ಬೆಳ್ಳಂಬೆಳಗ್ಗೆ ಆಟೋ ಮೇಲೆ ಹರಿದ ಕ್ರೇನ್.. ಡ್ರೈವರ್​ ಸಾವು

author-image
AS Harshith
Updated On
ಬೆಳ್ಳಂಬೆಳಗ್ಗೆ ಆಟೋ ಮೇಲೆ ಹರಿದ ಕ್ರೇನ್.. ಡ್ರೈವರ್​ ಸಾವು
Advertisment
  • ಡ್ಯೂಟಿ ಮುಗಿಸಿ ಆಟೋದಲ್ಲೇ ಮಲಗಿದ್ದ ಡ್ರೈವರ್​
  • ರಸ್ತೆ ಅಪಘಾತಕ್ಕೆ ಸಾವನ್ನಪ್ಪಿದ ಆಟೋ ಡ್ರೈವರ್
  • ಆಟೋದಲ್ಲಿ ಮಲಗಿದ್ದ ಡ್ರೈವರ್​.. ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಕ್ರೇನ್​

ಬೆಂಗಳೂರು: ಬೆಳ್ಳಂಬೆಳಗ್ಗೆ ಆಟೋ ಮೇಲೆ ಕ್ರೇನ್ ಹರಿದು ಡ್ರೈವರ್ ಸಾವನ್ನಪ್ಪಿದ ಘಟನೆ ನಡೆದಿದೆ. ಮೌರ್ಯ ಸರ್ಕಲ್​ನಲ್ಲಿ ಈ ದುರ್ಘಟನೆ ಸಂಭವಿಸಿದೆ.

ಬೆಳಿಗ್ಗೆ 6.50ಕ್ಕೆ ನಡೆದಿರುವ ಘಟನೆ ಇದಾಗಿದ್ದು, ರಸ್ತೆ ಅಪಘಾತಕ್ಕೆ ಆಟೋ ಡ್ರೈವರ್​ ವಿನೋದ್ (35) ಬಲಿಯಾಗಿದ್ದಾನೆ.

ಇದನ್ನೂ ಓದಿ: 7 ಕಡೆ ಮುರಿದಿರೋ ಮೂಳೆ, 8 ಬಾರಿ ಎಲೆಕ್ಟ್ರಿಕ್ ಶಾಕ್.. ರೇಣುಕಾಸ್ವಾಮಿಗೆ ‘ಡಿ’ ಗ್ಯಾಂಗ್ ಕೊಟ್ಟ ಚಿತ್ರಹಿಂಸೆ ಹೀಗಿದೆ

ಬೆಳಿಗ್ಗೆ ಡ್ಯುಟಿ ಮುಗಿಸಿ ಬಂದು ರಸ್ತೆ ಪಕ್ಕದಲ್ಲಿ ಆಟೋ ಹಾಕಿ ಡ್ರೈವರ್ ಮಲಗಿದ್ದನು. ಆದರೆ ಹಿಂದೆಯಿಂದ ಬಂದು ಆಟೋಗೆ ಗುದ್ದಿದ ಕ್ರೇನ್​ ಆಟೋ ಡ್ರೈವರ್ ಜೀವವನ್ನು ಬಲಿ ತೆಗೆದುಕೊಂಡಿದೆ.

ಇದನ್ನೂ ಓದಿ: ಇನ್ಮುಂದೆ ಶಾಲೆಗಳಲ್ಲಿ ಹುಟ್ಟುಹಬ್ಬ ಆಚರಿಸುವಂತಿಲ್ಲ.. ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ವಿನೋದ್ ತಲೆ‌ ಮೇಲೆ ಕ್ರೇನ್ ಹರಿದಿದೆ. ಪರಿಣಾಮ ಆಟೋ ಡ್ರೈವರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ‘

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment