/newsfirstlive-kannada/media/post_attachments/wp-content/uploads/2024/10/Juned-Khan-1.jpg)
ಕ್ರಿಕೆಟ್​ ಅನ್ನೋದೇ ಹಾಗೇ ಎಂತವರನ್ನೂ ಆಕರ್ಷಿಸುತ್ತದೆ. 23ನೇ ವರ್ಷದವರೆಗೂ ಮನಸ್ಸಲ್ಲಿ ಕ್ರಿಕೆಟರ್​ ಆಗಬೇಕು ಅನ್ನೋ ಚಿಕ್ಕ ಆಸೆ, ಹಂಬಲ ಇಟ್ಟುಕೊಳ್ಳದ ಆಟೋ ಡ್ರೈವರ್​, ಈಗ ಕ್ರಿಕೆಟರ್​. ಮುಂದಿನ ದಿನಗಳಲ್ಲಿ ಮುಂಬೈ ಕ್ರಿಕೆಟ್​ನ ಪೇಸ್​​ ಸೆನ್ಸೇಷನ್​ ಆಗೋ ಎಲ್ಲಾ ಸಾಮರ್ಥ್ಯ ಈತನಿಗಿದೆ.
ಆಟೋ ಡ್ರೈವರ್​ ಮಗ ಮೊಹಮ್ಮದ್​ ಸಿರಾಜ್​ ಈಗ ಟೀಮ್​ ಇಂಡಿಯಾದ ಮೇನ್​ ವೆಪನ್​​. ತನ್ನ ವೇಗದ ಬೌಲಿಂಗ್​ನಿಂದಲೇ ಮೋಡಿ ಮಾಡಿರುವ ಸಿರಾಜ್, ವಿಶ್ವ ಕ್ರಿಕೆಟ್​ನ ಒನ್​ ಆಫ್​ ದ ಬೆಸ್ಟ್​ ಬೌಲರ್​ ಎನಿಸಿಕೊಂಡಿದ್ದಾರೆ. ಅಗ್ರೆಸ್ಸಿವ್​ ಆಟದಿಂದಲೇ ಟೀಮ್​ ಇಂಡಿಯಾ ಮ್ಯಾಚ್​ ವಿನ್ನಿಂಗ್​ ಬೌಲರ್​ ಆಗಿ ರೂಪುಗೊಂಡಿದ್ದಾರೆ. ಇದು ಆಟೋ ಡ್ರೈವರ್​​ ಮಗನ ಸಕ್ಸಸ್​ ಕಥೆಯಾದ್ರೆ ಇಲ್ಲೊಬ್ಬ ಸ್ವತಃ ಆಟೋ ಡ್ರೈವರ್​​ ಟೀಮ್​ ಇಂಡಿಯಾದ ನೆಕ್ಸ್ಟ್​ ಪೇಸ್​ ಸೆನ್ಸೇಷನ್​ ಆಗೋ ಕನಸು ಕಾಣ್ತಿದ್ದಾನೆ.
ಇದನ್ನೂ ಓದಿ:ಧೋನಿ ಮನೆ ಮುಂದೆ ಒಂದು ವಾರ ಟೆಂಟ್ ಹಾಕಿ ವಾಸ.. 1200 KM ದೂರ ಬಂದಿದ್ದವನಿಗೆ ದರ್ಶನವಾಯ್ತಾ?
ಇರಾನಿ ಟ್ರೋಫಿಯಲ್ಲಿ ಆಟೋ ಡ್ರೈವರ್​​ ಕಮಾಲ್
ಮೊನ್ನೆ ನಡೆದ ಇರಾನಿ ಟ್ರೋಫಿ ಟೂರ್ನಿಯಲ್ಲಿ ಮುಂಬೈ ತಂಡ ಚಾಂಪಿಯನ್​ ಆಗಿ ಹೊರಹೊಮ್ಮಿತು. ರೆಸ್ಟ್​ ಆಫ್​ ಇಂಡಿಯಾವನ್ನ ಮಣಿಸಿ ಬರೋಬ್ಬರಿ 27 ವರ್ಷಗಳ ಬಳಿಕ ಟ್ರೋಫಿ ಗೆದ್ದು ಬೀಗಿತು. ಈ ಗೆಲುವಿನಲ್ಲಿ ಮುಂಬೈ ಪರ ಡೆಬ್ಯೂ ಮಾಡಿದ ಮೊಹಮ್ಮದ್​ ಜುನೇದ್​ ಖಾನ್​ ಹಲವರ ಗಮನ ಸೆಳೆದ್ರು. ಪಡೆದಿದ್ದು ಒಂದೇ ವಿಕೆಟ್​ ಆದ್ರೂ, ಈತನ ಸಾಲಿಡ್​​ ಸ್ಪೆಲ್​ಗಳು ಎಲ್ಲರ ಕಣ್ಣು ಕುಕ್ಕಿದ್ವು.
ಆಟೋ ಡ್ರೈವರ್​, ಕ್ರಿಕೆಟರ್​ ಆದ ಕಥೆಯೇ ರೋಚಕ..!
ಮುಂಬೈ ಪರ ಡೆಬ್ಯೂ ಮಾಡಿದ ಪಂದ್ಯದಲ್ಲೇ ಸಾಲಿಡ್​​ ಸ್ಪೆಲ್​ ಹಾಕಿ ಗಮನ ಸೆಳೆದ ಈ ಜುನೇದ್​ ಖಾನ್​ ಮೂಲತಃ ಉತ್ತರ ಪ್ರದೇಶದವರು. ತೀರಾ ಇತ್ತೀಚೆಗೆ 2019ರವರೆಗೆ ನಾನು ಕ್ರಿಕೆಟರ್​ ಆಗಬೇಕು ಅನ್ನೋ ಯಾವ ಆಸೆಯೂ ಈತನಿಗಿರಲಿಲ್ಲ. ಸದ್ಯ ಟೀಮ್​ ಇಂಡಿಯಾದ ಅಸಿಸ್ಟೆಂಟ್​ ಕೋಚ್​ ಆಗಿರೋ ಅಭಿಷೇಕ್​ ನಾಯರ್​, ಭೇಟಿ ಈತನನ್ನ ಬದಲಾಯಿಸಿತು. ಆಡೋ ಡ್ರೈವರ್​ ಮನದಲ್ಲಿ ಕ್ರಿಕೆಟರ್​​ ಆಗೋ ಬಯಕೆ ಹುಟ್ಟಿಸಿತು.
ಇದನ್ನೂ ಓದಿ:ರಶೀದ್ ಖಾನ್ ಮದ್ವೆಯಾದ ಸುದ್ದಿ ಕೇಳ್ತಿದ್ದಂತೆ ರೊಚ್ಚಿಗೆದ್ದ ಅಫ್ಘಾನ್ ಕ್ರಿಕೆಟ್ ಫ್ಯಾನ್ಸ್.. ಯಾಕೆ..?
KKR Academy's Junaid Khan dismisses a ROI player in the ongoing Irani Cup. pic.twitter.com/2LwLhudnF5
— KnightRidersXtra (@KKR_Xtra) October 3, 2024
ಆಟೋ ಡ್ರೈವರ್​ to ಕ್ರಿಕೆಟರ್
ಉದ್ಯೋಗ ಅರಸಿ ಕುಟುಂಬ ಸಮೇತವಾಗಿ ಜುನೈದ್​ ಖಾನ್​ ​2014ರಲ್ಲಿ ಉತ್ತರ ಪ್ರದೇಶದಿಂದ ಮುಂಬೈಗೆ ಶಿಫ್ಟ್​ ಆದ್ರು. ಜೀನ್ಸ್​ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಸೇರಿದ ಜುನೇದ್​ ಖಾನ್​, ಅದ್ರ ಜೊತೆಗೆ ಆಟೋಡ್ರೈವರ್​​ ಆಗಿಯೂ ಕುಟುಂಬಕ್ಕಾಗಿ ದುಡಿಯಲು ಆರಂಭಿಸಿದ್ರು. 2015ರಿಂದ 2019ವರೆಗೆ ಸುಮಾರು 4 ವರ್ಷಗಳ ಕಾಲ ಆಟೋಡ್ರೈವರ್​ ಆಗಿಯೇ ಬದುಕು ಕಟ್ಟಿಕೊಂಡ ಜನೈದ್​ ಖಾನ್​, 2019ರಲ್ಲಿ ಆಕಸ್ಮಿಕವಾಗಿ ಅಭಿಷೇಕ್​ ನಾಯರ್ ಭೇಟಿಯಾದ್ರು. ಆ ಭೇಟಿಯ ವೇಳೆ ಕ್ರಿಕೆಟ್​ ಮೇಲಿನ ಪ್ರೀತಿ, ಆಸಕ್ತಿಯ ಬಗ್ಗೆ ಹೇಳಿಕೊಂಡ್ರು. ನಂತರದಲ್ಲಿ ಅವರದ್ದೇ ಕ್ಲಬ್​ನಲ್ಲಿ ಜುನೈದ್​ ಮಾಡಿದ ಬೌಲಿಂಗ್​ಗೆ ಅಭಿಶೇಕ್​ ನಾಯರ್ ಮಾರು ಹೋದ್ರು. ಬಳಿಕ ಸಂಜೀವಿನಿ ಕ್ರಿಕೆಟ್​ ಕ್ಲಬ್​ ಸೇರಿದ ಜುನೇದ್​ರಲ್ಲಿ ಕ್ರಿಕೆಟರ್​ ಆಗೋ ಕನಸು ಹುಟ್ಟಿಕೊಳ್ತು.
/newsfirstlive-kannada/media/post_attachments/wp-content/uploads/2024/10/Juned-Khan.jpg)
ಕ್ಲಬ್​ ಕ್ರಿಕೆಟ್​ನಿಂದ KKR
ಸಂಜೀವಿನಿ ಕ್ರಿಕೆಟ್​ ಕ್ಲಬ್​ ಸೇರಿದ ಬಳಿಕ ಸ್ಥಳೀಯ ಲೀಗ್​ ಹಾಗೂ ಕ್ಲಬ್​ ಕ್ರಿಕೆಟ್​​ಗಳಲ್ಲಿ ಜುನೇದ್​ ಭಾಗವಹಿಸ್ತಿದ್ದರು. ಬಳಿಕ ಬುಚ್ಚಿಬಾಬು ಟೂರ್ನಮೆಂಟ್​, ಕರ್ನಾಟಕ ಕ್ರಿಕೆಟ್​ ಅಕಾಡೆಮಿ ನಡೆಸೋ ಪಂದ್ಯಗಳಲ್ಲೂ ಆಡಿದ್ರು. ಅಂತಿಮವಾಗಿ ನೆಟ್​ ಬೌಲರ್​ ಆಗಿ ಕೆಕೆಆರ್​ ತಂಡವನ್ನ ಕೂಡಿಕೊಂಡರು. ಅಲ್ಲೂ ಅಭಿಷೇಕ್​ ನಾಯರ್​ ಮಾರ್ಗದರ್ಶನ ಜುನೈದ್​ಗೆ ಸಿಕ್ಕಿತ್ತು. ಬಳಿಕ 2019ರ ವಿಶ್ವಕಪ್​ ವೇಳೆ ಟೀಮ್​ ಇಂಡಿಯಾದ ನೆಟ್​ ಬೌಲರ್​ ಆಗಿಯೂ ಜುನೇದ್​ ತಂಡದೊಂದಿಗಿದ್ರು.
ಕ್ಲಬ್​ ಕ್ರಿಕೆಟ್​ಗಳನ್ನ ಆಡಿ ನೆಟ್​ ಬೌಲರ್​ ಆಗಿದ್ದ ಜುನೇದ್​ ಖಾನ್​, ಇದೀಗ ಫಸ್ಟ್​ ಕ್ಲಾಸ್​ ಕ್ರಿಕೆಟ್​ಗೆ ಡ್ರೀಮ್​ ಡೆಬ್ಯೂ ಮಾಡಿದ್ದಾರೆ. ಮುಂದೆ ರಣಜಿಯಲ್ಲಿ ಮುಂಬೈ ಪ್ರತಿನಿಧಿಸಿ, ಅಲ್ಲಿ ಮಿಂಚಿನ ಪ್ರದರ್ಶನ ನೀಡಿ ಟೀಮ್​ ಇಂಡಿಯಾಗೆ ಎಂಟ್ರಿ ಕೊಡೋದು ಜುನೇದ್​ ಕನಸಾಗಿಸಿದೆ. ಆ ಕನಸು ನನಸಾಗಲಿ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us