/newsfirstlive-kannada/media/post_attachments/wp-content/uploads/2025/06/nasa.jpg)
ಬಾಹ್ಯಾಕಾಶ ಇತಿಹಾಸದಲ್ಲಿ ಭಾರತದ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾನಿಗಳನ್ನ ಌಕ್ಸಿಯೋಂ-4 ನೌಕೆ ಮೂಲಕ ಫಾಲ್ಕನ್ ರಾಕೆಟ್​ ಯಶಸ್ವಿಯಾಗಿ ಅಂತರಿಕ್ಷಕ್ಕೆ ಹೊತ್ತೊಯ್ದಿತ್ತು. ಇದೀಗ 40 ನಿಮಿಷದ ಮುಂಚೆಯೇ ಌಕ್ಸಿಯೋಂ-4 ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದೆ.
/newsfirstlive-kannada/media/post_attachments/wp-content/uploads/2025/06/nasa1.jpg)
ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಉಡ್ಡಯನ ಮಾಡಲಾಗಿತ್ತು. ಪುತ್ರ ಶುಭಾಂಶು ಶುಕ್ಲಾರ ಗಗನಯಾನ ಕ್ಷಣವನ್ನು ಪೋಷಕರು ಕಣ್ತುಂಬಿಕೊಂಡು ಆನಂದಭಾಷ್ಪ ಸುರಿಸಿದ್ದರು. ಇದೀಗ 40 ನಿಮಿಷದ ಮುಂಚೆಯೇ ಌಕ್ಸಿಯೋಂ-4 ನೌಕೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿದೆ. ಈ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ.
/newsfirstlive-kannada/media/post_attachments/wp-content/uploads/2025/06/nasa2.jpg)
ಈ ಯೋಜನೆಯಲ್ಲಿ ಭಾರತದ ಶುಭಾಂಶು ಶುಕ್ಲಾ, ಅಮೆರಿಕಾದ ಪೆಗ್ಗಿ ವಿಟ್ಲನ್, ಪೋಲೆಂಡ್​ನ ನವೋಖ್ ಉಝ್ ನಾಸ್ತಿ, ಹಂಗೇರಿಯ ಟಿಬರ್ ಕಪ್ಪು ಫ್ಲೋರಿ 14 ದಿನಗಳ ಕಾಲ ಐಎಸ್​ಎಸ್​ನಲ್ಲೇ ಇರಲಿದ್ದಾರೆ. ಅಲ್ಲಿ 60 ರೀತಿಯ ವಿವಿಧ ಪ್ರಯೋಗಗಳನ್ನ ಗಗನಯಾತ್ರಿಗಳು ನಡೆಸಲಿದ್ದಾರೆ. ಮುಖ್ಯವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಸೇರಿ 60 ರೀತಿಯ ವಿವಿಧ ಪ್ರಯೋಗ ಮಾಡಲಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us