Advertisment

ವಿರಾಟ್​ ಕೊಹ್ಲಿ ವಿರುದ್ಧ ಚಿತ್ರ ವಿಚಿತ್ರವಾಗಿ ವರ್ತನೆ ಮಾಡಿದ ಆಸ್ಟ್ರೇಲಿಯಾದ ಜನ.. ಹೀಗೆ ಮಾಡೋದಾ?

author-image
Bheemappa
Updated On
ವಿರಾಟ್​ ಕೊಹ್ಲಿ ವಿರುದ್ಧ ಚಿತ್ರ ವಿಚಿತ್ರವಾಗಿ ವರ್ತನೆ ಮಾಡಿದ ಆಸ್ಟ್ರೇಲಿಯಾದ ಜನ.. ಹೀಗೆ ಮಾಡೋದಾ?
Advertisment
  • ಭಾರತದ ಆಟಗಾರರನ್ನ ಕೆಣಕುತ್ತಿರುವ ಆಸ್ಟ್ರೇಲಿಯಾದ ಜನ
  • ವಿರಾಟ್​ ಕೊಹ್ಲಿಗೆ ವಿಚಿತ್ರವಾಗಿ ರೇಗಿಸಿದ ಗ್ಯಾಲರಿಯಲ್ಲಿದ್ದವರು
  • ಮೈದಾನದಲ್ಲಿ ಮನಸ್ಥಿತಿ ಕಳೆದುಕೊಂಡ ಭಾರತದ ಆಟಗಾರರು

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಾರ್ಡರ್​ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಆಟಗಾರರನ್ನು ಕೆಣಕುತ್ತಿದ್ದಾರೆ. ಆಸಿಸ್​ನ ಮಾಧ್ಯಗಳಷ್ಟೇ ಅಲ್ಲ, ಅಲ್ಲಿನ ಜನರು ಕೂಡ ವಿಚಿತ್ರವಾಗಿ ವರ್ತನೆ ಮಾಡುವ ಮೂಲಕ ಭಾರತದ ಆಟಗಾರರನ್ನು ಹೀಯಾಳಿಸುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ವಿರಾಟ್​ ಕೊಹ್ಲಿ ಔಟ್ ಆಗಿ ಪೆವಿಲಿಯನ್​ಗೆ ಹೋಗುವಾಗ ಅಲ್ಲಿನ ಜನರು ಮಾಡಿದ ಚೇಷ್ಟೆಯ ವಿಡಿಯೋ ವೈರಲ್ ಆಗಿದೆ.

Advertisment

ವಿರಾಟ್ ಕೊಹ್ಲಿ ಅವರು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. 86 ಎಸೆತಗಳಲ್ಲಿ 4 ಬೌಂಡರಿ ಸಮೇತ 36 ರನ್​ಗಳಿಂದ ಆಡುವಾಗ ವಿಕೆಟ್​ ಕೀಪರ್ ಅಲೆಕ್ಸ್​ ಕ್ಯಾರಿಗೆ ಕ್ಯಾಚ್ ಕೊಟ್ಟು ಔಟ್ ಆದರು. ವಿರಾಟ್​ ಕೊಹ್ಲಿ ಔಟ್ ಆಗಿ ಬೇಸರಲ್ಲಿ ಪೆವಿಲಿಯನ್​ಗೆ ತಲೆ ತಗ್ಗಿಸಿಕೊಂಡು ಹೋಗುವಾಗ ಈ ವೇಳೆ ಸ್ಟೇಡಿಯಂ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ಚಿತ್ರ ವಿಚಿತ್ರವಾಗಿ ವರ್ತನೆ ಮಾಡಿದ್ದಾರೆ.

ಇದನ್ನೂ ಓದಿ: IND vs AUS; ಭಾರತಕ್ಕೆ ಬಿಗ್ ಶಾಕ್ ಕೊಟ್ಟ ವಿರಾಟ್ ಕೊಹ್ಲಿ.. ನಿರೀಕ್ಷೆ ಹುಸಿಗೊಳಿಸಿದ ಕಿಂಗ್

publive-image

ಪೆವಿಲಿಯನ್​ ಒಳಗೆ ವಿರಾಟ್ ಕೊಹ್ಲಿ ಹೋಗುವಾಗ ಗ್ಯಾಲರಿಯಲ್ಲಿದ್ದ ಪ್ರೇಕ್ಷಕರು ವಿಚಿತ್ರವಾಗಿ ಕೂಗಿದ್ದಾರೆ. ಈ ವೇಳೆ ಓರ್ವ ಅನವಶ್ಯಕವಾಗಿ ಏನೋ ಹೇಳಿದ್ದಾನೆ. ಒಳಗೆ ಹೋಗುತ್ತಿದ್ದ ಕೊಹ್ಲಿ ತಕ್ಷಣ ವಾಪಸ್ ಬಂದು ಮೇಲೆ ಅವರು ಕೂಗುತ್ತಿರುವುದನ್ನು ನೋಡಿದ್ದಾರೆ. ಆಗ ಇನ್ನಷ್ಟು ಕೂಗಲು ಆರಂಭಿಸಿದ್ದಾರೆ. ಈ ವೇಳೆ ಅಲ್ಲಿದ್ದ ಸಿಬ್ಬಂದಿ ಕೊಹ್ಲಿರನ್ನು ಸಮಾಧಾನ ಪಡಿಸಿ ಒಳಕ್ಕೆ ಕರೆದುಕೊಂಡು ಹೋಗಿದ್ದಾರೆ.

Advertisment

ಭಾರತದ ಆಟಗಾರರಿಗೆ ಅಲ್ಲಿನ ಜನರು ಸಾಕಷ್ಟು ತೊಂದರೆ ಕೊಡುತ್ತಿದ್ದಾರೆ. ಹೀಗಾಗಿ ಮೈದಾನದಲ್ಲಿ ಎಲ್ಲ ಆಟಗಾರರು ಮನಸ್ಥಿತಿ ಸರಿಯಾಗಿಲ್ಲ. ಇದರಿಂದ ಬ್ಯಾಟಿಂಗ್, ಬೌಲಿಂಗ್​ನಲ್ಲಿ ವೈಫಲ್ಯ ಅನುಭವಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆಸ್ಟ್ರೇಲಿಯಾದ ಮಾಧ್ಯಮದವರು, ಜನರು ಹಾಗೂ ಆಸ್ಟ್ರೇಲಿಯಾ ತಂಡ ಇವರೆಲ್ಲರೂ ಭಾರತ ತಂಡದ ಆಟಗಾರರ ಜೊತೆ ಚೆನ್ನಾಗಿಲ್ಲ. ಶತ್ರುಗಳಂತೆ ವರ್ತನೆ ಮಾಡುತ್ತಿರುವುದು ವೈರಲ್ ಆದ ಕೆಲ ವಿಡಿಯೋಗಳಿಂದ ತಿಳಿದು ಬರುತ್ತದೆ.


">December 27, 2024

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment
Advertisment
Advertisment
Advertisment