ಶಾಲೆಯಲ್ಲಿ ಏಕಾಏಕಿ ಗುಂಡಿನ ದಾಳಿ.. ಆಸ್ಟ್ರಿಯಾದಲ್ಲಿ ವಿದ್ಯಾರ್ಥಿಗಳು ಸೇರಿ 9 ಮಂದಿ ಬಲಿ

author-image
Bheemappa
Updated On
ಶಾಲೆಯಲ್ಲಿ ಏಕಾಏಕಿ ಗುಂಡಿನ ದಾಳಿ.. ಆಸ್ಟ್ರಿಯಾದಲ್ಲಿ ವಿದ್ಯಾರ್ಥಿಗಳು ಸೇರಿ 9 ಮಂದಿ ಬಲಿ
Advertisment
  • ಎಂದಿನಂತೆ ಶಾಲೆಗೆ ಬಂದಿದ್ದ ಮಕ್ಕಳ ಮೇಲೆ ಗುಂಡಿನ ದಾಳಿ
  • ಶಾಲೆಯಲ್ಲಿ ಕೃತ್ಯ ಎಸಗಿದವನು ಕೊನೆಗೆ ಏನು ಮಾಡಿದನು?
  • ಕೃತ್ಯಕ್ಕೆ ಕಾರಣವಾದವನು ಶಾಲೆಯ ಹಳೆಯ ವಿದ್ಯಾರ್ಥಿನಾ?

ಹಳೆಯ ವಿದ್ಯಾರ್ಥಿಯಿಂದ ಶಾಲೆಯಲ್ಲಿ ಏಕಾಏಕಿ ಫೈರಿಂಗ್ ಮಾಡಿದ್ದರಿಂದ 8 ವಿದ್ಯಾರ್ಥಿಗಳು ಹಾಗೂ ಓರ್ವ ಸೇರಿ 9 ಮಂದಿ ಜೀವ ಕಳೆದುಕೊಂಡಿದ್ದಾರೆ. 28ಕ್ಕೂ ಅಧಿಕ ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಆಸ್ಟ್ರಿಯಾದ ಗ್ರಾಜ್ ನಗರದ ಶಾಲೆಯೊಂದರಲ್ಲಿ ನಡೆದಿದೆ.

ಗ್ರಾಜ್ ನಗರದ ಡ್ರೀಯರ್‌ಸ್ಚುಯೆಟ್‌ಜೆಂಗಾಸ್ಸೆ ಬೀದಿಯ ಬಿಒಆರ್‌ಜಿ ಪ್ರೌಢಶಾಲೆಯಲ್ಲಿ ಈ ದುರ್ಘಟನೆ ನಡೆದಿದೆ. ಶಾಲೆಯ ಹಳೆಯ ವಿದ್ಯಾರ್ಥಿಯೇ ಈ ಕೃತ್ಯ ಎಸಗಿದ್ದಾನೆ. ಮಕ್ಕಳು ಇರುವಾಗಲೇ ಶಾಲೆಯಲ್ಲಿ ಏಕಾಏಕಿ ಎರಡು ಗನ್​ಗಳಿಂದ ಗುಂಡಿನ ದಾಳಿ ಮಾಡಿದ್ದರಿಂದ 8 ವಿದ್ಯಾರ್ಥಿಗಳು ಸೇರಿ ಓರ್ವ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ:ಟೀಮ್ ಇಂಡಿಯಾದ ವಿಕೆಟ್​ ಕೀಪರ್​ಗೆ ಆಗಿದ್ದೇನು..? ನೋವಿನಿಂದ ನರಳಾಡಿದ ರಿಷಭ್​ ಪಂತ್!​

publive-image

ಘಟನೆಯಲ್ಲಿ 28ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದರಲ್ಲಿ ಶಾಲೆಯ ಶಿಕ್ಷಕರು ಕೂಡ ಸೇರಿದ್ದಾರೆ ಎಂದು ಹೇಳಲಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗುಂಡಿನ ದಾಳಿ ನಡೆಸಿದವನು ತನಗೆ ತಾನೇ ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ.

ಆಸ್ಪತ್ರೆಗೆ ದಾಖಲು ಮಾಡಿದವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಶಾಲೆಯ ಹಳೆಯ ವಿದ್ಯಾರ್ಥಿ ಈ ಕೃತ್ಯ ಎಸಗಿದ್ದು ಪಿಸ್ತೂಲ್ ಹಾಗೂ ಶಾಟ್​ಗನ್​ನಿಂದ ಎಲ್ಲರ ಮೇಲೆ ಗುಂಡಿನ ಸುರಿಮಳೆಗೈದಿದ್ದಾನೆ. ಮಾಹಿತಿ ತಿಳಿದು ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು, ಸೆರೆ ಹಿಡಿಯಲು ಹೋದಾಗ ಆರೋಪಿಯೂ ಶೂಟ್ ಮಾಡಿಕೊಂಡು ಉಸಿರು ಚೆಲ್ಲಿದ್ದಾನೆ ಎಂದು ಹೇಳಲಾಗಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment