ಬೇಸಿಗೆಯಲ್ಲಿ ಫ್ರಿಡ್ಜ್​ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನೋ ಮುನ್ನ ಎಚ್ಚರ! ಓದಲೇಬೇಕಾದ ಸ್ಟೋರಿ

author-image
Ganesh Nachikethu
Updated On
ಬೇಸಿಗೆಯಲ್ಲಿ ಫ್ರಿಡ್ಜ್​ನಲ್ಲಿಟ್ಟ ಕಲ್ಲಂಗಡಿ ಹಣ್ಣು ತಿನ್ನೋ ಮುನ್ನ ಎಚ್ಚರ! ಓದಲೇಬೇಕಾದ ಸ್ಟೋರಿ
Advertisment
  • ಶೇ. 95ರಷ್ಟು ನೀರನ್ನು ಹೊಂದಿರುವ ಹಣ್ಣು ಕಲ್ಲಂಗಡಿ
  • ದಣಿದಿದ್ದವರಿಗೆ ಕಲ್ಲಂಗಡಿ ಹಣ್ಣು ಬೆಸ್ಟ್; ಇದರಲ್ಲಿದೆ ಮಿಟಮಿನ್​ಎ ಮತ್ತು ಸಿ​
  • ಡಯೆಟ್​ ಮಾಡುವವರಿಗೆ ಕಲ್ಲಂಗಡಿ ಹಣ್ಣು ಬೆಸ್ಟ್​.. ಯಾಕಂದ್ರೆ ಈ ಸ್ಟೋರಿ ಓದಿ!

ಕಲ್ಲಂಗಡಿ ಸದ್ಯ ಬಿಸಿಲ ತಾಪಕ್ಕೆ ಈ ಹಣ್ಣು ಬೆಸ್ಟ್​. ಯಾಕಂದ್ರೆ ಶೇ. 95ರಷ್ಟು ನೀರನ್ನು ಹೊಂದಿರುವ ಈ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಲಾಭಗಳಿವೆ. ಆದರೆ ಫ್ರಿಡ್ಜ್​ನಲ್ಲಿಟ್ಟ ಕಲ್ಲಂಗಡಿ ಹಣ್ಣನ್ನು ಮಾತ್ರ ಸವಿಯಲು ಹೋಗಬೇಡಿ.. ಯಾಕಂದ್ರೆ ಈ ಸ್ಟೋರಿ ಓದಿ.

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಬಹಳ ಡಿಮ್ಯಾಂಡ್​​. ಇದರ ಜ್ಯೂಸಿಗೆ ವಿಶೇಷ ಬೇಡಿಕೆ. ಅದರಲ್ಲೂ ದಣಿದಿದ್ದವರು ಕಲ್ಲಂಗಡಿ ಹಣ್ಣನ್ನು ಸವಿಯಲು ಮುಂದಾಗುತ್ತಾರೆ. ಆದರೆ ಫ್ರಿಡ್ಜ್​ನಲ್ಲಿಟ್ಟು ಕೊಂಚ ತಂಪಾದ ಬಳಿಕ ತಿನ್ನುತ್ತೇನೆ ಎನ್ನುವವರು ಅಂತಹ ತಪ್ಪ ಮಾಡಬೇಕು. ಯಾಕಂದ್ರೆ ಆರೋಗ್ಯ ಸಮಸ್ಯೆ ನಿಮ್ಮನ್ನು ಭಾದಿಸಬಹುದು.

[caption id="attachment_55163" align="alignnone" width="800"]publive-imageಕಲ್ಲಂಗಡಿ ಹಣ್ಣು[/caption]

ಕಲ್ಲಂಗಡಿ ಹಣ್ಣಿನಲ್ಲಿ ಸಿಟ್ರುಲಿನ್ ಅಂಶವನ್ನು ಹೊಂದಿದೆ. ಅಮೈನೋ ಅಮ್ಲಜನಕ ಇದರಲ್ಲಿದೆ. ಮಿಟಮಿನ್​ಎ ಮತ್ತು ಸಿ ಜೊತೆಗೆ ಮಿಟಮಿನ್​​​ ಬಿ 6 ಹೊಂದಿದೆ. ಇದರಲ್ಲಿ ನೈಟ್ರಿಕ್​​ ಆಕ್ಸೈಡ್​​ 6 ಇರೋ ಕಾರಣ ಇದನ್ನು ಸೇವಿಸಿದರೆ ಆರೋಗ್ಯಕ್ಕೆ ಲಾಭವಿದೆ.

ಕಡಿಮೆ ಕ್ಯಾಲೋರಿಯನ್ನು ಹೊಂದಿರುವ ಈ ಹಣ್ಣು, ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಿಸುತ್ತದೆ. ಡಯೆಟ್​ ಮಾಡುವವರಿಗೆ ಇದು ಬೆಸ್ಟ್​ ಅಂದರೆ ತಪ್ಪಿಲ್ಲ.

ಮುಖ್ಯ ವಿಚಾರವೆಂದರೆ ಕಲ್ಲಂಗಡಿ ಹಣ್ಣನ್ನು ರೆಫ್ರಿಜರೇಟರ್​ನಲ್ಲಿ ಇಡುವುದರಿಂದ ಪೌಷ್ಟಿಕಾಂಶದ ಮೌಲ್ಯ ಕಡಿಮೆಯಾಗುತ್ತದೆ. ಇದನ್ನು ಸೇವಿಸುದರಿಂದ ಅದರಲ್ಲಿ ಸರಿಯಾದ ಪೋಷಕಾಂಶ ಸಿಗದೇ ಇರಬಹುದು. ಇನ್ನು ಫ್ರಿಡ್ಜ್​ನಲ್ಲಿಟ್ಟ ಕಾರಣ ಶೀತ ಸೇರಿ ಆರೋಗ್ಯ ಸಮಸ್ಯೆ ಕಾಡಬಹುದು. ಹಾಗಾಗಿ ಫ್ರೆಶ್​​ ಕಲ್ಲಂಗಡಿ ಹಣ್ಣನ್ನು ಸೇವಿಸುವುದು ಉತ್ತಮ.

ಇದನ್ನೂ ಓದಿ: KL ರಾಹುಲ್​​, ಹಾರ್ದಿಕ್​ ಪಾಂಡ್ಯಗೆ ಟೀಮ್​ ಇಂಡಿಯಾ ಕ್ಯಾಪ್ಟನ್ಸಿ ಆಫರ್​​​; ಇಬ್ಬರಲ್ಲಿ ಯಾರು ಬೆಸ್ಟ್​​?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment