Advertisment

ಭಾರೀ ಮಳೆಗೆ ರಾಜಕಾಲುವೆಗೆ ಉರುಳಿ ಬಿದ್ದ ಆಟೋ.. ಡ್ರೈವರ್​ ಸಾವು

author-image
AS Harshith
Updated On
ಭಾರೀ ಮಳೆಗೆ ರಾಜಕಾಲುವೆಗೆ ಉರುಳಿ ಬಿದ್ದ ಆಟೋ.. ಡ್ರೈವರ್​ ಸಾವು
Advertisment
  • ಭಾರೀ ಮಳೆಗೆ ತುಂಬಿ ಹರಿದ ರಾಜಕಾಲುವೆ
  • ಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ರಸ್ತೆಗೆ ನುಗ್ಗಿದ ನೀರು
  • ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣವೆಂದ ಸಾರ್ವಜನಿಕರು

ಮಂಗಳೂರು: ಭಾರೀ ಮಳೆಗೆ ರಾಜಕಾಲುವೆಗೆ ಆಟೋ ಉರುಳಿದ ಘಟನೆ ಕೊಟ್ಟಾರ ಅಬ್ಬಕ್ಕ ನಗರದಲ್ಲಿ ನಡೆದಿದೆ. ಈ ದುರ್ಘಟನೆಯಲ್ಲಿ ಚಾಲಕ ಸಾವನ್ನಪ್ಪಿದ್ದಾನೆ.

Advertisment

ಚಾಲಕ ದೀಪಕ್ (40) ದುರ್ಮರಣ ಹೊಂದಿದ್ದಾರೆ. ಆಟೋ ಉರುಳಿ ಬಿದ್ದ ಪರಿಣಾಮ ಅಲ್ಲೇ ಸಾವನ್ನಪ್ಪಿದ್ದಾರೆ.

ರಾತ್ರಿ ಸುರಿದ ಭಾರೀ ಮಳೆಗೆ ಕೊಟ್ಟಾರದಲ್ಲಿ ರಾಜಕಾಲುವೆ ತುಂಬಿ ಹರಿದಿದೆ. ಕಾಲುವೆಗೆ ತಡೆಗೋಡೆ ಇಲ್ಲದ ಕಾರಣ ರಸ್ತೆಗೆ ನೀರು ಬಂದಿತ್ತು. ರಾತ್ರಿ ವೇಳೆ ಆ ರಸ್ತೆಯಲ್ಲಿ ಸಂಚರಿಸೋ ವೇಳೆ ಆಟೋ ರಾಜಕಾಲುವೆಗೆ ಉರುಳಿ ಬಿದ್ದಿದೆ.

ಇದನ್ನೂ ಓದಿ: ಪೊಲೀಸರ ವಶದಲ್ಲಿದ್ದ ಆರೋಪಿ ಸಾವು; ASP ಕಾರಿನ ಮೇಲೆ ಕಲ್ಲು ತೂರಾಟ; ಉದ್ರಿಕ್ತರ ಮೇಲೆ ಲಾಠಿ ಚಾರ್ಜ್​

Advertisment

ಮಳೆ ಸುರಿಯುತ್ತಿದ್ದರಿಂದ ನೀರು ರಸ್ತೆ ಹಾಗೂ ರಾಜಕಾಲುವೆಗೆ ಸಮಾನವಾಗಿ ಹರಿಯುತ್ತಿತ್ತು. ಇದು ತಿಳಿಯದೆ ಆಟೋ ರಾಜಕಾಲುವೆಗೆ ಬಿದ್ದಿದೆ. ಇನ್ನು ಘಟನೆಯಿಂದ ಸಾರ್ವಜನಿಕರು ಕೆಂಡಾಮಂಡಲರಾಗಿದ್ದು, ಆಟೋ ಚಾಲಕನ ಸಾವಿಗೆ ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯವೇ ಕಾರಣ ಎಂದು ಹೇಳುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment