ಮದುವೆಯಾದ ಮೊದಲ ರಾತ್ರಿಯೇ ಜೀವ ಕಳೆದುಕೊಂಡ ಜೋಡಿಗಳು.. ಘೋರ ದುರಂತ; ಕಾರಣವೇನು?

author-image
Gopal Kulkarni
Updated On
ಮದುವೆಯಾದ ಮೊದಲ ರಾತ್ರಿಯೇ ಜೀವ ಕಳೆದುಕೊಂಡ ಜೋಡಿಗಳು.. ಘೋರ ದುರಂತ; ಕಾರಣವೇನು?
Advertisment
  • ಮದುವೆಯಾದ ಮೊದಲ ರಾತ್ರಿ ಕಳೆಯಬೇಕಾಗಿದ್ದ ಜೋಡಿಯ ದುರಂತ ಅಂತ್ಯ
  • ಪತ್ನಿಯ ಸಹನೆಯನ್ನು ಪರೀಕ್ಷೆ ಮಾಡಲು ಹೋದ ಪತಿ ಮಾಡಿಕೊಂಡ ಯಡವಟ್ಟು!
  • ಮಧುಮಂಚದಲ್ಲಿ ಮಧುರವಾಗಿ ಕಳೆಯಬೇಕಾಗಿದ್ದ ರಾತ್ರಿ ಮರ್ಡರ್​ನಲ್ಲಿ ಮುಗೀತು!

ಮದುವೆಯಾಗಿ ಒಂದೇ ದಿನ ಕಳೆದಿತ್ತು. ಇನ್ನೇನು ಜೋಡಿಗಳು ದೈಹಿಕವಾಗಿ ಸಮಾಗಮಗೊಳ್ಳುವ ಸಮಯ. ಮಧುರ ಸಮಯವೊಂದು ಘಟಿಸಬೇಕಾದಲ್ಲಿ ಘೋರ ದುರಂತವೊಂದು ಸಂಭವಿಸಿ ಪತಿ, ಪತ್ನಿ ಇಬ್ಬರೂ ದುರಂತವಾಗಿ ಜೀವ ಕಳೆದುಕೊಂಡ ಘಟನೆ ಉತ್ತರಪ್ರದೇಶದ ಅಯೋಧ್ಯೆಲ್ಲಿ ನಡೆದಿದೆ. ನಡುರಾತ್ರಿಯಲ್ಲಿ ಗಂಡನ ಫೋನ್​​ಗೆ ಬಂದ ಒಂದು ಮೆಸೇಜ್​ ನವದಂಪತಿ ನಡುವೆ ಕೋಲಾಹಲವನ್ನು ಸೃಷ್ಟಿಸಿದೆ. ಕೊನೆಗೆ ಅದು ಪತ್ನಿ ಜೀವ ತೆಗೆಯುವ ಮಟ್ಟಕ್ಕೆ ಹೋಗಿ, ಪತಿ ತನ್ನ ಜೀವವನ್ನು ತಾನೇ ಕಳೆದುಕೊಳ್ಳುವ ಮೂಲಕ ಅಂತ್ಯವಾಗಿದೆ.

ಇನ್ನು ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ತನಿಖೆ ಕೈಗೊಂಡಾಗ ಗೊತ್ತಾದ ಅಸಲಿ ವಿಚಾರವೆಂದರೆ ಪತಿ ತನಗೆ ತಾನೇ ಮೆಸೇಜ್ ಕಳುಹಿಸಿಕೊಂಡಿದ್ದ ಎಂಬುದು. ತನ್ನದೇ ಮೊಬೈಲ್​ನಲ್ಲಿರುವ ಮತ್ತೊಂದು ನಂಬರ್​ನಿಂದ ಮೆಸೇಜ್ ಕಳುಹಿಸಿಕೊಂಡಿದ್ದಾನೆ. ಇದು ಪತ್ನಿಯ ಸಂಶಯಕ್ಕೆ ಕಾರಣವಾಗಿ, ಅದು ವಿಕೋಪಕ್ಕೆ ತಿರುಗಿ ಹೋಗಿದೆ. ಮದುಮಗಳು, ಪತಿಯ ಹಳೆಯ ಸಂಬಂಧದ ವಿಚಾರವಾಗಿ ಮಾತನಾಡಿದ್ದಾಳೆ. ಇದು ವಿಕೋಪಕ್ಕೆ ಹೋಗಿ ಕೊಲೆಯಲ್ಲಿ ಮುಕ್ತಾಯಗೊಂಡಿದೆ.

ಇದನ್ನೂ ಓದಿ:ಲಕ್ಷ ರೂಪಾಯಿಗೆ ಕೆಜಿ ಬೆಲೆಯ ಕೇಸರಿ,5 ರೂ. ಪಾನ್​ ಮಸಾಲದಲ್ಲಿ ಹೇಗೆ? ಸ್ಟಾರ್ ನಟರಿಗೆ ನೋಟಿಸ್ ಕೊಟ್ಟ ಕೋರ್ಟ್​!

ತನಿಖೆಗಳು ಹೇಳುವ ಪ್ರಕಾರ ಗಂಡನ ಮೊಬೈಲ್​ಗೆ ಸುಮಾರು ರಾತ್ರಿ ಸುಮಾರು 11.45ಕ್ಕೆ ಮೆಸೇಜ್ ಬಂದಿದೆ. ಈ ವೇಳೆ ಇಬ್ಬರ ನಡುವೆ ದೊಡ್ಡ ವಾಗ್ವಾದವೇ ಶುರುವಾಗಿದೆ. ಕೊನೆಗೆ ಕೋಪಗೊಂಡ ಪತಿ ಪತ್ನಿಯ ಕತ್ತು ಹಿಸುಕಿ ಅವಳ ಜೀವ ತೆಗೆದಿದ್ದಾನೆ. ನಂತರ ತಾನು ಫ್ಯಾನಿಗೆ ನೇಣು ಬಿಗಿದುಕೊಂಡಿದ್ದಾನೆ.

ಇದನ್ನೂ ಓದಿ:ಭಾರತಕ್ಕೆ ಒಂದು ದಿನಕ್ಕಾಗಿ ಮಾತ್ರ ರಾಜಧಾನಿಯಾಗಿತ್ತು ಈ ನಗರ! ಯಾವುದು ಆ ಸಿಟಿ?

ಕಳೆದ ಶುಕ್ರವಾರದಂದು ಪ್ರದೀಪ್ ಹಾಗೂ ಶಿವಾನಿಯರದ್ದು ಅದ್ಧೂರಿಯಾಗಿ ಮದುವೆ ನಡೆದಿತ್ತು. ಶನಿವಾರ ಮದುಮಗಳನ್ನು ಗಂಡನ ಮನೆಗೆ ಕರೆದುಕೊಂಡು ಬಂದು ಮೊದಲನೇ ರಾತ್ರಿಗೆ ಮಾಡಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡಿಸಿ ಇಬ್ಬರನ್ನು ಮಧುಮಂಚದ ಕೋಣೆಗೆ ಕಳುಹಿಸಿದ್ದಾರೆ. ಆದರೆ ಬೆಳಗ್ಗೆ ತುಂಬಾ ಹೊತ್ತಾದರೂ ಜೋಡಿಯಲ್ಲಿ ಯಾರೊಬ್ಬರು ಬಾಗಿಲು ತೆಗೆದು ಆಚೆ ಬಾರದ ಕಾರಣ, ಸಂಶಯ ಬಂದು ಕುಟುಂಬದವರು ಬಾಗಿಲನ್ನು ಬಡಿದಿದ್ದಾರೆ. ಆಗಲು ಪ್ರತಿಕ್ರಿಯೆ ಬರದಿದ್ದಾಗ ಕಿಟಕಿಯಲ್ಲಿ ಇಣುಕಿ ನೋಡಿದಾಗ ಶಿವಾನಿ ಜೀವ ಕಳೆದುಕೊಂಡು ನೆಲದ ಮೇಲೆ ಬಿದ್ದಿದ್ದರೆ ಪ್ರದೀಪ ಸೀಲಿಂಗ್ ಫ್ಯಾನ್​​ನಲ್ಲಿ ನೇತಾಡುತ್ತಿದ್ದ.

ಕೂಡಲೇ ಕುಟುಂಬದವರು ಪೊಲೀಸರಿಗೆ ಕರೆ ಮಾಡಿ ಸುದ್ದಿ ಮುಟ್ಟಿಟಸಿದ್ದಾರೆ. ಸಿಟಿ ಸಿಒ ಶೈಲೇಂದ್ರ ಕುಮಾರ್ ಹೇಳುವ ಪ್ರಕಾರ ಪ್ರದೀಪ್​ಗೆ ತನ್ನ ಪತ್ನಿಗೆ ತನ್ನ ಹಳೆಯ ಸಂಬಂಧದ ಬಗ್ಗೆ ಏನು ಅನಿಸಿಕೆ ಇರಬಹುದು ಎಂದು ತಿಳಿದುಕೊಳ್ಳುವ ಕುತೂಹಲವಿತ್ತಂತೆ. ಹೀಗಾಗಿಯೇ ತನ್ನ ನಂಬರ್​ನಿಂದ ತಾನೇ ಮೆಸೇಜ್ ಮಾಡಿಕೊಂಡಿದ್ದಾನೆ. ಹೀಗೆ ಶುರುವಾದ ವಾದ ಜೀವಕಳೆದುಕೊಳ್ಳುವ ಹಿಂಸಾತ್ಮಕ ಮಟ್ಟಕ್ಕೆ ಹೋಗಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment