/newsfirstlive-kannada/media/post_attachments/wp-content/uploads/2024/04/SYNDEY-1.jpg)
ಆಸ್ಟ್ರೇಲಿಯಾದ ಸಿಡ್ನಿಯ ವೆಸ್ಟ್​ಫೀಲ್ಡ್​ ಮಾಲ್​ನಲ್ಲಿ ಸೈಕೋವೊಬ್ಬ ಚಾಕುವಿನಿಂದ ಸಿಕ್ಕಸಿಕ್ಕವರ ಮೇಲೆ ದಾಳಿ ಮಾಡಿ ಐವರು ಮಹಿಳೆ ಸೇರಿ 6 ಜನರನ್ನ ಕೊಲೆ ಮಾಡಿದ್ದಾನೆ. ಘಟನೆಯಲ್ಲಿ 12 ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಭಾರತೀಯ ದಂಪತಿ ಜಸ್ಟ್ ಎಸ್ಕೇಪ್ ಆಗಿದ್ದಾರೆ.
ವೆಸ್ಟ್​ಫೀಲ್ಡ್​ ಮಾಲ್​ನಲ್ಲಿ 6 ಜನರ ಸಾವಿಗೆ ಕಾರಣನಾದ ಸೈಕೋ ಹೆಸರು ಜೋಯಲ್ ಕೌಚಿ ಆಗಿದ್ದಾನೆ. ಘಟನೆ ಸಂಬಂಧ ತಕ್ಷಣ ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಜೋಯಲ್ ಕೌಚಿ ಮೇಲೆ ಫೈರಿಂಗ್ ಮಾಡಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
/newsfirstlive-kannada/media/post_attachments/wp-content/uploads/2024/04/Australian_police-1.jpg)
ಇದನ್ನೂ ಓದಿ: ಬೆಂಗಳೂರಿನ ಐತಿಹಾಸಿಕ ಕರಗ ಉತ್ಸವಕ್ಕೆ ಅದ್ಧೂರಿ ಚಾಲನೆ.. ಎಷ್ಟು ದಿನ ನಡೆಯಲಿದೆ ದ್ರೌಪದಿಯ ಸಂಭ್ರಮ?
ಜೋಯಲ್ ಕೌಚಿ ಬಗ್ಗೆ ಅವರ 76 ವರ್ಷದ ತಂದೆ ಮಾತನಾಡಿದ್ದು, ಶಾಕಿಂಗ್ ಮಾಹಿತಿಗಳನ್ನ ಹೇಳಿದ್ದಾರೆ. ನನ್ನ ಮಗ ಪ್ರೇಯಸಿ ಸಿಗದಿದ್ದರಿಂದ ಜೀವನದಲ್ಲಿ ತುಂಬಾ ಹತಾಶೆಯಾಗಿದ್ದನು. ಗರ್ಲ್ ಫ್ರೆಂಡ್ ಇಲ್ಲದಿದ್ದರಿಂದ ಅವನು ಶಿಜೋಫ್ರೆನಿಯಾ (schizophrenia) ಎಂಬ ಮಾರಾಕ ಕಾಯಿಲೆಗೆ ತುತ್ತಾಗಿದ್ದ. ಹುಡುಗಿ ಇಲ್ಲದಿದ್ದರಿಂದ ಮಾನಸಿಕ ಕಾಯಿಲೆಗೆ ತುತ್ತಾಗಿದ್ದನು. ಅವನಿಗೆ ಪ್ರೇಯಸಿ ಬೇಕಿತ್ತು ಎನ್ನುವ ಹಂಬಲವಿತ್ತೆ ಹೊರತು ಸಾಮಾಜಿಕ ಕೌಶಲ್ಯ, ಕಳಕಳಿ ಇರಲಿಲ್ಲ. ಇದರಿಂದ ಹುಚ್ಚನಂತೆ ಆಗಿದ್ದ ಅವನು ನೋಡುವವರಿಗೆ ರಕ್ಕಸನಂತೆ ಕಾಣುತ್ತಿದ್ದ. ಆದರೆ ಮಗ ಕಾಯಿಲೆಯಿಂದ ಬಳಲುತ್ತಿದ್ದ ಎನ್ನುವುದು ಗೊತ್ತಿತ್ತು ಎಂದು ಹೇಳಿದ್ದಾರೆ.
https://twitter.com/i/status/1779803683095539800
ಇದನ್ನೂ ಓದಿ: ಚರ್ಚ್ ಒಳಗೆ ಮಾರಣಾಂತಿಕ ಅಟ್ಯಾಕ್, ಧರ್ಮೋಪದೇಶ ಮಾಡ್ತಿದ್ದ ಬಿಷಪ್ ಮೇಲೆ ಚೂರಿ ಇರಿತ
ಪಾಕಿಸ್ತಾನದ ಸೆಕ್ಯೂರಿಟಿ ಗಾರ್ಡ್​ ತಾಹಿರ್ (30), ಚೀನಾದ ಯಿಕ್ಸುವಾನ್ ಚೆಂಗ್ (27), ಜೇಡ್ ಯಂಗ್ (47), ಡಾನ್ ಸಿಂಗಲ್ಟನ್ (25), ಪಿಕ್ರಿಯಾ ಡಾರ್ಚಿಯಾ (55) ಮತ್ತು ಆಶ್ಲೀ ಗುಡ್ (38) ಈ 6 ಜನರು ಜೋಯಲ್ ಕೌಚಿಯ ಚೂರಿ ಇರಿತದಿಂದ ಸಾವನ್ನಪ್ಪಿದವರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us