/newsfirstlive-kannada/media/post_attachments/wp-content/uploads/2025/07/BNG_AUTO.jpg)
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಾಸಿಸುವ ಜನರಿಗೆ ನಿತ್ಯ ಯಾವುದಾದರೂ ಒಂದು ಶಾಕಿಂಗ್ ನ್ಯೂಸ್ ಇದ್ದೇ ಇರುತ್ತದೆ. ಮಹಾನಗರದಲ್ಲಿ ಜೀವನ ನಡೆಸುತ್ತಿದ್ದರಿಂದ ಇಂತಹ ಆರ್ಥಿಕ ಹೊರೆ ಅನುಭವಿಸಲೇಬೇಕು. ಇದೀಗ ನಗರದ ಆಟೋ ಮೀಟರ್ ದರ ಏರಿಕೆ ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಅವರು ಉದ್ಯಾನ ನಗರಿಯ ಆಟೋ ಮೀಟರ್ ದರ ಏರಿಕೆ ಮಾಡಿ ಆದೇಶ ನೀಡಿದ್ದಾರೆ. ಈ ಆದೇಶವು 2025ರ ಆಗಸ್ಟ್ 1 ರಿಂದ ಜಾರಿಗೆ ಬರಲಿದೆ. ಸದ್ಯ ಮಿನಿಮಮ್ ಆಟೋ ದರವನ್ನ, ಮೂವರು ಪ್ರಯಾಣಿಕರಿಗೆ ಕನಿಷ್ಠ ದರ ಮೊದಲ 2 ಕಿಮೀ.ಗೆ 36 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. 30 ರೂಪಾಯಿ ಇಂದ 36 ರೂಪಾಯಿಗೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ:ಟೆಸ್ಟ್ನಲ್ಲಿ ‘ವಿರಾಟ್’ರೂಪ ದರ್ಶನ.. ಇಂಗ್ಲೆಂಡ್ ಬ್ಯಾಟರ್ಗಳ ಮೇಲೆ ಕೆಂಡಕಾರಿದ ಕ್ಯಾಪ್ಟನ್ ಗಿಲ್!
ನಂತರದ ಪ್ರತಿ ಕಿ.ಮೀ.ಗೆ ಮೂರು ಜನ ಪ್ರಯಾಣಿಕರಿಗೆ 18 ರುಪಾಯಿ ನಿಗದಿ ಮಾಡಲಾಗಿದೆ. ಈ ಹಿಂದೆ 15 ರೂಪಾಯಿ ಇದ್ದಿದ್ದನ್ನ 18 ರೂಪಾಯಿಗೆ ಹೆಚ್ಚಳ ಮಾಡಿದೆ. ಇಲ್ಲಿ 3 ರೂಪಾಯಿ ಹೆಚ್ಚಿಸಲಾಗಿದೆ. ಎರಡು ಕಿಲೋ ಮೀಟರ್ ಮಿನಿಮಮ್ ದರವನ್ನ 6 ರೂಪಾಯಿ ಹೆಚ್ಚಳ ಮಾಡಲಾಗಿದೆ.
ಕಾಯುವಿಕೆ ದರ ಮೊದಲ ಐದು ನಿಮಿಷ ಉಚಿತವಾಗಿರುತ್ತದೆ. ಆದರೆ ಇದಾದ ಮೇಲೆ ಐದು ನಿಮಿಷಗಳ ನಂತರ ಪ್ರತಿ 15 ನಿಮಿಷ ಅಥವಾ ಅದರ ಭಾಗಕ್ಕೆ 10 ರೂಪಾಯಿ. ಪ್ರಯಾಣಿಕರ ಲಗೇಜು ದರ ಮೊದಲ 20 ಕೆ.ಜಿಗೆ ಫ್ರೀ ಇರುತ್ತದೆ. 20 ಕೆ.ಜಿ ನಂತರ ಅಥವಾ ಅದರ ಭಾಗಕ್ಕೆ 10 ರೂಪಾಯಿ ನಿಗದಿ ಮಾಡಲಾಗಿದೆ. ಗರಿಷ್ಠ ಪ್ರಯಾಣಿಕರ ಲಗೇಜುಗಳು 50 ಕೆ.ಜಿಗೆ 10 ರೂಪಾಯಿ ಇರುತ್ತದೆ. ಇನ್ನು ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆ ವರೆಗೆ ಒನ್ ಅಂಡ್ ಆಫ್ ಚಾರ್ಜ್ (ಸಾಮಾನ್ಯ ದರ + ಸಾಮಾನ್ಯ ದರದ ಅರ್ಧಪಟ್ಟು ಹೆಚ್ಚು) ಇರುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ