/newsfirstlive-kannada/media/post_attachments/wp-content/uploads/2024/12/AXER-PATEL.jpg)
ಟೀಂ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಅಕ್ಷರ್ ಪಟೇಲ್ (Axar patel ) ಅಪ್ಪನಾದ ಖುಷಿಯಲ್ಲಿದ್ದಾರೆ. ಅಕ್ಷರ್ ಪಟೇಲ್-ಮೆಹಾ ಪಟೇಲ್ ದಂಪತಿಗೆ ಗಂಡು ಮಗು ಜನಿಸಿದೆ. ಸಂತೋಷದ ಕ್ಷಣವನ್ನು ಅಕ್ಷರ್ ಪಟೇಲ್ ಸೋಶಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.
ಡಿಸೆಂಬರ್ 19 ರಂದು ಅಕ್ಷರ್ ಪಟೇಲ್ ದಂಪತಿಗೆ ಗಂಡು ಮಗು ಜನಿಸಿದೆ. ಮಗುವಿಗೆ ಹಕ್ಷ್ (Haksh Patel) ಪಟೇಲ್ ಎಂದು ನಾಮಕರಣ ಮಾಡಿದ್ದಾರೆ. ತಮ್ಮ ಮುದ್ದಾದ ಮಗುವಿಗೆ ಟೀಂ ಇಂಡಿಯಾ ಜರ್ಸಿಯನ್ನು ಸ್ಪರ್ಷಿಸಿದ್ದಾರೆ.
ಇದನ್ನೂ ಓದಿ:ಅತಿಥಿ ಮಂಜು ಕಾಟಕ್ಕೆ ಕಣ್ಣೀರಿಟ್ಟ ಮ್ಯಾನೇಜರ್ ಭವ್ಯ ಗೌಡ; ರಿವೇಂಜ್ ಇದೆ ಎಂದು ರಜತ್ ವಾರ್ನಿಂಗ್
ಅಕ್ಷರ್ ಪಟೇಲ್ ಮತ್ತು ಮೆಹಾ ಪಟೇಲ್ ಜನವರಿ 26, 2023ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವೈಯಕ್ತಿಕ ಕಾರಣಗಳಿಂದಾಗಿ ಅಕ್ಷರ್ ಪಟೇಲ್ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಲಭ್ಯವಿರಲಿಲ್ಲ. ಈ ಹಿಂದೆ ಅಕ್ಷರ್ ಪಟೇಲ್ ಅಲಭ್ಯತೆ ಬಗ್ಗೆ ಕ್ಯಾಪ್ಟನ್ ರೋಹಿತ್ ಮಾಹಿತಿ ನೀಡಿದ್ದರು. ಅವರು ವೈಯಕ್ತಿಕ ಕಾರಣದಿಂದಾಗಿ ತಂಡದ ಆಯ್ಕೆಗೆ ಪರಿಗಣಿಸಿಲ್ಲ ಎಂದಿದ್ದರು.
ಇದನ್ನೂ ಓದಿ:ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಾರೆ ಅನ್ನುವುದನ್ನು ನಾನು ನಂಬುವುದಿಲ್ಲ; ಹೀಗೆ ಹೇಳಿದ ಮಾಜಿ ಕ್ರಿಕೆಟಿಗ ಯಾರು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ