟ್ ಕಿತ್ತು ಭಾರತ ತಂಡದ ಮುನ್ನಡೆಗೆ ಸಹಕರಿಸಿದರು. ಸಿಡ್ನಿ ಟೆಸ್ಟ್ ಪಂದ್ಯವನ್ನು ಭಾರತ ಗೆಲ್ಲಲೇಬೇಕಾದ ಸ್ಥಿತಿಯಲ್ಲಿದೆ. ಈಗಾಗಲೇ ಆಸ್ಟ್ರೇಲಿಯಾ ಎರಡು ಟೆಸ್ಟ್​ ಗೆದ್ದು ಮುನ್ನಡೆ ಕಾಯ್ದುಕೊಂಡಿದೆ. ಒಂದು ಪಂದ್ಯ ಡ್ರಾ ಆಗಿದೆ. ಹೀಗಾಗಿ ಬಾರ್ಡರ್ ಗವಾಸ್ಕರ್​ ಟ್ರೋಫಿಯನ್ನು ಸಮಬಲ ಮಾಡಿಕೊಳ್ಳೋದು ಭಾರತಕ್ಕೆ ಇರುವ ಏಕೈಕ ದಾರಿ. ಜೊತೆಗೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​​ ಫೈನಲ್ ಟಿಕೆಟ್ ಸಿಗಬೇಕು ಅಂದರೂ ಗೆಲ್ಲಲೇಬೇಕಾದ ಅನಿವಾರ್ಯತೆ ತಂಡಕ್ಕೆ ಇದೆ.
ಇದನ್ನೂ ಓದಿ:ದೇಶದಲ್ಲಿ 5000 ರೂಪಾಯಿ ನೋಟುಗಳು..! ಮತ್ತೆ ಚಲಾವಣೆಗೆ ಬರ್ತಿದ್ಯಾ? RBI ಮಾಹಿತಿ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us