/newsfirstlive-kannada/media/post_attachments/wp-content/uploads/2024/10/Axar-Patel.jpg)
ಟೀಂ ಇಂಡಿಯಾದ ಆಲ್​ ರೌಂಡರ್​ ಅಕ್ಷರ್​ ಪಟೇಲ್ ತನ್ನ ಫ್ಯಾನ್ಸ್​ ಜೊತೆಗೆ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ತಾನು ತಂದೆಯಾಗುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಪತ್ನಿ ಮೇಹಾ ಪಟೇಲ್​ ಜೊತೆಗಿನ ವಿಡಿಯೋ ಹಂಚಿಕೊಳ್ಳುವ ಮೂಲಕ ಸಿಹಿ ಸುದ್ದಿಯನ್ನು ಹೇಳಿಕೊಂಡಿದ್ದಾರೆ.
ಅಕ್ಷರ್​ ಪಟೇಲ್​ ಮನೆಗೆ ಹೊಸ ಆಗಮನದ ನಿರೀಕ್ಷೆಯಲ್ಲಿದೆ. ಅದಕ್ಕೂ ಮೊದಲು ಅಕ್ಷರ್​ ಪಟೇಲ್ ಕುಟುಂಬದ ಜೊತೆ ಸೇರಿಕೊಂಡು​ ತನ್ನ ಪತ್ನಿ ಮೇಹಾಗೆ ಸೀಮಂತ ಮಾಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಮಯಾಂಕ್ ಯಾದವ್ ಬೌಲಿಂಗ್ ರಹಸ್ಯ ಬಯಲು.. ಗಂಭೀರ್ ಆ ಸಲಹೆ ಕೆಲಸ ಮಾಡಿದೆ..!
ಅಕ್ಷರ್​ ಪತ್ನಿ ಮೇಹಾ ಡಯೆಟಿಷನ್​ ಆಗಿದ್ದು, ಕಳೆದ ವರ್ಷ ​​ಜನವರಿಯಲ್ಲಿ ಈ ಜೋಡಿ ವಿವಾಹವಾದರು. ಕಪಿಲ್​ ಶರ್ಮಾ ಶೋಗೆ ಮೊದಲ ಭೇಟಿ ನೀಡಿದ್ದಾಗ ಅಕ್ಷರ್​ ಪಟೇಲ್​ಗೆ ವಿವಾಹವಾಗಿರಲಿಲ್ಲ. 2ನೇ ಬಾರಿ ಬಂದಾಗ ಅಕ್ಷರ್​ಗೆ ವಿವಾಹವಾಗಿತ್ತು. ಇಬ್ಬರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 3ನೇ ಬಾರಿ ಬಂದಾಗ ಕಪಿಲ್​ ಒಳ್ಳೆಯ ಸುದ್ದಿ ಏನು ತಂದಿದ್ದೀರಿ? ಎಂದು​ ಕೇಳಿದ್ದರು.
View this post on Instagram
ಇದೀಗ ಮೇಹಾ ಗರ್ಭಿಣಿಯಾಗಿದ್ದು, ಅಕ್ಷರ್​ ಮುದ್ದಾದ ಮಗುವಿನ ಆಗಮನಕ್ಕೆ ಕಾಯುತ್ತಿದ್ದಾರೆ. ಅಭಿಮಾನಿಗಳು ಸಹ ಕ್ರಿಕೆಟಿಗ ಹಂಚಿಕೊಂಡ ವಿಡಿಯೋ ಕಂಡು ಸಂತಸಗೊಂಡಿದ್ದಾರೆ. ಬಗೆ ಬಗೆಯ ಕಾಮೆಂಟ್​​ ಬರೆಯುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us