ಬಾಹ್ಯಾಕಾಶಕ್ಕೆ ಭಾರತ.. ಶುಭಾಂಶು ಶುಕ್ಲಾರಿದ್ದ ನೌಕೆ ಹೊತ್ತು ಯಶಸ್ವಿಯಾಗಿ ಆಕಾಶಕ್ಕೆ ಜಿಗಿದ ಫಾಲ್ಕನ್ ರಾಕೆಟ್

author-image
Ganesh
Updated On
ಶುಭಾಂಶು ಶುಕ್ಲಾರ ಗಗನಯಾನಕ್ಕಾಗಿ ಭಾರತ ಎಷ್ಟು ಕೋಟಿ ಖರ್ಚು ಮಾಡಿದೆ ಗೊತ್ತಾ..?
Advertisment
  • ಭಾರತದ ಶುಭಾಂಶು ಶುಕ್ಲಾರಿಂದ ಅಂತರಿಕ್ಷ ಯಾನ
  • ಶುಕ್ಲಾ ಸೇರಿದಂತೆ ನಾಲ್ವರನ್ನ ಹೊತ್ತೊಯ್ದ ಌಕ್ಸಿಯೋಂ ಮಷಿನ್
  • ಅಮೆರಿಕಾದ ನಾಸಾದ ಌಕ್ಸಿಯೋಂ ನೌಕೆಯಲ್ಲಿ ಪ್ರಯಾಣ

ಬಾಹ್ಯಾಕಾಶ ಕ್ಷೇತದಲ್ಲಿ ಭಾರತ ಮತ್ತೊಂದು ದೊಡ್ಡ ಹೆಜ್ಜೆಯನ್ನಿಡಲು ಮುನ್ನುಡಿ ಸಿಕ್ಕಾಗಿದೆ. ಭಾರತದ ಶುಭಾಂಶು ಶುಕ್ಲಾ ಸೇರಿ ನಾಲ್ವರು ಗಗನಯಾನಿಗಳು ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಭಕ್ಕೆ ಹಾರಿದ್ದಾರೆ.

ಇವತ್ತು ಮಧ್ಯಾಹ್ನ 12.01 ಗಂಟೆಗೆ ಸರಿಯಾಗಿ ಌಕ್ಸಿಯೋಂ ನೌಕೆ (Axiom Mission 4)ಯನ್ನು ಹೊತ್ತು Falcon-9 rocket ನಭಕ್ಕೆ ಯಶಸ್ವಿಯಾಗಿ ಚಿಮ್ಮಿದೆ. ನೌಕೆಯಲ್ಲಿ ಅಮೆರಿಕಾ, ಭಾರತ, ಪೋಲೆಂಡ್, ಹಂಗೇರಿ ದೇಶದ ನಾಲ್ವರು ಗಗನಯಾತ್ರಿಗಳು ಇದ್ದಾರೆ.

ಯಾರೆಲ್ಲ ಇದ್ದಾರೆ..?

ಭಾರತದ ಶುಭಾಂಶು ಶುಕ್ಲಾ, ಅಮೆರಿಕಾದ ಪೆಗ್ಗಿ ವಿಟ್ಲನ್, ಪೋಲೆಂಡ್​ನ ನವೋಖ್ ಉಝ್ ನಾಸ್ತಿ, ಹಂಗೇರಿಯ ಟಿಬರ್ ಕಪು ಬಾಹ್ಯಾಕಾಶ ಕೇಂದ್ರಕ್ಕೆ ಪ್ರಯಾಣ ಮಾಡಿದ್ದಾರೆ. ಈ ನಾಲ್ವರು 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 60 ವೈಜ್ಞಾನಿಕ ಪ್ರಯೋಗ ನಡೆಸಲಿದ್ದಾರೆ. ಪ್ರಮುಖವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ಕೈಗೊಳ್ಳಲಿದ್ದಾರೆ.

ಇದನ್ನೂ ಓದಿ: ಶುಭಾಂಶು ಶುಕ್ಲಾ ಇವತ್ತು ಬಾಹ್ಯಾಕಾಶಕ್ಕೆ ಪ್ರಯಾಣ.. ಕೊನೆಗೂ ಆಕಾಶಕ್ಕೆ ಜಿಗಿಯಲು ಸಿದ್ಧವಾದ Axiom Mission-4

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment