/newsfirstlive-kannada/media/post_attachments/wp-content/uploads/2025/03/Abishek-Ambareesh.jpg)
ಬೆಂಗಳೂರು: ಮೊನ್ನೆಯಷ್ಟೇ ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರ ಮಗನ ನಾಮಕರಣ ಶಾಸ್ತ್ರ ಆಗಿತ್ತು.
ಇದನ್ನೂ ಓದಿ: ಪುನೀತ್ ರಾಜ್‌ಕುಮಾರ್‌ಗೆ RCB ವಿಶೇಷ ಗೌರವ.. ಶಿವಣ್ಣ ಭಾವುಕ; ಮನಮಿಡಿಯೋ ವಿಡಿಯೋ ಇಲ್ಲಿದೆ!
ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನಿಗೆ ‘ರಾಣಾ ಅಭಿಷೇಕ್ ಅಮರ್’ ಎಂದು ಹೆಸರು ಇಡಲಾಗಿದೆ.
ಈಗ ಅವಿವಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಗನ ನಾಮಕರಣ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಅಭಿಷೇಕ್ ಅಂಬರೀಶ್, ಅವಿವಾ ಬಿದ್ದಪ್ಪ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದಾರೆ. ಅವಿವಾ ಅವರು ರೇಷ್ಮೆ ಸೀರೆ ಉಟ್ಟು ಮಿರ ಮಿರ ಮಿಂಚಿದ್ದಾರೆ.
ಇನ್ನು ಅಭಿಷೇಕ್ ಕೂಡ ರೇಷ್ಮೆ ಪಂಚೆ, ಶರ್ಟ್ ಧರಿಸಿಕೊಂಡ ಸಮಾರಂಭದಲ್ಲಿ ಭಾಗಿಯಾಗಿದ್ದಾರೆ.
ಮತ್ತೊಂದು ಕಡೆ ಸುಮಲತಾ ಅವರು ಮೊಮ್ಮಗನ ನಾಮಕರಣ ಶಾಸ್ತ್ರದಲ್ಲಿ ಲಕ ಲಕ ಅಂತ ಕಾಣಿಸಿಕೊಂಡಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಮೊಮ್ಮಗನಿಗೆ ಕಿಚ್ಚ ಸುದೀಪ್ ಅವರು ತೊಟ್ಟಿಲು ರೀತಿಯ ಬುಟ್ಟಿಯಲ್ಲಿ ಪುಟ್ಟ, ಪುಟ್ಟ ಟೆಡ್ಡಿ ಬೇರ್, ಮೊಲದ ಮರಿಗಳನ್ನು ಉಡುಗೊರೆಯಾಗಿ ನೀಡಿದ್ದರು.
ಅವಿವಾ ಬಿಡಪ್ಪ ಹಾಗೂ ಅಭಿಷೇಕ್ ಅಂಬರೀಶ್ ಮಗನ ನಾಮಕರಣಕ್ಕೆ ಗುರುಕಿರಣ್, ರಾಕ್ಲೈನ್ ವೆಂಕಟೇಶ್ ಹಾಗೂ ಕುಟುಂಬದ ಆಪ್ತರು ಬಂದಿದ್ದರು.
ಬೆಂಗಳೂರಿನ ಜೆಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್‌ನಲ್ಲಿ ಈ ಶುಭ ಸಮಾರಂಭ ನಡೆದಿತ್ತು. ಈ ಶಾಸ್ತ್ರದಲ್ಲಿ ಅನೇಕ ತಾರೆಯರು ಭಾಗಿಯಾಗಿ ಖುಷಿಪಟ್ಟಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಫೋಟೋ ಜೊತೆಗೆ ಅವಿವಾ ಅವರು ಕನ್ನಡಲ್ಲೇ ರಾಣಾ ಅಮರ್ ಅಂಬರೀಶ್ ಅಂತ ಬರೆದುಕೊಂಡಿದ್ದಾರೆ. ಇದನ್ನೇ ನೋಡಿ ಅಭಿಮಾನಿಯೊಬ್ಬರು, ಕನ್ನಡದಲ್ಲಿ ಮೆಸೇಜ್ ಮಾಡ್ತಿರಲ್ಲ ಬಾಳ ಖುಷಿಯಾಗುತ್ತದೆ ಜೈ ಕನ್ನಡ ಜೈ ಕರ್ನಾಟಕ ಮಾತೆ ಅಂತ ಕಾಮೆಂಟ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ