/newsfirstlive-kannada/media/post_attachments/wp-content/uploads/2025/07/Satchidanand-Shri-6.jpg)
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಷ್ಟೂರು ಬಳಿಯಿರುವ ಬರಗಾಲ ಸಿದ್ದಪ್ಪ ಮಠದ ಆವರಣದಲ್ಲಿ ಅವಧೂತರೊಬ್ಬರು ಲೋಕ ಕಲ್ಯಾಣಕ್ಕಾಗಿ ಮರವೇರಿದ್ದಾರೆ!
ಆ ಸ್ವಾಮೀಜಿ ಹೆಸರು ಸಚ್ಚಿದಾನಂದ ಶ್ರೀ. ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬಾದ್ಯಪುರದ ಅವಧೂತ ಸ್ವಾಮೀಜಿ. ಇದೀಗ ಕೊಪ್ಪಳಕ್ಕೆ ಬಂದು ಮರದ ಮೇಲೆ ಗೂಡು ಕಟ್ಟಿ ದಿನವೀಡಿ ನಿಯಮಗಳನ್ನು ಅನುಷ್ಠಾನ ಮಾಡ್ತಿದ್ದಾರೆ. ದಿನಕ್ಕೆ ಒಂದು ಬಾರಿ ಮಾತ್ರ ಹಾಲು ಕುಡಿಯುತ್ತಿದ್ದಾರೆ. ಅದನ್ನು ಬಿಟ್ಟರೆ ಬೇರೆ ಏನನ್ನೂ ಸೇವನೆ ಮಾಡ್ತಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಸಿಂಪಲ್ ಆಗಿ ಕಾಣೋ ಧನುಷ್ ಎಷ್ಟು ಕೋಟಿ ಒಡೆಯ.. ನೀವು ಅಂದುಕೊಂಡಾಗೆ ಇಲ್ಲ ಈ ನಟ!
ಮಾಹಿತಿಗಳ ಪ್ರಕಾರ, 101 ದಿನ ಮರದಲ್ಲಿಯೇ ಕುಳಿತು ಧ್ಯಾನ ಮಾಡಲಿದ್ದಾರಂತೆ. 2012ರಲ್ಲೂ ಆಲದಮರದಲ್ಲಿ ಅನುಷ್ಠಾನಕ್ಕೆ ಕುಳಿತಿದ್ದರು. ಅಂದು ಅವರ ನಡೆ ದೇಶದಾದ್ಯಂತ ಸದ್ದು ಮಾಡಿತ್ತು. ಇದೀಗ ಮತ್ತೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಮುಷ್ಟೂರು ಬಳಿಯಿರುವ ಬರಗಾಲ ಸಿದ್ದಪ್ಪ ಮಠದ ಆವರಣದಲ್ಲಿ ಧ್ಯಾನಕ್ಕೆ ಕೂತಿದ್ದಾರೆ.
ಅಂದು ಆಲದ ಮರ..
ಅಂದು ಆಲದ ಮರವೇರಿ ಕೂತಿದ್ದ ಸ್ವಾಮೀಜಿ, ಇಂದು ಮಾವಿನ ಮರದ ಮೇಲೆ ಗೂಡು ಕಟ್ಟಿದ್ದಾರೆ. ಮರದ ಮೇಲೆ ಕುಳಿತು ಮೌನವೃತ ಕೈಗೊಂಡಿದ್ದಾರೆ. ಸ್ವಾಮೀಜಿಯನ್ನು ನೋಡಿದ ಭಕ್ತರು ಅಚ್ಚರಿಗೆ ಒಳಗಾಗಿದ್ದಾರೆ.
ಇದನ್ನೂ ಓದಿ: ಪಂತ್ ಭಾವುಕ ಸಂದೇಶ.. ಟೆಸ್ಟ್ನಿಂದ ಹೊರಬಿದ್ದ ಬೆನ್ನಲ್ಲೇ ತಂಡಕ್ಕೆ ಬಿಗ್ ಮೆಸೇಜ್..!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ