newsfirstkannada.com

ಆಟೋ ಪ್ರಯಾಣಿಕರಿಗೆ ಗುಡ್​ನ್ಯೂಸ್​​: ನೀವು ಓದಲೇಬೇಕಾದ ಸ್ಟೋರಿ ಇದು!

Share :

Published August 16, 2023 at 8:33pm

    ಇನ್ಮುಂದೆ ಕೈಯಲ್ಲಿ ಕ್ಯಾಶ್​ ಇಲ್ಲದಿದ್ರೂ ಪರ್ವಾಗಿಲ್ಲ

    ಜಸ್ಟ್​ ಕ್ಯೂಆರ್​​ ಕೋಡ್​ ಸ್ಕ್ಯಾನ್​ ಮಾಡಿದ್ರೆ ಸಾಕು

    ಆಟೋ ಪ್ರಯಾಣಿಕರಂತೂ ಓದಲೇಬೇಕಾದ ಸ್ಟೋರಿ

ಬೆಂಗಳೂರು: ಈಗೇನಿದ್ರೂ ಟೆಕ್ನಾಲಜಿ ಜಮಾನ ಕಣ್ರೀ.. ಡಿಜಿಟಲ್‌ ಯುಗ ಇದು.. ಅಪ್ಡೇಟ್‌ ಆಗ್ತಿರೋ ಟೆಕ್ನಾಲಜಿಯನ್ನ ನಾವೂ ಅಡಾಪ್ಟ್‌ ಮಾಡ್ಕೊಳ್ತಾ ಹೋದ್ರೆ ಲೈಫ್ ಸಿಕ್ಕಾಪಟ್ಟೆ ಈಸಿ.. ಬೆಂಗಳೂರಿನಂಥಾ ಐಟಿ ಸಿಟಿಯಲ್ಲಿ ಟೆಕ್ನಾಲಜಿ ಎಷ್ಟು ಸ್ಪೀಡಾಗಿ ಬೆಳೆಯುತ್ತಿದೆ ಅಂದ್ರೆ ಆಟೋ ಡ್ರೈವರ್ಸ್​​ ಕೂಡ ಫುಲ್‌ ಸ್ಮಾರ್ಟ್‌ ಆಗಿದ್ದಾರೆ. ಸ್ಮಾರ್ಟ್ ವಾಚ್‌ನಲ್ಲೇ ಕ್ಯೂ ಆರ್‌ ಕೋಡ್‌ ಇಟ್ಕೊಂಡಿದ್ದಾರೆ.

ವಾಚ್‌ನಲ್ಲೇ ಕ್ಯೂ ಆರ್ ಕೋಡ್‌.. ಪ್ರಯಾಣಿಕರು ಸ್ಕ್ಯಾನ್‌ ಮಾಡಿ ಪೇ ಮಾಡಿದ್ರೆ ಸಾಕು.. ಅಮೌಂಟ್‌ ಪೇ ಆಗ್ಬಿಡುತ್ತೆ.. ಆಟೋ ಚಾಲಕನ ಸ್ಮಾರ್ಟ್​​ನೆಸ್​ಗೆ ಪ್ರಯಾಣಿಕರೊಬ್ರು ಫುಲ್ ಫಿದಾ ಆಗಿ ಸೋಶಿಯಲ್‌ ಮೀಡಿಯಾದಲ್ಲಿ ಶಹಬ್ಬಾಷ್‌ಗಿರಿ ನೀಡಿದ್ದಾರೆ.

ಸ್ಮಾರ್ಟ್‌ ಸಾರಥಿ

ನಮ್ಮ ಯಾತ್ರಿ ಆ್ಯಪ್‌ನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ಆಟೋ ಬುಕ್ ಮಾಡಿದ್ದರು. ತಮ್ಮ ಸ್ಥಳ ಬಂದಾಗ ಇಳಿಯುವ ಮುನ್ನ ಹಣ ಪಾವತಿಗೆ ಮುಂದಾಗಿದ್ದರು. ಹಣ ಪಾವತಿಸಲು ಪ್ರಯಾಣಿಕ ಕ್ಯೂಆರ್ ಕೋಡ್ ಕೇಳಿದ್ದಾರೆ. ಈ ವೇಳೆ ಆಟೋ ಡ್ರೈವರ್ ತನ್ನ ಸ್ಮಾರ್ಟ್‌ ವಾಚ್‌ ತೋರಿಸಿದ್ದಾರೆ. ಸ್ಮಾರ್ಟ್‌ ವಾಚ್‌ನಲ್ಲೇ ಆಟೋ ಸಾರಥಿ ಕ್ಯೂಆರ್ ಕೋಡ್‌ ಹೊಂದಿದ್ರು. ಸಾಮಾನ್ಯವಾಗಿ ಜನ್ರು ಲ್ಯಾಮಿನೇಟೆಡ್ ಕಾಗದ ಹೊಂದಿರುತ್ತಾರೆ. ಅದೆಲ್ಲಾ ಬಿಟ್ಟು ಆಟೋ ಚಾಲಕ ಸ್ಮಾರ್ಟ್ ವಾಚ್‌ನಲ್ಲಿ ಕ್ಯೂಆರ್ ಕೋಡ್ ಹೊಂದಿರೋದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ನಂತರ ಆಕೆ ತನ್ನ ಟ್ವಿಟರ್​​ನಲ್ಲಿ ಇದ್ರ ಬಗ್ಗೆ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ನಾನು ಆಟೋ ಡ್ರೈವರ್‌ಗೆ ಕ್ಯೂ ಆರ್‌ ಕೋಡ್ ಕೇಳಿದೆ. ಆತ ತನ್ನ ಕೈಯನ್ನು ತಿರುಗಿಸಿ ಸ್ಮಾರ್ಟ್‌ ವಾಚ್‌ ನೇರವಾಗಿ ನನಗೇ ತೋರಿಸಿದ. ಆತನ ಕ್ಯೂಆರ್‌ ಕೋಡ್‌ನ ತನ್ನ ಸ್ಮಾರ್ಟ್‌ ವಾಚ್‌ ಸ್ಕ್ರೀನ್‌ ಸೇವರ್ ಆಗಿ ಉಳಿಸಿಕೊಂಡಿದ್ದಾನೆ. ಸೋ ಮಚ್‌ ಸ್ವಾಗ್‌ ಎಂದು ಮಹಿಳೆ ಟ್ವೀಟ್​ ಮಾಡಿದ್ದಾರೆ.

ಆಕೆ ಹೀಗೆ ಟ್ವೀಟ್‌ ಮಾಡ್ತಿದ್ದಂತೆ ಬೆಂಗಳೂರಿನ ಆಟೋ ಡ್ರೈವರ್‌ ಸ್ಮಾರ್ಟ್‌ನೆಸ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗ್ತಿದೆ. ಕೆಲವ್ರು ಅದಕ್ಕೇ ಬೆಂಗ್ಳೂರನ್ನ ಸಿಲಿಕಾನ್‌ ವ್ಯಾಲಿ ಅಂತ ಕರೆಯೋದು ಅಂತ ಕಾಮೆಂಟ್ ಮಾಡಿದ್ರೆ, ಇನ್‌ ಕೆಲವ್ರು ಲೆಜೆಂಡ್‌, ಕೂಲ್‌, ಅವ್ನು ಆಟೋ ರಾಜಾ ಅಲ್ಲ, ಸ್ವಾಗ್‌ ರಾಜಾ, ಇದೆಲ್ಲಾ ಬೆಂಗ್ಳೂರಲ್ಲಿ ಮಾತ್ರ ಸಾಧ್ಯ ಅಂತ ಕಾಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಸದ್ಯ ಆಟೋ ಡ್ರೈವರ್‌ ಹೆಸರು ಚಂದನ್‌ ಕೆ.ಆರ್‌ ಪೇಟೆ ಅಂತ ತಿಳಿದು ಬಂದಿದ್ದು ಆತನಿಗೆ ನೆಟ್ಟಿಗರಿಂದ ಶಹಬ್ಬಾಷ್‌ಗಿರಿ ಸಿಕ್ಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆಟೋ ಪ್ರಯಾಣಿಕರಿಗೆ ಗುಡ್​ನ್ಯೂಸ್​​: ನೀವು ಓದಲೇಬೇಕಾದ ಸ್ಟೋರಿ ಇದು!

https://newsfirstlive.com/wp-content/uploads/2023/07/Auto-Driver.jpg

Load More