newsfirstkannada.com

ರಾಮನಂತ ಮಗ, ಸೀತೆಯಂತ ಮಗಳು.. ಬೆಂಗಳೂರಲ್ಲಿ ಇವತ್ತು ಹುಟ್ಟಿದ ಕಂದಮ್ಮಗಳು ಎಷ್ಟು ಗೊತ್ತಾ?

Share :

Published January 22, 2024 at 8:17pm

    ಬೆಂಗಳೂರಿನ ಯಾವ್ಯಾವ ಆಸ್ಪತ್ರೆಯಲ್ಲಿ ಎಷ್ಟೆಷ್ಟು ಮಕ್ಕಳ ಜನನ ಗೊತ್ತಾ?

    ರಾಮಲಲ್ಲಾ ಪ್ರತಿಷ್ಠಾನೆಯ ಶುಭ ಮುಹೂರ್ತದಲ್ಲಿ ಹುಟ್ಟಿದ ಕಂದಮ್ಮಗಳು

    ಒಂದೇ ದಿನ ಸಿಲಿಕಾನ್​ ಸಿಟಿಯಲ್ಲಿ ಇಂದು 50ಕ್ಕೂ ಹೆಚ್ಚು ಶಿಶುಗಳ ಜನನ

ಬೆಂಗಳೂರು: ದೇಶದೆಲ್ಲೆಡೆ ಇಂದು ರಾಮಮಂದಿರ ಲೋಕಾರ್ಪಣೆಯ ಸಂಭ್ರಮ ಮನೆ ಮಾಡಿತ್ತು. ಅಷ್ಟೇ ವಿಜೃಂಭಣೆಯಿಂದ ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆಯಾಗಿದೆ. 500 ವರ್ಷಗಳ ಬಳಿಕ ಕೋಟ್ಯಾನುಕೋಟಿ ರಾಮಭಕ್ತರ ಆಸೆ ಕೊನೆಗೂ ಈಡೇರಿದೆ. ರಾಮ ಜನ್ಮಭೂಮಿಯಲ್ಲಿ ನಿರ್ಮಾಣವಾಗಿರುವ ನೂತನ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಮಾಡಲಾಗಿದೆ.

ಈ ಶುಭ ದಿನದಂದು ಸಿಲಿಕಾನ್​ ಸಿಟಿ ಪೋಷಕರು ಕಂದಮ್ಮಗಳನ್ನು ಪಡೆಯಲು ಅತೀವ ಆಸಕ್ತಿ ವಹಿಸಿದ್ದರು. ರಾಮನಂತಹ ಮಗು, ಸೀತೆಯಂತಹ ಮಗಳು ಪಡೆಯಲು ಒಂದೇ ದಿನವೇ 50ಕ್ಕೂ ಶಿಶುಗಳ ಜನನವಾಗಿದೆ. ವಾಣಿವಿಲಾಸ್ ಆಸ್ಪತ್ರೆಯಲ್ಲಿ 12 ಕಂದಮ್ಮಗಳ ಜನನವಾಗಿದೆ. ಈ ಪೈಕಿ 10 ನಾರ್ಮಲ್, 1 ಸಿಸೇರಿಯನ್ ಆಗಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈ ತನಕ 4 ಶಿಶುಗಳ ಜನನವಾಗಿದೆ. ಈ ಪೈಕಿ 2 ಸಹಜ ಹೆರಿಗೆ, 2 ಸಿಸೇರಿಯೆನ್ ಆಗಿದೆ. ಘೋಷಾ ಆಸ್ಪತ್ರೆಯಲ್ಲಿ ಒಟ್ಟು 6 ಕಂದಮ್ಮಗಳ ಜನನವಾಗಿದೆ. 5 ನಾರ್ಮಲ್, 1 ಸಿಸೇರಿಯನ್ ಆಗಿದೆ.

ಬೌರಿಂಗ್ ಆಸ್ಪತ್ರೆಯಲ್ಲಿ 6 ಮಕ್ಕಳ ಜನನವಾಗಿದೆ. ಇತರೆ ಖಾಸಗಿ ಆಸ್ಪತ್ರೆಗಳಲ್ಲಿ 20ಕ್ಕೂ ಅಧಿಕ ಮಕ್ಕಳ ಜನನವಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಡೆಲಿವರಿ ಡೀಟೇಲ್ಸ್ ಡಿಸ್ ಕ್ಲೋಸ್ ಮಾಡದಂತೆ ಪೋಷಕರ ತಾಕೀತು ಮಾಡಿದ್ದರು. ಆದರೆ ಡೆಲಿವರಿ ಡಿಟೇಲ್ಸ್ ನೀಡಲು ಕೆಲವೊಂದು ಪ್ರೈವೇಟ್ ಆಸ್ಪತ್ರೆಗಳ ಹಿಂದೇಟು ಆಗಿದ್ದರು. ಸದ್ಯ ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ದಿನವೇ ರಾಜಧಾನಿಯಲ್ಲಿ 50ಕ್ಕೂ ಹೆಚ್ಚು ಮಕ್ಕಳು ಜನನವಾಗಿದ್ದು ಇಡೀ ರಾಜ್ಯವೇ ಖುಷಿ ಪಡುವ ಸುದ್ದಿ ಇದಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ರಾಮನಂತ ಮಗ, ಸೀತೆಯಂತ ಮಗಳು.. ಬೆಂಗಳೂರಲ್ಲಿ ಇವತ್ತು ಹುಟ್ಟಿದ ಕಂದಮ್ಮಗಳು ಎಷ್ಟು ಗೊತ್ತಾ?

https://newsfirstlive.com/wp-content/uploads/2024/01/rama-mandira-12.jpg

Load More