Advertisment

ಕೆರೆಗೆ ಹಾರಿದ ಯುವ ಪ್ರೇಮಿಗಳ ಸಾವಿಗೆ ಹೊಸ ಟ್ವಿಸ್ಟ್‌; ಅಸಲಿಗೆ ಆಗಿದ್ದೇನು?

author-image
admin
Updated On
ಕೆರೆಗೆ ಹಾರಿದ ಯುವ ಪ್ರೇಮಿಗಳ ಸಾವಿಗೆ ಹೊಸ ಟ್ವಿಸ್ಟ್‌; ಅಸಲಿಗೆ ಆಗಿದ್ದೇನು?
Advertisment
  • ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಪ್ರೀತಿ ದುರಂತ ಅಂತ್ಯ
  • ಪಾರ್ಟ್ ಟೈಂ ಅಲ್ಲಿ ಆಟೋ ಡ್ತೈವರ್ ಆಗಿ ಕೆಲಸ ಮಾಡುತ್ತಿದ್ದ ಯುವಕ
  • ಆಟೋ ಓಡಿಸುತ್ತಲೇ ಕಾಲೇಜಿನಲ್ಲಿ ಓದುತ್ತಿದ್ದಾಗ ಇಬ್ಬರ ಮಧ್ಯೆ ಪ್ರೀತಿ

ಬೆಂಗಳೂರು: ನೈಸ್ ರಸ್ತೆ ಸಮೀಪದ ಕೆರೆಗೆ ಹಾರಿ ಯುವ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿನಿ ಅಂಜನಾ(20) ಮತ್ತು ಶ್ರೀಕಾಂತ್(25) ಸಾವನ್ನಪ್ಪಿರುವ ದುರ್ದೈವಿಗಳು.

Advertisment

ಕಳೆದ ಜುಲೈ 1ರಂದು ತಲಘಟ್ಟಪುರ ಸಮೀಪದ ಅಂಜನಾಪುರದಲ್ಲಿ ವಾಸವಿದ್ದ ವಿದ್ಯಾರ್ಥಿನಿ ಹಾಗೂ ಕೋಣನಕುಂಟೆ ನಿವಾಸಿ ಶ್ರೀಕಾಂತ್ ನಾಪತ್ತೆಯಾಗಿದ್ದರು. ಪೋಷಕರು ಕೋಣನಕುಂಟೆ ಮತ್ತು ತಲಘಟ್ಟಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಂದು ನೈಸ್ ರಸ್ತೆ ಸಮೀಪದ ಕೆರೆಯಲ್ಲಿ ಇಬ್ಬರು ಯುವ ಪ್ರೇಮಿಗಳ ಶವ ತೇಲಿಕೊಂಡು ಬಂದಿದೆ.

publive-image

ಕಳೆದ ಕೆಲ ವರ್ಷಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಯುವಜೋಡಿಯ ಪ್ರೀತಿಗೆ ವಿದ್ಯಾರ್ಥಿನಿ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು. ಹೀಗಾಗಿ ತನ್ನ ಸಾವಿಗೆ ತಾವೇ ಕಾರಣ ಎಂದು ವಿಡಿಯೋ ಮಾಡಿ ಮೊಬೈಲ್‌ ಅನ್ನು ಆಟೋದಲ್ಲಿಟ್ಟು ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮದುವೆ ಆಗಲ್ಲ ಎಂದ ಗೆಳೆಯನ ಖಾಸಗಿ ಅಂಗ ಕತ್ತರಿಸಿದ ವೈದ್ಯೆ; ಹೇಳಿದ್ದೇನು? VIDEO 

Advertisment

ದುರಂತಕ್ಕೆ ಕಾರಣವೇನು?
ಮೃತ ಶ್ರೀಕಾಂತ್ ಈ ಮೊದಲೇ ಮದುವೆಯಾಗಿದ್ದ. ಪಾರ್ಟ್ ಟೈಂ ಅಲ್ಲಿ ಆಟೋ ಡ್ತೈವರ್ ಆಗಿ ಕೆಲಸ ಮಾಡುತ್ತಿದ್ದ. ಆಟೋ ಓಡಿಸುತ್ತಲೇ ಖಾಸಗಿ ಕಾಲೇಜಿನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದ. ಕಾಲೇಜಿನಲ್ಲೇ ಶ್ರೀಕಾಂತ್ ಹಾಗೂ ಅಂಜನಾ ಮಧ್ಯೆ ಪ್ರೀತಿಯಾಗಿದೆ.

publive-image

ಮದುವೆಯಾಗಿ ಪತ್ನಿಯಿದ್ದರೂ ತನ್ನದೇ ಕಾಲೇಜಿನ ಅಂಜನಾಳನ್ನು ಶ್ರೀಕಾಂತ್‌ ಪ್ರೀತಿಸಲು ಶುರು ಮಾಡಿದ್ದ. ಗಂಡನ ಮೊಬೈಲ್‌ನಲ್ಲಿ ಚಾಟಿಂಗ್ ನೋಡಿ ಶ್ರೀಕಾಂತ್ ಪತ್ನಿ ಪ್ರಶ್ನಿಸಿದ್ದಳು. ಹಿರಿಯರು ಹಲವು ಬಾರಿ ಶ್ರೀಕಾಂತ್‌ಗೆ ಬುದ್ದಿವಾದ ಹೇಳಿದ್ದರು ಆತ ತನ್ನ ಚಾಳಿ ಮುಂದುವರೆಸಿದ್ದ. ಕಾಲೇಜಿಗೆ ಹೋಗ್ತಿನೆಂದು ಲವ್ವರ್ ಅಂಜನಾಳ ಜೊತೆ ಶ್ರೀಕಾಂತ್ ಸುತ್ತಾಡ್ತಿದ್ದನಂತೆ.

ಇದನ್ನೂ ಓದಿ: ಬೇರೊಬ್ಬಳ ಜೊತೆ ಮದ್ವೆ.. ಕಾಲೇಜು ವಿದ್ಯಾರ್ಥಿನಿ ಜೊತೆ ಲವ್​! ವಿಡಿಯೋ ಮಾಡಿ ಆತ್ಮಹ* ಮಾಡಿಕೊಂಡ ಲವರ್ಸ್​​ 

Advertisment

ಶ್ರೀಕಾಂತ್ ಮನೆಯಲ್ಲಿ ಅಂಜನಾ ವಿಚಾರಕ್ಕೆ ಹಲವು ಬಾರಿ ಜಗಳವಾಗಿತ್ತು. ಆಟೋದಲ್ಲಿ ತುಳಸಿಪುರ ಕೆರೆ ಬಳಿ ಬಂದಿರುವ ಶ್ರೀಕಾಂತ್‌, ಅಂಜನಾಳ ಸಮೇತ ಕೆರೆಗೆ ಜಿಗಿದಿದ್ದಾರೆ. ಆಟೋವನ್ನ ತುಳಸಿಪುರ ಕೆರೆ ದಡದಲ್ಲಿ ಬಿಟ್ಟು ಪರಸ್ಪರ ಇಬ್ಬರ ಕೈಗೂ ಹಗ್ಗ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೊಬೈಲ್ ಟವರ್ ಡಂಪ್ ಆಧರಿಸಿ ಪೊಲೀಸರು ತುಳಸಿಪುರ ಕೆರೆ ಬಳಿ ಬಂದಾಗ ಮೃತದೇಹ ತೇಲುತ್ತಿರೋದು ಬೆಳಕಿಗೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment