/newsfirstlive-kannada/media/post_attachments/wp-content/uploads/2025/04/TIM_DEVID_RCB.jpg)
ವೆಸ್ಟ್​ ವಿಂಡೀಸ್ ಹಾಗೂ ಆಸ್ಟ್ರೇಲಿಯಾ ನಡುವೆ ಟಿ-20 ಸರಣಿ ನಡೆಯುತ್ತಿದೆ. ಶುಕ್ರವಾರ ನಡೆದ ಮೂರನೇ ಪಂದ್ಯದಲ್ಲಿ ಆಸ್ಟ್ರೇಲಿಯಾ 6 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಐದು ಟಿ-20 ಪಂದ್ಯಗಳ ಪೈಕಿಯಲ್ಲಿ ಆಸ್ಟ್ರೇಲಿಯಾ 3-0 ಅಂತರದಿಂದ ಮುನ್ನಡೆ ಕಾಯ್ದುಕೊಂಡಿದೆ.
ವಿಶೇಷ ಅಂದರೆ ಮೊನ್ನೆ ನಡೆದ ಪಂದ್ಯದಲ್ಲಿ ಆರ್​ಸಿಬಿ ಸ್ಫೋಟಕ ಬ್ಯಾಟರ್​ ಶತಕ ಬಾರಿಸಿ ಮಿಂಚಿದರು. ಮೊದಲ ಬ್ಯಾಟ್ ಮಾಡಿದ್ದ ವೆಸ್ಟ್​ ವಿಂಡೀಸ್ 20 ಓವರ್​​ನಲ್ಲಿ 4 ವಿಕೆಟ್ ಕಳೆದುಕೊಂಡು 214 ರನ್​ಗಳಿಸಿತ್ತು. ಆಸ್ಟ್ರೇಲಿಯಾ ಗೆಲುವಿಗೆ ಪ್ರಮುಖ ಕಾರಣ ಟಿಮ್ ಡೆವಿಡ್.
ಇದನ್ನೂ ಓದಿ: ಹಿಂದೂ ದೇಗುಲಕ್ಕಾಗಿ 2 ಬೌದ್ಧ ದೇಶಗಳ ಮಧ್ಯೆ ಯುದ್ಧ.. ಥೈಲ್ಯಾಂಡ್-ಕಾಂಬೋಡಿಯಾ ನಡುವೆ ಆಗ್ತಿರೋದೇನು..?
ಸವಾಲಿನ ಗುರಿ ಬೆನ್ನು ಹತ್ತಿದ್ದ ಆಸ್ಟ್ರೇಲಿಯಾ, 16.1 ಓವರ್​ನಲ್ಲಿ ಗುರಿ ಮುಟ್ಟಿದೆ. 17 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಡೆವಿಡ್, ಕೇವಲ 37 ಎಸೆತದಲ್ಲಿ ಶತಕ ಬಾರಿಸಿ ಮಿಂಚಿದರು. 11 ಸಿಕ್ಸರ್, 6 ಬೌಂಡರಿ ಬಾರಿಸಿ ಡೆವಿಡ್ 102 ರನ್​ಗಳಿಸಿ ಅಜಯರಾಗಿ ಉಳಿದರು. ಆಸಿಸ್ ಪರ್ ಮಿಚೆಲ್ ಮಾರ್ಷ್ 22, ಮ್ಯಾಕ್ಸ್​ವೆಲ್ 20, ಇಂಗ್ಲಿಷ್ 15, ಕ್ಯಾಮರೋನ್ ಗ್ರೀನ್ 11 ಹಾಗೂ ಮಿಚೆಲ್ ಓವೆನ್ 36 ರನ್​ಗಳ ಕಾಣಿಕೆ ನೀಡಿದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ