/newsfirstlive-kannada/media/post_attachments/wp-content/uploads/2023/09/Vishnuvardhan-Cauvery.jpg)
ಬೆಂಗಳೂರು: ತಮಿಳುನಾಡಿಗೆ ನೀರು ಬಿಡುತ್ತಿರೋದನ್ನ ವಿರೋಧಿಸಿ ಕನ್ನಡಿಗರು ಉಗ್ರ ಹೋರಾಟ ನಡೆಸುತ್ತಿದ್ದಾರೆ. ಇಂದು ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು ನಗರದ ಹಲವೆಡೆ ಸಾಲು, ಸಾಲು ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯ ಸರ್ಕಾರದ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಕಾವೇರಿ ನೀರು ಬಿಡುಗಡೆಯನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸುತ್ತಿದ್ದಾರೆ.
ಕಾವೇರಿಗಾಗಿ ನಡೆಯುತ್ತಿರೋ ಹೋರಾಟದಲ್ಲಿ ರೈತರು, ಕನ್ನಡ ಪರ ಹೋರಾಟಗಾರರು ಬೆಂಗಳೂರಿನ ಹಲವೆಡೆ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಹೋರಾಟದಲ್ಲಿ ಕಾವೇರಿ ಹೋರಾಟದಲ್ಲಿ ಭಾಗಿಯಾಗಿದ್ದ ವಿಶೇಷ ರಥವೊಂದು ಎಲ್ಲರ ಗಮನ ಸೆಳೆದಿದೆ. ದ್ವಿಚಕ್ರ ವಾಹನ ತುಂಬಾ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಭಾವಚಿತ್ರಗಳಿಂದ ಅಲಂಕಾರ ಮಾಡಲಾಗಿದೆ. ಈ ವಿಷ್ಣು ರಥದ ಸಾರಥಿ ನಾಗಬಸಯ್ಯ. ಇವರು ಕೇವಲ ಒಂದು ದಿನ ಮಾತ್ರ ಈ ರೀತಿಯ ಹೋರಾಟ ಮಾಡಲ್ಲ. ವರ್ಷದ 365 ದಿನವೂ ಇದೇ ರೀತಿ ಹೋರಾಟ ನಡೆಸುತ್ತಾರೆ.
Bengaluru Bandh : ಕಾವೇರಿ ಕನ್ನಡಿಗರ ಸ್ವತ್ತು.. ವಿಶೇಷ ರಥದ ಮೂಲಕ ಜಾಗೃತಿ#CauveryBandh#BengaluruBandh#ಬೆಂಗಳೂರುಬಂದ್#CauveryWaterDispute#TamilNadu#CauveryRiver#Siddaramaiah#DKShivakumar#NewsFirstKannadapic.twitter.com/VgejhzW2En
— NewsFirst Kannada (@NewsFirstKan)
Bengaluru Bandh : ಕಾವೇರಿ ಕನ್ನಡಿಗರ ಸ್ವತ್ತು.. ವಿಶೇಷ ರಥದ ಮೂಲಕ ಜಾಗೃತಿ#CauveryBandh#BengaluruBandh#ಬೆಂಗಳೂರುಬಂದ್#CauveryWaterDispute#TamilNadu#CauveryRiver#Siddaramaiah#DKShivakumar#NewsFirstKannadapic.twitter.com/VgejhzW2En
— NewsFirst Kannada (@NewsFirstKan) September 26, 2023
">September 26, 2023
ಸಾಹಸಸಿಂಹ ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯಾಗಿರುವ ನಾಗಬಸಯ್ಯವರು ಕನ್ನಡ ನೆಲ, ಜಲ, ಭಾಷೆಯ ಹೋರಾಟದಲ್ಲಿ ಸದಾ ಮುಂದಿರುತ್ತಾರೆ. ಇದೀಗ ಕಾವೇರಿಗಾಗಿ ವಿಶೇಷ ರಥವನ್ನು ಸಿದ್ಧಪಡಿಸಿದ್ದು, ಕಾವೇರಿ ವಿಚಾರದಲ್ಲಿ ಜಾಗೃತಿ ಮೂಡಿಸೋಕೆ ಮೆರವಣಿಗೆ ಮಾಡುತ್ತಿದ್ದಾರೆ. ದ್ವಿಚಕ್ರ ವಾಹನದ ರಥದ ಮುಂಭಾಗ ಕೊಡವನ್ನಿಟ್ಟು ಅದ್ರಲ್ಲಿ ಕಾವೇರಿ ಕನ್ನಡಿಗರ ಸ್ವತ್ತು ಅಂತಾ ಬರೆಯಲಾಗಿದೆ. ಕಾವೇರಿ ವಿಚಾರದಲ್ಲಿ ಜಾಗೃತಿಗಾಗಿ ಈ ವಿಶೇಷ ರಥಯಾತ್ರೆ ಇಡೀ ಬೆಂಗಳೂರು ನಗರವನ್ನು ಸಂಚರಿಸುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us