/newsfirstlive-kannada/media/post_attachments/wp-content/uploads/2024/12/ROHIT_TEAM.jpg)
ಬಾರ್ಡರ್ ಗವಾಸ್ಕರ್ ಟ್ರೋಫಿಯ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬಲಿಷ್ಠ ಬೌಲಿಂಗ್ಗೆ ಟೀಮ್ ಇಂಡಿಯಾ ಶರಣಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಪೇಸ್ ಬೌಲರ್ ಮಿಚೆಲ್ ಸ್ಟಾರ್ಕ್ ಹಾಗೂ 2ನೇ ಇನ್ನಿಂಗ್ಸ್ನಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಅವರ ಬೌಲಿಂಗ್ ಎದುರಿಸಲಾಗದೇ ರೋಹಿತ್ ಶರ್ಮಾ ಪಡೆ ಸೋಲೋಪ್ಪಿಕೊಂಡಿದೆ. ಈ ಮೂಲಕ ಸರಣಿಯಲ್ಲಿ ಎರಡು ತಂಡಗಳು 1-1 ರಿಂದ ಸಮಬಲ ಸಾಧಿಸಿವೆ.
ಅಡಿಲೇಡ್ನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ 2ನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಟಿಯಾ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ಮಿಚೆಲ್ ಸ್ಟಾರ್ಕ್ ಅವರ ಬೌಲಿಂಗ್ ಮುಂದೆ ಬೆಂಡಾಗಿತ್ತು. ಭಾರತ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಅನುಭವಿ ಬ್ಯಾಟರ್ಗಳಾದ ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಪಂತ್, ಶುಭಮನ್ ಗಿಲ್ ಹಾಗೇ ಬಂದು ಹೀಗೆ ಪೆವಿಲಿಯನ್ಗೆ ನಡೆದರು. ಭಾರತದ ಪರ ಬೌಲರ್ಸ್ ಕೂಡ ಸರಿಯಾದ ಬ್ಯಾಟಿಂಗ್ ಮಾಡಲಾಗಲಿಲ್ಲ. ಹೀಗಾಗಿ 180 ರನ್ಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತ್ತು. ಈ ಇನ್ನಿಂಗ್ಸ್ನಲ್ಲಿ ಮಿಚೆಲ್ ಸ್ಟಾರ್ಕ್ 6 ವಿಕೆಟ್ ಪಡೆದು ಸಂಭ್ರಮಿಸಿದ್ದರು.
ಇದನ್ನೂ ಓದಿ: Bigg Boss; ‘ನಾವು ಒಳ್ಳೆ ಮನುಷ್ಯರಲ್ಲ, ಕೆಟ್ಟೋರೇ’ ರಜತ್- ಗೋಲ್ಡ್ ಸುರೇಶ್ ಮಧ್ಯೆ ಮಾತಿನ ಸಮರ
ನಂತರ ಬ್ಯಾಟಿಂಗ್ ಮಾಡಿದ್ದ ಆಸಿಸ್ ಪಡೆ, ಇದರಲ್ಲಿ ಟ್ರಾವೀಸ್ ಹೆಡ್ ಅವರ ಸೆಂಚುರಿ ನೆರವಿನಿಂದ 337 ರನ್ಗಳನ್ನು ಕಲೆ ಹಾಕಿ ಎಲ್ಲ ವಿಕೆಟ್ಗಳನ್ನ ಕಳೆದುಕೊಂಡಿತ್ತು. ಈ ವೇಳೆ ಭಾರತದ ಪರ ಬೂಮ್ರಾ ಹಾಗೂ ಸಿರಾಜ್ ತಲಾ 4 ವಿಕೆಟ್ ಪಡೆದು ತಂಡಕ್ಕೆ ನೆರವಾಗಿದ್ದರು. ಹೀಗಾಗಿ 157 ರನ್ಗಳ ಮುನ್ನಡೆಯನ್ನು ಕಮಿನ್ಸ್ ಪಡೆ ಪಡೆದುಕೊಂಡಿತ್ತು.
ನಂತರ 2ನೇ ಇನ್ನಿಂಗ್ಸ್ ಪ್ರಾರಂಭಿಸಿದ್ದ ಭಾರತ ವಿಫಲವಾದ ಬ್ಯಾಟಿಂಗ್ನಿಂದ ಕೇವಲ 175 ರನ್ಗೆ ಇಂದು ಆಲೌಟ್ ಆಯಿತು. ಇದರಿಂದ ಕೇವಲ 19 ರನ್ಗಳ ಗುರಿಯನ್ನು ಆಸ್ಟ್ರೇಲಿಯಾ ಟೀಮ್ ಪಡೆದಿತ್ತು. ಅತ್ಯಂತ ಸಣ್ಣ ಟಾರ್ಗೆಟ್ ಅದ ಇದನ್ನು ಆಸಿಸ್ ಓಪನರ್ ಬ್ಯಾಟರ್ಗಳಾದ ನಾಥನ್ ಮೆಕ್‌ಸ್ವೀನಿ 10 ಹಾಗೂ ಉಸ್ಮಾನ್ ಖವಾಜಾ 9 ರನ್ ಗಳಿಸುವ ಮೂಲಕ ಪಂದ್ಯ ಗೆದ್ದರು. ಈ ಸರಣಿಯಲ್ಲಿ ಎರಡೂ ತಂಡಗಳು 1-1 ರಿಂದ ಸಮವಾಗಿ ಗೆಲವು ಪಡೆದಿವೆ. ಇನ್ನು ಮೂರು ಟೆಸ್ಟ್ ಪಂದ್ಯಗಳು ಬಾಕಿ ಇವೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ