ರಕ್ತದಾನ ಮಾಡಿ 20 ಲಕ್ಷ ಮಕ್ಕಳ ಜೀವ ಉಳಿಸಿದ್ದ ಕರುಣಾಮಯಿ ಇನ್ನಿಲ್ಲ.. ಜೇಮ್ಸ್ ಹ್ಯಾರಿಸನ್​ ಬಗ್ಗೆ ನಿಮಗೆಷ್ಟು ಗೊತ್ತು?

author-image
Gopal Kulkarni
Updated On
ರಕ್ತದಾನ ಮಾಡಿ 20 ಲಕ್ಷ ಮಕ್ಕಳ ಜೀವ ಉಳಿಸಿದ್ದ ಕರುಣಾಮಯಿ ಇನ್ನಿಲ್ಲ.. ಜೇಮ್ಸ್ ಹ್ಯಾರಿಸನ್​ ಬಗ್ಗೆ ನಿಮಗೆಷ್ಟು ಗೊತ್ತು?
Advertisment
  • ರಕ್ತದಾನದಲ್ಲಿ ದಾಖಲೆ ಬರೆದ ಆಸ್ಟ್ರೇಲಿಯಾದ ಜೇಮ್ಸ್ ಹ್ಯಾರಿಸನ್ ಇನ್ನಿಲ್ಲ
  • ಇವರು ತಮ್ಮ ಜೀವಿತಾವಧಿಯಲ್ಲಿ ಎಷ್ಟು ಬಾರಿ ರಕ್ತದಾನ ಮಾಡಿದ್ದಾರೆ ಗೊತ್ತಾ?
  • ಇವರ ರಕ್ತದಾನದಿಂದ ಉಳಿದಿದ್ದು ಬರೋಬ್ಬರಿ 20 ಲಕ್ಷ ಕಂದಮ್ಮಗಳ ಜೀವ!

ಜೇಮ್ಸ್ ಹ್ಯಾರಿಸನ್​, ಆಸ್ಟ್ರೇಲಿಯಾದಲ್ಲಿ ಮ್ಯಾನ್ ವಿತ್ ದಿ ಗೋಲ್ಡನ್ ಹ್ಯಾಂಡ್ ಅಂತಲೇ ಖ್ಯಾತಿ ಪಡೆದವರು. ಅಂತಹ ಕರುಣಾಮಯಿ ಈಗ ತಮ್ಮ 88ನೇ ವಯಸ್ಸಿನಲ್ಲಿ ಇಹಲೋಕವನ್ನು ತ್ಯಜಿಸಿದ್ದಾರೆ. ಆಸ್ಟ್ರೇಲಿಯಾದ ರೆಡ್​​ಕ್ರಾಸ್​ ಸಂಸ್ಥೆ ಪ್ರಕಾರ ಜೇಮ್ಸ್ ಹ್ಯಾರಿಸ್ ವಿಶ್ವದ ಸರ್ವಶ್ರೇಷ್ಠ ರಕ್ತದಾನಿ ಎಂದು ಹೇಳಲಾಗುತ್ತದೆ. ಈ ವ್ಯಕ್ತಿಯ ಪ್ಲಾಸ್ಮಾ ಸುಮಾರು 20 ಲಕ್ಷ ಪುಟ್ಟ ಕಂದಮ್ಮಗಳ ಜೀವವನ್ನು ಉಳಿಸಿತ್ತಂತೆ. ಇಂತಹ ವ್ಯಕ್ತಿ ತಮ್ಮ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯೇ ಮೃತಪಟ್ಟಿದ್ದಾರೆ.

publive-image

ಬಿಬಿಸಿ ವರದಿ ಮಾಡಿರುವ ಪ್ರಕಾರ ಹ್ಯಾರಿಸನ್​​ ಅವರು ಅತ್ಯಂತ ವಿರಳವಾದ ಆ್ಯಂಟಿ ಬಾಡಿ, ಆ್ಯಂಟಿ ಡಿ ಪ್ಲಾಸ್ಮಾವನ್ನು ಹೊಂದಿದ್ದರಂತೆ. ಇದು ಗರ್ಭಿಣಿಯರ ಹೊಟ್ಟೆಯಲ್ಲಿದ್ದ ಮಕ್ಕಳಿಗೆ ರಕ್ತದ ಅಂಶ ಕಡಿಮೆಯಿದ್ದಾಗ ದೊಡ್ಡ ಔಷಧಿಯಂತೆ ಕೆಲಸ ಮಾಡುತ್ತದಂತೆ. ಹೀಗೆ ಅವರು ದಾನ ಮಾಡಿದ ರಕ್ತದಿಂದಲೇ ಸುಮಾರು 20 ಲಕ್ಷ ಮಕ್ಕಳ ಜೀವ ಉಳಿದಿದೆ ಎಂದು ಹೇಳಲಾಗುತ್ತದೆ.

ಲೈಫ್​ ಬ್ಲಡ್​ ಅವರು ಹೇಳುವ ಪ್ರಕಾರ ಹ್ಯಾರೀಸನ್ ತಮ್ಮ 14ನೇ ವಯಸ್ಸಿನಲ್ಲಿ ಶ್ವಾಸಕೋಶದ ಶಸ್ತ್ರಚಿಕಿತ್ಸೆಯಾದರೂ ಕೂಡ ರಕ್ತದಾನ ಮಾಡಲು ಸಿದ್ಧರಾಗಿದ್ದರಂತೆ. ಸಮಾಜಕ್ಕೆ ನನ್ನಿಂದ ಏನಾದರೂ ಕೊಡುಗೆ ನೀಡಬೇಕು ಎಂಬ ಹಂಬಲ ಅವರಲ್ಲಿ ತೀವ್ರವಾಗಿದ್ದ ಕಾರಣ ನಿರಂತರ ರಕ್ತದಾನದಲ್ಲಿ ಅವರು ಭಾಗಿಯಾಗಿದ್ದರಂತೆ. ತಮ್ಮ 18ನೇ ವಯಸ್ಸಿನಲ್ಲಿಯೇ ಅವರು ಮೊದಲ ಬಾರಿ ರಕ್ತದಾನ ಮಾಡಲು ಶುರು ಮಾಡಿದ್ದು. ಒಟ್ಟು 1 ಸಾವಿರ ಬಾರಿ ಬ್ಲಡ್ ಡೋನೆಟ್ ಮಾಡಿದ್ದಾರೆ.

publive-image

ಇದನ್ನೂ ಓದಿ: ಇದು ಜಗತ್ತಿನ ಅತಿ ಸುದೀರ್ಘ ಚುಂಬನ.. ಅಧರಗಳು ಅದರದೇ ಎಷ್ಟು ಗಂಟೆ ಬೆಸೆದುಕೊಂಡಿದ್ದವು! ಆಮೇಲೆ ಏನಾಯ್ತು?

ಅವರ ಸಾವಿನ ನಂತರ ಒಬ್ಬರು ಸಾಮಾಜಿಕ ಜಾಲತಾಣದಲ್ಲಿ ಒಂದು ಪೋಸ್ಟ್ ಮಾಡಿದ್ದರು. ನಾನು ಪ್ರತಿ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುತ್ತೇನೆ. ಆದ್ರೆ ನನಗೆ ಆಸ್ಟ್ರೇಲಿಯಾದ ಜೇಮ್ಸ್ ಹ್ಯಾರಿಸನ್ ಅವರ ಬಗ್ಗೆ ಕೇಳಿ ಅಚ್ಚರಿಯಾಗಿತ್ತು. ಅವರು ಪ್ರತಿ ಎರಡು ವಾರಕ್ಕೊಮ್ಮೆ ತಮ್ಮ 18ನೇ ವಯಸ್ಸಿನಿಂದ 81ನೇ ವಯಸ್ಸಿನವರೆಗೆ ರಕ್ತದಾನ ಮಾಡಿದ್ದಾರಂತೆ. ಇವರು ಉಳಿಸಿದ್ದು ಸುಮಾರು 20 ಲಕ್ಷ ಕಂದಮ್ಮಗಳ ಜೀವ. ಅವರ ಆ್ಯಂಟಿಬಾಡಿ, ಆಂಟಿ ಡಿ ಇತ್ತೀಚೆಗೆ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದೆಯಂತೆ. ಅವರು ಇನ್ನೂ ನೆಮ್ಮದಿಯಿಂದ ನಿದ್ರಿಸಲಿ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment