/newsfirstlive-kannada/media/post_attachments/wp-content/uploads/2024/06/AUS_crocodile.jpg)
ತಮ್ಮ ಸಾಕು ಪ್ರಾಣಿಗಳನ್ನು ಬೇಟೆಯಾಡಿ ತಿನ್ನುತ್ತಿದ್ದ ದೊಡ್ಡ ಮೊಸಳೆಯೊಂದನ್ನು ಉತ್ತರ ಆಸ್ಟ್ರೇಲಿಯಾದ ಬುಲ್ಲಾ ಎನ್ನುವ ಪ್ರದೇಶದ ಜನರು ಬೇಟೆಯಾಡಿದ ಬಳಿಕ ಅದನ್ನು ತಿಂದಿದ್ದಾರೆ. ಹಸು, ಕರು ನಾಯಿ ಅಲ್ಲದೇ ಜನರ ಮೇಲು ಮೊಸಳೆ ದಾಳಿ ಮಾಡುತ್ತಿತ್ತು. ಇದರಿಂದ ಬೇಸತ್ತಿದ್ದ ಜನ ಅದನ್ನು ಕೊಂದು ಹಬ್ಬದ ರೀತಿಯಲ್ಲಿ ಆಚರಣೆ ಮಾಡಿ ತಿಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಬುಲ್ಲಾ ಪ್ರದೇಶದ ಸಮೀಪದ ಉಪ್ಪು ನೀರಿನಲ್ಲಿ ವಾಸಿಸುತ್ತಿದ್ದ ಮೊಸಳೆ ಜನರು ಸಾಕುತ್ತಿದ್ದ ಕುರಿ, ಕೊಳಿ, ದನ, ಕರು, ನಾಯಿಗಳನ್ನು ಬೇಟೆಯಾಡಿ ಸೈಲೆಂಟ್ ಆಗಿ ತಿಂದು ಹೋಗುತ್ತಿತ್ತು. ಇದರಿಂದ ಬೇಸತ್ತಿದ್ದ ಜನರು ಮೊಸಳೆಯನ್ನು ಹೇಗಾದರೂ ಮಾಡಿ ಬೇಟೆಯಾಡಬೇಕು ಎಂದು ತೀರ್ಮಾನ ಮಾಡಿದ್ದಾರೆ. ಇದಕ್ಕೆ ಸ್ಥಳೀಯ ಪೊಲೀಸರು ಮತ್ತು ವನ್ಯಜೀವಿ ಇಲಾಖೆಯೊಂದಿಗೆ ಮಾತುಕತೆ ನಡೆಸಿದ್ದಾರೆ. ನಂತರ ಅಂದುಕೊಂಡಂತೆ ಮೊಸಳೆಯನ್ನು ಒಂದು ದಿನ ಬೇಟೆಯಾಡಲಾಯಿತು. ಬಳಿಕ ಬುಲ್ಲಾ ಟೌನ್‌ಶಿಪ್‌ನ ಬುಡಕಟ್ಟು ಸಮುದಾಯವೆಲ್ಲ ಸೇರಿ ಹಬ್ಬದ ರೀತಿ ಆಚರಿಸಿಕೊಂಡು ಮೊಸಳೆ ಮಾಂಸವನ್ನು ಎಲ್ಲರು ಹಂಚಿಕೊಂಡು ತಿಂದಿದ್ದಾರೆ ಎನ್ನಲಾಗಿದೆ.
Australian Villagers Kill and Eat Giant Crocodile Which Hunted Their Pets https://t.co/Vfujw0Jekjpic.twitter.com/QiPaImZES5
— Hira Mokariya (@MokariyaHira) June 13, 2024
ಪೊಲೀಸರ ಪ್ರಕಾರ ದೈತ್ಯ ಮೊಸಳೆಯು ಸಾಕು ಪ್ರಾಣಿಗಳ ಮೇಲೆ ಮಾತ್ರವಲ್ಲದೆ ಜನರ ಮೇಲೂ ದಾಳಿ ಮಾಡುತ್ತಿತ್ತು. ಈ ಮೊಸಳೆ ತುಂಬಾ ದೊಡ್ಡದಾಗಿದ್ದು ಇದರ ಉದ್ದ ಸುಮಾರು 3.63 ಮೀಟರ್ ಎಂದು ಗುರುತಿಸಲಾಗಿದೆ. ಡಾರ್ವಿನ್‌ನಿಂದ ನೈಋತ್ಯಕ್ಕೆ 700 ಕಿಮೀ ದೂರದಲ್ಲಿರುವ ಬೈನ್ಸ್ ನದಿಯಲ್ಲಿ ಇಂತಹ ಸರೀಸೃಪಗಳು ಇವೆ. ಅಲ್ಲಿ ಭೀಕರ ಪ್ರವಾಹ ಉಂಟಾದಾಗ ಇಂತಹ ದೈತ್ಯ ಪ್ರಾಣಿಗಳು ಅಲ್ಲಿಂದ ಜನರು ಇರುವ ಕಡೆ ಬರುವ ಸಾಧ್ಯತೆ ಇದೆ ಎಂದು ಅಲ್ಲಿನ ಸ್ಥಳೀಯರು ಅಭಿಪ್ರಾಯ ಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ