/newsfirstlive-kannada/media/post_attachments/wp-content/uploads/2025/06/Glenn_Maxwell.jpg)
ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಆಗಿರುವ ಗ್ಲೆನ್ ಮ್ಯಾಕ್ಸ್ವೆಲ್ ಅವರು ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಟಿ20 ಕ್ರಿಕೆಟ್ ಮೇಲೆ ಹೆಚ್ಚಿನ ಗಮನ ಹರಿಸುವ ಸಂಬಂಧ ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಟಾರ್ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಅವರು 2012ರಲ್ಲಿ ಅಫ್ಘಾನಿಸ್ತಾನದ ವಿರುದ್ಧದ ಏಕದಿನ ಪಂದ್ಯದಲ್ಲಿ ಡೆಬ್ಯು ಮಾಡಿದ್ದರು. ಸದ್ಯ ಟಿ20 ಕ್ರಿಕೆಟ್ ಕಡೆಗೆ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡನ್ನು ಇನ್ನಷ್ಟನ್ನೂ ಸುಧಾರಿಸಿಕೊಳ್ಳಲು ಏಕದಿನ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಅಲ್ಲದೇ ಏಕದಿನ ಕ್ರಿಕೆಟ್ನಲ್ಲೂ ಮಹತ್ವದ ದಾಖಲೆಗಳನ್ನು ಗ್ಲೆನ್ ಮ್ಯಾಕ್ಸ್ವೆಲ್ ಮಾಡಿದ್ದಾರೆ.
ಇದನ್ನೂ ಓದಿ:RCB ಗೆದ್ದರೇ ಜಿಲ್ಲೆಯ ಎಲ್ಲ ಇಂದಿರಾ ಕ್ಯಾಟೀನ್ಗಳಲ್ಲಿ ಉಚಿತ ಹೋಳಿಗೆ ಊಟ
ಇದುವರೆಗೆ 149 ಪಂದ್ಯಗಳನ್ನು ಆಡಿರುವ ಮ್ಯಾಕ್ಸ್ವೆಲ್, 136 ಇನ್ನಿಂಗ್ಸ್ಗಳಿಂದ 3,990 ರನ್ಗಳನ್ನು ಗಳಿಸಿದ್ದಾರೆ. ಅವರೇಜ್ 33.81 ಹೊಂದಿದ್ದು 126.71 ಸ್ಟ್ರೈಕ್ರೇಟ್ ಇದೆ. 23 ಹಾಫ್ಸೆಂಚುರಿ ಹಾಗೂ 4 ಶತಕಗಳನ್ನು ಬಾರಿಸಿದ್ದಾರೆ. ಅಲ್ಲದೇ 382 ಬೌಂಡರಿಗಳನ್ನು ಬಾರಿಸಿರುವ ಮ್ಯಾಕ್ಸ್ವೆಲ್ 155 ಸಿಕ್ಸರ್ಗಳನ್ನು ಒನ್ಡೇ ಮ್ಯಾಚ್ಗಳಲ್ಲಿ ಸಿಡಿಸಿದ್ದಾರೆ.
ಮ್ಯಾಕ್ಸ್ವೆಲ್ ಅವರ ಇನ್ನೊಂದು ಮಹತ್ತರವಾದ ಸಾಧನೆ ಎಂದರೆ ಭಾರತದಲ್ಲಿ ನಡೆದಿದ್ದ 2023ರ ವರ್ಲ್ಡ್ಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧದ ದ್ವಿಶತಕ ಬಾರಿಸಿದ್ದರು. ಈಗಾಗಲೇ ಏಕದಿನ ಪಂದ್ಯಗಳಲ್ಲಿ ಡಬಲ್ಹಂಡ್ರೆಡ್ ಬಾರಿಸಿದ್ದಾರೆ. ಆದರೆ ವಿಶ್ವಕಪ್ನಲ್ಲಿ ಇದುವರೆಗೂ ಯಾವ ಆಟಗಾರ ಕೂಡ ದ್ವಿಶತಕ ಬಾರಿಸಿರಲಿಲ್ಲ. ಈ ಸಾಧನೆಯನ್ನು ಮಾಡಿದ ಮೊದಲ ಬ್ಯಾಟರ್ ಎನ್ನುವ ಖ್ಯಾತಿ ಮ್ಯಾಕ್ಸ್ವೆಲ್ ಪಾಲಾಗಿತ್ತು. ಇನ್ನು 2015 ಹಾಗೂ 2023ರಲ್ಲಿ ಆಸ್ಟ್ರೇಲಿಯಾ ತಂಡ ವಿಶ್ವಕಪ್ ಗೆದ್ದ ತಂಡದ ಆಟಗಾರ ಆಗಿದ್ದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ