/newsfirstlive-kannada/media/post_attachments/wp-content/uploads/2025/03/uttarakhand-avalanche.jpg)
ದಕ್ಷಿಣದಲ್ಲಿ ಬಿಸಿಲ ಬಗ್ಗೆ ಎಚ್ಚರಿಕೆ ಕೊಡ್ತಿದ್ದ ಭಾರತ ಹವಾಮಾನ ಇಲಾಖೆ. ಉತ್ತರದಲ್ಲೂ ಮಳೆ ಬಗ್ಗೆ ಹಿಮಸ್ಫೋಟದ ಬಗ್ಗೆ ಸಾರಿ ಸಾರಿ ಹೇಳಿತ್ತು.. ಹವಾಮಾನ ಇಲಾಖೆ ಮುಂಚಿತವಾಗಿ ಗ್ರಹಿಸಿದ ರೀತಿಯೇ ನಡೆದು ಹೋಗಿದೆ ಅನೇಕರ ಜೀವ ಸಂಕಷ್ಟದಲ್ಲಿ ಸಿಲುಕಿದೆ.
ರಾಜ್ಯದ ಕರಾವಳಿ ಭಾಗದಲ್ಲಿ ಬಿಸಿಗಾಳಿ. ಸೌಥ್ ಇಂಡಿಯಾದ ಅನೇಕ ಕಡೆ ಯೆಲ್ಲೂ ಅಲರ್ಟ್ ಅಂತಾ ಜನ ತಲೆ ಮೇಲೆ ಬಟ್ಟೆ ಹಾಕ್ಕೊಂಡು ಬಿಸಿಬಿಸಿ ಥವಾದಲ್ಲಿ ಮಾಡ್ತಿರೋ ಅಡುಗೆ ರೀತಿ ಬೆಂದು ಹೋಗ್ತಿದ್ದಾರೆ..ಅರೋಗ್ಯದಲ್ಲಿ ಏರುಪೇರಾಗಿ ಅನೇಕರು ಆಸ್ಪತ್ರೆಗಳತ್ತ ಮುಖ ಮಾಡ್ತಿದ್ದಾರೆ.. ಇದು ದಕ್ಷಿಣ ಭಾರತದ ಸ್ಥಿತಿ.. ಆದ್ರೆ ಉತ್ತರ ಭಾರತದ ಸ್ಥಿತಿನೇ ಬೇರೆ.. ಅಲ್ಲಿ ಮಳೆ.. ಹಿಮದ ಆರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ.
ಹವಾಮಾನ ಇಲಾಖೆ ಮುಂಚಿತವಾಗಿ ಗ್ರಹಿಸಿದ ರೀತಿಯೇ ಉತ್ತರಾಖಂಡ್‌ನಲ್ಲಿ ಭಾರೀ ಹಿಮಸ್ಫೋಟವಾಗಿದೆ. ಚಮೋಲಿಯಲ್ಲಿ ಸಂಭವಿಸಿರುವ ಹಿಮಪಾತವು ಹತ್ತಾರು ಜನರನ್ನು ಹಿಮದ ಹಾಸಿನ ಕೆಳಗೆ ಮುಚ್ಚಿ ಹಾಕಿದೆ. ದೇಶದ ಗಡಿಗಳಲ್ಲಿ ಹಾಗೂ ಕಠಿಣ ಹಾದಿಗಳಲ್ಲಿ ರಸ್ತೆಗಳನ್ನು ನಿರ್ಮಿಸುವ, ಅವುಗಳನ್ನು ಸರಿಪಡಿಸುವ ಕೆಲಸಗಳಲ್ಲಿ ತೊಡಗುವ ಬಾರ್ಡರ್ ರೋಡ್ಸ್ ಆರ್ಗನೈಸೇಷನ್‌ನ ಸಿಬ್ಬಂದಿ ಹಿಮಪಾತದಿಂದ ಸಾವು-ಬದುಕಿನ ನಡುವೆ ಹೋರಾಡ್ತಿದ್ದಾರೆ.
ಬದರಿನಾಥ ದೇಗುಲದ 3 ಕಿಲೋ ಮೀಟರ್ ಸಮೀಪದಲ್ಲಾದ ಹಿಮಸ್ಫೋಟದಿಂದ ಕಾಮಗಾರಿ ನಡೆಸ್ತಿದ್ದ 57ಕ್ಕೂ ಹೆಚ್ಚು ಬಾರ್ಡರ್ ರೋಡ್ ಆರ್ಗನೈಸೇಷನ್ ಕಾರ್ಮಿಕರು ಹಿಮದಲ್ಲಿ ಸಿಲುಕಿದ್ದರು. ಇಲ್ಲಿಯವರೆಗೆ 32 ಕಾರ್ಮಿಕರನ್ನು ರಕ್ಷಿಸಲಾಗಿದೆ. ಮೈಮರಗಟ್ಟಿರುವ ಚಳಿ, ಎಲ್ಲೆಲ್ಲೂ ತುಂಬಿರುವ ಹಿಮ, ಏನೂ ಕಾಣದ ಕಗ್ಗತ್ತಲಲ್ಲಿ ರಕ್ಷಣಾ ಕಾರ್ಯಾಚರಣೆ ದೊಡ್ಡ ಸವಾಲಾಗಿದೆ. ಸದ್ಯ ಕಾರ್ಯಾಚರಣೆಯಲ್ಲಿ ಸ್ಥಗಿತಗೊಳಿಸಿದ್ದು, ಮುಂಜಾನೆಯಿಂದ ಮತ್ತೆ ಭಾರತೀಯ ಸೇನೆಯು ತುರ್ತು ರಕ್ಷಣಾ ಕಾರ್ಯಾಚರಣೆಯನ್ನ ಮುಂದುವರಿಸಿಲಿದೆ. ಸುಮಾರು 170 ಯೋಧರು ಹಾಗೂ ವೈದ್ಯಕೀಯ ತಂಡಗಳು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಸಿಎಂ ಧಾಮಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಚರ್ಚೆ
ಸಿಎಂ ಪುಷ್ಕರ್ ಸಿಂಗ್ ಧಾಮಿ ಜೊತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಮೂಲಕ ಘಟನೆ ಮತ್ತು ರಕ್ಷಣೆ ಕಾರ್ಯದ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದಾರೆ. ಹಿಮಪಾತ ಪೀಡಿತ ಪ್ರದೇಶದಲ್ಲಿ ಸಿಲುಕಿರುವ ಜನರಿಗೆ ಸಹಾಯ ಮಾಡಲು ಉತ್ತರಾಖಂಡ ಸರ್ಕಾರ ಸಭೆ ನಡೆಸಿ ಸಹಾಯವಾಣಿ ಸಂಖ್ಯೆಗಳ ವ್ಯವಸ್ತೆ ಮಾಡಿದೆ.
ನೋಡನೋಡ್ತಿದ್ದಂತೆ ರಸ್ತೆ ಮೇಲೆ ಕೊಚ್ಚಿ ಹೋದ ಕಾರು-ಬೈಕ್
ಮೇಲ್ಭಾಗದ ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕುಲು ಜಿಲ್ಲೆಯ ಶಾಸ್ತ್ರಿನಗರದಲ್ಲಿ ನೋಡನೋಡ್ತಿದ್ದಂತೆ ಕಾರುಗಳು-ಬೈಕ್‌ಗಳು ಕೊಚ್ಚಿ ಹೋಗಿವೆ. ತಗ್ಗು ಪ್ರದೇಶದಜನರನ್ನು ಸುರಕ್ಷಿತ ಪ್ರದೇಶಗಳಿಗೆ ಶಿಫ್ಟ್ ಮಾಡಲಾಗಿದೆ. ಇನ್ನು ಹಿಮಪಾತದಿಂದ ಹಲವು ಮನೆಗಳಿಗೆ ಹಾನಿ ಆಗಿದೆ.
ಉತ್ತರಾಖಂಡ್ ಮತ್ತು ಹಿಮಾಚಲ ಪ್ರದೇಶದಲ್ಲಿ ಹಿಮಪಾತದಿಂದ ಭಾರೀ ಅವಾಂತರ ಸೃಷ್ಟಿಯಾಗಿದೆ. ರಕ್ಷಣೆಗಿಳಿದಿರೋ ಪೊಲೀಸರು ಹಾಗೂ ಸೇನಾಪಡೆಗೆ ನಿರಂತರ ಹಿಮಪಾತವು ಅಡ್ಡಿಯಾಗುತ್ತಿದೆ. ಅದ್ಹೇನೆ ಇರಲಿ.. ಕಾರ್ಮಿಕರ ಕುಟುಂಬಗಳು ಬದರಿನಾಥ ಮುಂದೆ ಕೈ ಚಾಚಿನಿಂತಿದ್ದು, ಯಾವಾಗ ಯಾವ ಸುದ್ದಿ ಕೇಳಬೇಕೋ ಅನ್ನೋ ಭಯದಲ್ಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ