ಟೀಂ ಇಂಡಿಯಾ ಕ್ಯಾಂಪ್ ಸೇರಿದ ಸೀಕ್ರೆಟ್​​ ವೆಪನ್.. ಪಾಕ್​ ವಿರುದ್ಧ ಧಮಾಕಾ ಪಕ್ಕಾ..!

author-image
Ganesh
Updated On
ಟೀಂ ಇಂಡಿಯಾ ಕ್ಯಾಂಪ್ ಸೇರಿದ ಸೀಕ್ರೆಟ್​​ ವೆಪನ್.. ಪಾಕ್​ ವಿರುದ್ಧ ಧಮಾಕಾ ಪಕ್ಕಾ..!
Advertisment
  • ದುಬೈನಲ್ಲಿ ಟೀಮ್​ ಇಂಡಿಯಾದ ವಿಶೇಷ ಅಭ್ಯಾಸ
  • ರೋಹಿತ್​ ಪಡೆಗೆ ಕಾಡ್ತಿದ್ಯಾ ಆ ಒಂದು ಆತಂಕ..?
  • ಕಾಡ್ತಿದೆ ಆ ಕರಾಳ ಸೋಲು.. ಸೇಡಿಗಾಗಿ ಶ್ರಮ

ಐಸಿಸಿ ಚಾಂಪಿಯನ್ಸ್​ ಟ್ರೋಫಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾವನ್ನು ಬಗ್ಗು ಬಡಿದಿರುವ ಟೀಂ ಇಂಡಿಯಾ ಶುಭಾರಂಭ ಮಾಡಿದೆ. ಈ ಮೆಗಾ ಬ್ಯಾಟಲ್​ಗೆ ಟೀಮ್​ ಇಂಡಿಯಾದ ಸ್ಪೆಷಲ್​ ಪ್ರಾಕ್ಟಿಸ್​ ಕೂಡ ಸದ್ದು ಮಾಡಿದೆ. ವಿಶೇಷವಾಗಿ ರೋಹಿತ್​ ಶರ್ಮಾ, ಕಿಂಗ್​ ವಿರಾಟ್​ ಕೊಹ್ಲಿಗಾಗಿ ಹೊಸ ವೆಪನ್​ ಟೀಮ್​ ಇಂಡಿಯಾ ಕ್ಯಾಂಪ್​ ಸೇರಿದೆ.

publive-image

ರೋಹಿತ್​, ಕೊಹ್ಲಿ ಅಭ್ಯಾಸಕ್ಕೆ ಸ್ಪೆಷಲಿಸ್ಟ್​ ವೇಗಿ

ಟೀಂ ಇಂಡಿಯಾ ಕ್ಯಾಂಪ್ ಸೇರಿರುವ ಸ್ಪೆಷಲ್ ವೇಗಿ ಹೆಸರು ಅವೈಸ್​ ಅಹ್ಮದ್​. ಈ ಅವೈಸ್​ ಅಹ್ಮದ್ ಯುಎಇನ ಡೊಮೆಸ್ಟಿಕ್​ ಕ್ರಿಕೆಟಿಗ. ಡಿಸ್ಟ್ರಿಕ್ಟ್​ ಕ್ರಿಕೆಟ್​ ಆಡೋ ಲೆಫ್ಟ್​ ಆರ್ಮ್​ ಪೇಸರ್​​​ ತನ್ನ ಘಾತಕ ವೇಗದಿಂದಲೇ ಸಿಕ್ಕಾಪಟ್ಟೆ ಫೇಮಸ್​. ಎರಡೂ ಕಡೆ ಸ್ವಿಂಗ್​ ಮಾಡಬಲ್ಲ ಸಾಮರ್ಥ್ಯ ಈತನಿಗಿದೆ. ಈತನ ವೇಗದ ಬೌಲಿಂಗ್​ಗೆ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಕೂಡ ಫುಲ್​ ಇಂಪ್ರೆಸ್​ ಆಗಿದೆ. ಇದೀಗ ಸ್ವತಃ ಟೀಮ್​ ಇಂಡಿಯಾದ ಮ್ಯಾನೇಜ್​ಮೆಂಟ್​ ಮೆಸೇಜ್​​ ಮಾಡಿ ಈತನನ್ನ ನೆಟ್ಸ್​​ಗೆ ಕರೆಸಿಕೊಂಡಿದೆ. ಈತನ ಬೌಲಿಂಗ್​ನಲ್ಲೇ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಹೆಚ್ಚು ಅಭ್ಯಾಸ ನಡೆಸ್ತಿದ್ದಾರೆ.

ಇದನ್ನೂ ಓದಿ: FBIಗೆ ಭಾರತೀಯ ಕಾಶ್​ ಪಟೇಲ್ ಸರದಾರ; ಯಾವ್ದೇ ಗೃಹದಲ್ಲಿದ್ರೂ ಹುಡುಕಿ ಹೊಡೀತಿವಿ ಎಂದ ಟ್ರಂಪ್ ಆಪ್ತ!

publive-image

ಅವೈಸ್​​​ ಅಹ್ಮದ್​ ಆಗಮನದ ಹಿಂದಿದೆ ಕಾರಣ

2021ರ ಟಿ20 ವಿಶ್ವಕಪ್​ನಲ್ಲಿ ಟೀಮ್​ ಇಂಡಿಯಾ ಇದೇ ದುಬೈನಲ್ಲಿ ಪಾಕಿಸ್ತಾನ ಎದುರು ಕಾದಾಡಿತ್ತು. ಪ್ರತಿಷ್ಟೆಯ ಫೈಟ್​ನಲ್ಲಿ ಪಾಕ್​ ವೇಗಿ ಶಾಹೀನ್​ ಶಾ ಅಫ್ರಿದಿ ಟೀಮ್​ ಇಂಡಿಯಾ ಬ್ಯಾಟರ್ಸ್​​ಗೆ ಸಖತ್​ ಕಾಟ ಕೊಟ್ಟಿದ್ರು. ಪರ್ಫೆಕ್ಟ್​ ಯಾರ್ಕರ್ಸ್​ಗೆ ರೋಹಿತ್​ ಶರ್ಮಾ, ಕೆಎಲ್​ ರಾಹುಲ್ ಕ್ಲೀನ್​​ಬೋಲ್ಡ್​ ಆಗಿ ಪೆವಿಲಿಯನ್​ ಸೇರಿದ್ರು. ಇವರಿಬ್ರೆ ಅಲ್ಲ.. ಕಿಂಗ್​ ಕೊಹ್ಲಿ ಕೂಡ ಅಫ್ರಿದಿ ಆರ್ಭಟಕ್ಕೆ ಬಲಿಯಾಗಿದ್ರು. ಟೀಮ್​ ಇಂಡಿಯಾ ಮೊಟ್ಟ ಮೊದಲ ಬಾರಿ ವಿಶ್ವಕಪ್​ ಟೂರ್ನಿಯಲ್ಲಿ ಪಾಕ್​ ವಿರುದ್ಧ ಸೋತ ಹೀನಾಯ ಸಾಧನೆ ಮಾಡಿತ್ತು.

ಇದನ್ನೂ ಓದಿ: ರೀಲ್ಸ್‌ಗಾಗಿ ನದಿಗೆ ಹಾರಿದ ದುರಂತ.. ನೋವಿನಲ್ಲೂ ಮಾನವೀಯತೆ ಮೆರೆದ ಡಾ. ಅನನ್ಯ ಕುಟುಂಬ

publive-image

2023ರ ಏಕದಿನ ವಿಶ್ವಕಪ್​ನಲ್ಲೂ ಶಾಹೀನ್​ ಅಫ್ರಿದಿ ಟೀಮ್​ ಇಂಡಿಯಾಗೆ ಮಾರಕವಾಗಿದ್ರು. 4 ವಿಕೆಟ್​ಗಳನ್ನ ಬೇಟೆಯಾಡಿದ್ದ ಶಾಹೀನ್​ ಭಾರತ ತಂಡಕ್ಕೆ ಶಾಕ್​ ನೀಡಿದ್ರು. ಇದೀಗ ಸೂಪರ್​ ಸಂಡೇ ಮತ್ತೆ ಪಾಕಿಸ್ತಾನದ ಸವಾಲು ಟೀಮ್​ ಇಂಡಿಯಾ ಮುಂದಿದೆ. ಟೀಮ್​ ಇಂಡಿಯಾ ಕಾಡಲು ಶಾಹೀನ್​ ಶಾ ಅಫ್ರಿದಿ ಸಜ್ಜಾಗಿದ್ದಾರೆ. ಅಫ್ರಿದಿಯ ಅಟ್ಯಾಕ್​ ಕೌಂಟರ್​ ಅಟ್ಯಾಕ್​ ಕೊಡೋ ಒಂದೇ ಉದ್ದೇಶದಿಂದ ಈ ಯುವ ವೇಗಿ ಅವೈಸ್​ ಅಹ್ಮದ್​ ತಂಡದ ನೆಟ್​ ಬೌಲರ್​ ಆಗಿ ಟೀಮ್​ ಇಂಡಿಯಾ ಮ್ಯಾನೇಜ್​ಮೆಂಟ್​ ಸೇರಿಸಿಕೊಂಡಿದೆ. ಕೊಹ್ಲಿ, ರೋಹಿತ್​​ ಈತನ ಬೌಲಿಂಗ್​ ಹೆಚ್ಚು ಅಭ್ಯಾಸ ನಡೆಸ್ತಿದ್ದಾರೆ.

ಒಟ್ಟಿನಲ್ಲಿ ಪಾಕಿಸ್ತಾನದ ವೇಗಿ ಶಾಹೀನ್​ ಅಫ್ರಿದಿಯ ಆರ್ಭಟಕ್ಕೆ ಫುಲ್​ ಸ್ಟಾಫ್​ ಇಡಲು ಟೀಮ್​ ಇಂಡಿಯಾ ಸ್ಪೆಷಲ್​ ಪ್ರಾಕ್ಟಿಸ್​ ಮಾಡ್ತಿದೆ. ಈ ಅಭ್ಯಾಸ ಆನ್​ಫೀಲ್ಡ್​ ಬ್ಯಾಟಲ್​ನಲ್ಲಿ ಎಷ್ಟು ಸಹಾಯ ಮಾಡುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

ಇದನ್ನೂ ಓದಿ: ಮುಂಬೈ ಟೀಮ್​ಗೆ RCB ಗರ್ಲ್ಸ್​ ರಾಯಲ್ ಚಾಲೆಂಜ್.. ಹ್ಯಾಟ್ರಿಕ್ ನಿರೀಕ್ಷೆಯಲ್ಲಿ ಸ್ಮೃತಿ ಮಂದಾನ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment