ಡೆಲ್ಲಿ ಕ್ಯಾಪಿಟಲ್ಸ್​ ಮೊದಲ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್​ ಅಕ್ಷರ್​ ಪಟೇಲ್​ಗೆ ಬಿಗ್ ಶಾಕ್

author-image
Bheemappa
Updated On
ಡೆಲ್ಲಿ ಕ್ಯಾಪಿಟಲ್ಸ್​ ಮೊದಲ ಸೋಲಿನ ಬೆನ್ನಲ್ಲೇ ಕ್ಯಾಪ್ಟನ್​ ಅಕ್ಷರ್​ ಪಟೇಲ್​ಗೆ ಬಿಗ್ ಶಾಕ್
Advertisment
  • ಕೇವಲ 12 ರನ್​ಗಳಿಂದ ಪಂದ್ಯ ಕೈಚೆಲ್ಲಿದ ಡೆಲ್ಲಿ ಕ್ಯಾಪಿಟಲ್ಸ್​
  • ಅಕ್ಷರ್ ಪಟೇಲ್​ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ ಪಾಂಡ್ಯ
  • ಡೆಲ್ಲಿ ಕ್ಯಾಪಿಟಲ್ಸ್​ ಕ್ಯಾಪ್ಟನ್​ಗೆ ಬಿಗ್ ಶಾಕ್ ಕೊಟ್ಟ ಬಿಸಿಸಿಐ

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದ ಐಪಿಎಲ್​ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ಕೇವಲ 12 ರನ್​ಗಳಿಂದ ಗೆಲುವು ಸಾಧಿಸಿದೆ. ಇದರಿಂದ ಡೆಲ್ಲಿಯ ಗೆಲುವಿನ ಓಟಕ್ಕೆ ಮುಂಬೈ ಬಿಗ್ ಬ್ರೇಕ್​ ಹಾಕಿದೆ. ಇದು ಡೆಲ್ಲಿಗೆ ಟೂರ್ನಿಯಲ್ಲಿ ಮೊದಲ ಸೋಲು ಆದ ಬೆನ್ನಲ್ಲೇ ಕ್ಯಾಪ್ಟನ್​​ಗೆ ಬಿಗ್ ಶಾಕ್ ಕೂಡ ಆಗಿದೆ.

ಡೆಲ್ಲಿ ಕ್ಯಾಪ್ಟನ್ ಆಗಿರುವ ಅಕ್ಷರ್ ಪಟೇಲ್​ ಅವರಿಗೆ ಬರೋಬ್ಬರಿ 12 ಲಕ್ಷ ರೂಪಾಯಿಗಳನ್ನು ದಂಡ ವಿಧಿಸಲಾಗಿದೆ. ನಿಗದಿತ ಸಮಯದಲ್ಲಿ ಪಂದ್ಯ ಮುಗಿಸದ ಕಾರಣ ಬಿಸಿಸಿಐ ಈ ದಂಡದ ಬರೆ ಎಳೆದಿದೆ. ಮುಂಬೈ ಹಾಗೂ ಡೆಲ್ಲಿ ನಡುವಿನ ಪಂದ್ಯ 3 ಗಂಟೆ ಒಳಗೆ ಮುಗಿಯಬೇಕಿತ್ತು. ಆದರೆ ಇದಕ್ಕಿಂತ 15 ನಿಮಿಷ ಹೆಚ್ಚಿಗೆ ತೆಗೆದುಕೊಂಡ ಕಾರಣ ಅಕ್ಷರ್ ಪಟೇಲ್​ಗೆ ಫೈನ್ ಹಾಕಲಾಗಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪಂದ್ಯದಿಂದ ಪಂದ್ಯಕ್ಕೆ CSK ಪರಿಸ್ಥಿತಿ ಹೀನಾಯ.. ಫ್ಯಾನ್ಸ್​ಗೆ ಬೇಸರ, ಚೆನ್ನೈ ತಂಡದಲ್ಲಿ ಬಿರುಕು?

publive-image

ಮುಂಬೈ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಮೊದಲ ಇನ್ನಿಂಗ್ಸ್​ನಲ್ಲಿ ಸ್ಲೋಓವರ್ ಮಾಡಿ, 15 ನಿಮಿಷ ಹೆಚ್ಚು ಸಮಯ ತೆಗೆದುಕೊಂಡಿದೆ. ಸ್ಲೋಓವರ್​ ರೇಟ್ ಆಗಿದ್ದರಿಂದ 12 ಲಕ್ಷ ರೂಪಾಯಿಗಳ ದಂಡ ಹಾಕಲಾಗಿದೆ. ಐಪಿಎಲ್​ನ ನಿಯಮ ಉಲ್ಲಂಘನೆ 2.22 ಅಡಿ ಈ ಟೂರ್ನಿಯಲ್ಲಿ ಡೆಲ್ಲಿ ತಂಡಕ್ಕೆ ಇದೇ ಮೊದಲ ದಂಡವಾಗಿದೆ ಎಂದು ಮಾಧ್ಯಮ ಪ್ರಕಟಣೆ ಹೊರಡಿಸಲಾಗಿದೆ.

ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ನಾಯಕ ಅಕ್ಷರ್ ಪಟೇಲ್ ಟಾಸ್ ಗೆದ್ದು ಎದುರಾಳಿ ಮುಂಬೈ ಇಂಡಿಯನ್ಸ್ ಅನ್ನು ಬ್ಯಾಟಿಂಗ್​ ಆಹ್ವಾನ ಮಾಡಿದ್ದರು. ಹೀಗಾಗಿ​ ತಿಲಕ್ ವರ್ಮಾ ಅರ್ಧಶತಕದಿಂದ ಮುಂಬೈ ಇಂಡಿಯನ್ಸ್ 206 ರನ್​ಗಳ ಟಾರ್ಗೆಟ್ ನೀಡಿತ್ತು. ಆದರೆ ಈ ಗುರಿ ಬೆನ್ನು ಬಿದ್ದಿದ್ದ ಡೆಲ್ಲಿ ಕೇವಲ 193 ರನ್​ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು. ಹೀಗಾಗಿ ಮುಂಬೈ ಇಂಡಿಯನ್ಸ್​ ಕೇವಲ 12 ರನ್​ಗಳಿಂದ ಗೆಲುವು ಪಡೆಯಿತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment