newsfirstkannada.com

ಭೂಕಂಪಕ್ಕೂ ಜಗ್ಗಲ್ಲ, ಬಿರುಗಾಳಿ ಬಂದ್ರೂ ಬೀಳಲ್ಲ.. 2 ಸಾವಿರ ವರ್ಷ ಇರುತ್ತೆ ರಾಮ ಮಂದಿರ!

Share :

Published January 18, 2024 at 9:07pm

    ಶ್ರೀರಾಮ ಮಂದಿರದ ವಿಶೇಷತೆ ಬಗ್ಗೆ ಎಷ್ಟು ಹೇಳಿದರು ಮುಗಿಯಲ್ಲ

    ನಾಗರ ಶೈಲಿಯಲ್ಲಿ 3 ಅಂತಸ್ತುಗಳಲ್ಲಿ ತಲೆ ಎತ್ತಿದ ಶ್ರೀರಾಮ ಮಂದಿರ!

    ರಾಮಮಂದಿರ 1,000 ವರ್ಷ ದುರಸ್ತಿ ಮಾಡೋ ಆಗತ್ಯ ಇರೋದಿಲ್ಲ!

ಪ್ರಕೃತಿ ವಿಕೋಪ ಉಂಟಾಯ್ತು ಅಂದ್ರೆ ಕಟ್ಟಿರೋ ಮನೆ ಇರ್ಲಿ, ದೈತ್ಯ ಕಟ್ಟಡಗಳೇ ಉಳೀಯೋದು ಕಷ್ಟ. ಅಂತದ್ರಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರದಂತಹ ಜಗತ್ತಿನ ಅತೀ ದೊಡ್ಡ ದೇಗುಲ ನಿರ್ಮಾಣವಾಗ್ತಿದೆ ಅಂದ್ರೆ, ಅದೆಷ್ಟು ಸೇಫ್​ ಆಗಿರುವಂತೆ ಕಟ್ಬೇಕು ಅನ್ನೋ ಲೆಕ್ಕಾಚಾರಗಳಿರುತ್ವೆ. ಆ ಲೆಕ್ಕಾಚಾರದಂತೆ ಮರ್ಯಾದಾ ಪುರುಷೋತ್ತಮನ ದೇಗುಲ ತಲೆ ಎತ್ತಿದ್ದು ರಾಮಲಲ್ಲಾ ಇರುವ ಜಾಗ ಸಾಮಾನ್ಯವಾಗಿಲ್ಲ. ಅದು ಭೂಕಂಪಕ್ಕೂ ಜಗ್ಗಲ್ಲ, ಬಿರುಗಾಳಿಗೂ ಅಂಜಲ್ಲ. ಅರೇ.. ಭೂಕಂಪಕ್ಕೂ ಜಗ್ಗದೇ ಇರೋ ರಾಮಮಂದಿರವೇ? ಅದೇಗೆ ಸಾಧ್ಯ?.

2020 ಆಗಸ್ಟ್‌ 5ಕ್ಕೆ ಭೂಮಿ ಪೂಜೆ, 2024 ಜ.22ಕ್ಕೆ ಪ್ರಾಣ ಪ್ರತಿಷ್ಠಾಪನೆ

ರಾಮಜನ್ಮ ಭೂಮಿ ವಿವಾದ ಅಂತ್ಯವಾದ್ಮೇಲೆ ಎಲ್ಲರೂ ಅಂದುಕೊಂಡಂತೆ ಮಂದಿರ ನಿರ್ಮಾಣ ಕಾರ್ಯ ಶುರುವಾಗುತ್ತೆ. ಅದೇ ರೀತಿ, ಆಗಸ್ಟ್‌, 5 2020ರಲ್ಲಿ ಪ್ರಧಾನಿ ಮೋದಿ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸ್ತಾರೆ. ಕೊಟ್ಟ ಮಾತಿಗೆ ನಡೆದುಕೊಂಡ ಗತ್ತು ಆವತ್ತು ಅವರ ಮುಖದಲ್ಲಿ ರಾರಾಜಿಸುತ್ತಾ ಇರುತ್ತೆ. ಅಂದಹಾಗೇ, ಅಂದು ಮೋದಿ ಮತ್ತು ಕೋಟ್ಯಂತರ ಭಾರತೀಯರ ಪಾಲಿಗೆ ನಿಜಕ್ಕೂ ಭಾವನಾತ್ಮಕ ಕ್ಷಣವಾಗಿತ್ತು. ಯಾಕಂದ್ರೆ, ಒಂದಲ್ಲ ಎರಡಲ್ಲ 500 ವರ್ಷಗಳಿಂದ ರಾಮಜನ್ಮ ಭೂಮಿಯಲ್ಲಿ ರಾಮನಿಗಾಗಿ ಮಂದಿರ ಕಟ್ಟಬೇಕು ಅನ್ನೋದು ಕೋಟಿ ಕೋಟಿ ಹಿಂದೂಗಳ ಬಯಕೆಯಾಗಿತ್ತು. ದೇಶದಲ್ಲಿದ್ದವರು ಅಷ್ಟೇ ಅಲ್ಲ, ವಿದೇಶದಲ್ಲಿ ನೆಲೆಸಿರೋ ಹಿಂದೂಗಳು ರಾಮ ಮಂದಿರ ನಿರ್ಮಾಣವಾಗ್ಲಿ ಅಂತಾ ಪ್ರಾರ್ಥನೆ ಮಾಡ್ತಿದ್ರು. ಹೀಗಾಗಿಯೇ, ಆ ಕ್ಷಣ ಹತ್ತಿರ ಬರ್ತಿದೆ ಅನ್ನೋ ಭಾವನೆ ಮೋದಿ ಭೂಮಿ ಪೂಜೆ ಸಲ್ಲಿಸಿದ ಕ್ಷಣದಲ್ಲೇ ಮೂಡಿತ್ತು. ಇದೀಗ ನಿರೀಕ್ಷೆಯಂತೆ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ತಲೆ ಎತ್ತಿ ನಿಂತಿದೆ. ಇದೇ ಜನವರಿ 22ನೇ ತಾರೀಖು, ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಹಾಗಾದ್ರೆ, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಹೇಗಿದೆ? ದೇಗುಲವನ್ನ ಎಷ್ಟು ಭದ್ರವಾಗಿ ಕಟ್ಟಲಾಗಿದೆ? ಅದರ ವಿಶೇಷತೆ ಏನು? ಅನ್ನೋ ಕುತೂಹಲ ಎಲ್ಲರಲ್ಲೂ ಇದ್ದೇ ಇರುತ್ತೆ. ಅದೆಲ್ಲದ್ದಕ್ಕೂ ಉತ್ತರ ಇಲ್ಲಿದೆ.

ಬಹುಪಾಲು ರಾಜಮಹಾರಾಜರೂ ಕೂಡ ಹಿಂದೂಗಳೇ

ಭಾರತದಲ್ಲಿ ಅನಾದಿ ಕಾಲದಿಂದಲೂ ಹೆಚ್ಚಿನ ಪ್ರಮಾಣದಲ್ಲಿ ಹಿಂದೂ ಧರ್ಮ ಪಾಲನೆ ಮಾಡ್ಕೊಂಡೇ ಬರ್ತಿದ್ದಾರೆ. ಆಳ್ವಿಕೆ ನಡೆಸಿರೋ ಬಹುಪಾಲು ರಾಜಮಹಾರಾಜರೂ ಕೂಡ ಹಿಂದೂಗಳೇ ಆಗಿದ್ದಾರೆ. ಅವರೆಲ್ಲರ ಕಾಲದಲ್ಲೂ ವಿವಿಧ ದೇವರುಗಳ ದೇವಾಲಯಗಳನ್ನ ನಿರ್ಮಿಸಲಾಗಿದೆ. ಇಂತಹ, ದೇವಾಲಯದ ನಿರ್ಮಾಣದಲ್ಲಿ ಪ್ರಮುಖವಾಗಿ ಕಾಣಿಸೋ ವಾಸ್ತುಶಿಲ್ಪ ಅಂದ್ರೆ ನಾಗರಶೈಲಿ ಮತ್ತು ದ್ರಾವಿಡ ಶೈಲಿ. ಇದರಲ್ಲಿ ಉತ್ತರ ಭಾರತದ ದೇವಾಲಯಗಳು ಹೆಚ್ಚು ನಾಗರ ಶೈಲಿಯಲ್ಲಿ ನಿರ್ಮಾಣವಾಗಿದ್ದರೆ, ದಕ್ಷಿಣ ಭಾರತದ ದೇವಾಲಯಗಳು ಹೆಚ್ಚಿನ ಪ್ರಮಾಣದಲ್ಲಿ ಡ್ರಾವಿಡ ಶೈಲಿಯಲ್ಲಿವೆ. ಇದೀಗ ಅಯೋಧ್ಯೆಯಲ್ಲಿ ನಿರ್ಮಾಣವಾಗಿರೋ ಶ್ರೀರಾಮ ಮಂದಿರವನ್ನ ಕೂಡ ನಾಗರ ಶೈಲಿಯಲ್ಲೇ ಕಟ್ಟಲಾಗಿದೆ. ಇನ್ನು, ನಾಗರ ಶೈಲಿ ಅನ್ನೋದು ‘ನಗರ’ ಎಂಬ ಪದದಿಂದ ಹುಟ್ಟಿಕೊಂಡಿದೆ ಎನ್ನುವ ನಂಬಕೆಯಿದೆ. ಇನ್ನು, ದೇವಸ್ಥಾನದ ಒಳಾಂಗಣದಲ್ಲಿ ರಾಮಾಯಣವನ್ನ ತೋರಿಸುವ ವಾಸ್ತುವಿದ್ದು ಅದು ಅತ್ಯಂತ ಆಕರ್ಷಕವಾಗಿದೆ. ಪ್ರತಿಯೊಂದು ಇಟ್ಟಿಗೆಯ ಮೇಲೂ ಶ್ರೀರಾಮನ ನಾಮಸ್ಮರಣೆಯಿದೆ. ಒಳಾಂಗಣ ಮತ್ತು ಹೊರಾಂಗಣದಲ್ಲಿ ಮೂಡಿ ಬಂದಿರೋ ವಾಸ್ತುಶಿಲ್ಪ ನೋಡುಗರ ಭಕ್ತಿಪರವಶ ಮಾಡದೇ ಇರೋದಿಲ್ಲ.

ಜೈ ಶ್ರೀರಾಮ್‌!

  • ಮಂದಿರ 380 ಅಡಿ ಉದ್ದ, 250 ಅಡಿ ಅಗಲ, 161 ಅಡಿ ಎತ್ತರ!
  • ಮಂದಿರ 3 ಅಂತಸ್ತಿನದ್ದಾಗಿದ್ದು, ಪ್ರತಿ ಮಹಡಿ 20 ಅಡಿ ಎತ್ತರ!
  • ದೇವಸ್ಥಾನದಲ್ಲಿ ಒಟ್ಟು 392 ಕಂಬಗಳಿವೆ, 44 ಬಾಗಿಲುಗಳಿವೆ!
  • ಮುಖ್ಯ ಗರ್ಭಗೃಹದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆ!
  • ನೃತ್ಯ ಮಂಟಪ, ರಂಗ ಮಂಟಪ ಸೇರಿದಂತೆ 5 ಮಂಟಪಗಳಿವೆ!
  • ಪೂರ್ವದಿಂದ ಮಂದಿರ ಪ್ರವೇಶ, ಸಿಂಹ ದ್ವಾರದಲ್ಲಿ 32 ಮೆಟ್ಟಿಲು!
  • ದೇವಾಲಯದ ಕಾಂಪೌಂಡ್‌ನ 4 ಮೂಲೆಗಳಲ್ಲಿ 4 ಮಂದಿರ!
  • ಮಂದಿರದ ಕಾಂಪ್ಲೆಕ್ಸ್‌ನಲ್ಲಿ ಮಹರ್ಷಿ ವಾಲ್ಮೀಕಿ ವಿವಿಧ ದೇಗುಲ!
  • ನೈಋತ್ಯ ಭಾಗದ ಕುಬೇರ ತಿಲದಲ್ಲಿ ಶಿವ ದೇವಾಲಯ ನಿರ್ಮಾಣ!
  • ಸ್ವದೇಶಿ ತಂತ್ರಜ್ಞಾನ ಬಳಸಿ ಮಂದಿರ ನಿರ್ಮಾಣ, ಪರಿಸರ ಸ್ನೇಹಿ!

ಇನ್ನು ದೇಗುಲದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿ ಮಾತ್ರ ಪ್ರತಿಷ್ಠಾಪನೆಯಾಗಿರುತ್ತೆ. ಇದ್ಯಾಕೆ ಅಂದ್ರೆ, ಶ್ರೀರಾಮ ಜನಿಸಿದ್ದು ಅಯೋಧ್ಯೆಯಲ್ಲೇ ಎನ್ನುವುದು ನಿಕ್ಕಿ.. ಹೀಗಾಗಿ, ಇಲ್ಲಿ ಬಾಲರಾಮನ ಮೂರ್ತಿಗೆ ಮಾತ್ರ ಪ್ರಾಣ ಪ್ರತಿಷ್ಠಾಪನೆ ಆಗುತ್ತೆ. ಅನಂತರ ಮೊದಲನೇ ಮಹಡಿಯಲ್ಲಿ ಶ್ರೀರಾಮ, ಲಕ್ಷ್ಮಣ, ಸೀತೆ, ಭರತ, ಹನುಮಾನ್‌, ಸೇರಿದಂತೆ ಇಡೀ ಪರಿವಾರವೇ ಇರಲಿದೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಮಂದಿರ ಸಂಪೂರ್ಣ ರಾಮ ಭಕ್ತರ ಕನಸು ನನಸಾಗುತ್ತಿದೆ. ಇದು ಕೇವಲ ರಾಮಮಂದಿರವಲ್ಲ, ರಾಷ್ಟ್ರ ಮಂದಿರ. ಈ ಆಂದೋಲನದಲ್ಲಿ ಒಟ್ಟು 6 ಕೋಟಿ ಜನರು ಭಾಗವಹಿಸಿದ್ದರು. ಕೇವಲ ರಾಮಮಂದಿರಕ್ಕಾಗಿ 11, 12 ಕೋಟಿ ಜನರ ನಿಜಿ ಸಮರ್ಪಣೆಯಾಗಿರುವುದು ವಿಶೇಷ. ದೇವಾಲಯ ನಾಗರಿ ಸೈಲಿಯಲ್ಲಿದೆ.

ಗೋಪಾಲ್‌ ಜೀ, ವಿಹಿಂಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಜಗತ್ತಿನಲ್ಲೇ ಅತೀ ದೊಡ್ಡ ಹಿಂದೂ ದೇವಸ್ಥಾನ ಅನ್ನೋ ಹೆಗ್ಗಳಿಕೆಗೆ ಅಯೋಧ್ಯೆಯ ಶ್ರೀರಾಮಮಂದಿರ ಭಾಜನವಾಗ್ತಿದೆ. ಪ್ರತಿನಿತ್ಯ ಲಕ್ಷಾಂತರ ಜನ ಭೇಟಿ ಕೊಟ್ಟರೂ ದರ್ಶನಕ್ಕೆ ವ್ಯವಸ್ಥೆಯಾಗುವ ರೀತಿಯಲ್ಲಿ ನಿರ್ಮಾಣ ಮಾಡಲಾಗಿದೆ. ಭಕ್ತರಿಗೆ ಯಾವುದೇ ಸಮಸ್ಯೆಯಾಗದಂತೆ, ರಾಮಲಲ್ಲಾನ ಕಣ್ತುಂಬಿಕೊಳ್ಳಲು ಅಡಚಣಿಯಾಗದಂತೆ ದೇಗುಲ ಕಟ್ಟಲಾಗಿದೆ. ಹಾಗೆಯೇ, ಜನವರಿ 23ರಿಂದ ಶ್ರೀರಾಮನ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗ್ತಿದೆ. ಜನ ಜೈ ಶ್ರೀರಾಮ್‌ ಜೈ ಶ್ರೀರಾಮ್‌ ಅಂತಾ ಜಾನಕಿವಲ್ಲಭನ ಘೋಷವನ್ನ ಈಗಾಗಲೇ ಮೊಳಗಿಸ್ತಿದ್ದಾರೆ.

ಕಬ್ಬಿಣವನ್ನೇ ಬಳಸದೇ ಬೃಹತ್​ ರಾಮಮಂದಿರ ನಿರ್ಮಾಣ!

ಭಾರತೀಯರಿಗೆ ಅದರಲ್ಲೂ ಹಿಂದೂಗಳಿಗೆ ರಾಮ ಮಂದಿರ ಅನ್ನೋದ್‌ ಭಾವನಾತ್ಮಕ ವಿಚಾರ. ಕಾಶಿಯಲ್ಲಿ ವಿಶ್ವನಾಥನ ಮಂದಿರವಿದೆ, ಮಥುರಾದಲ್ಲಿ ಶ್ರೀಕೃಷ್ಣನ ದೇಗುಲ ಇದೆ. ಆದ್ರೆ, ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರವಿಲ್ಲ ಅನ್ನೋ ನೋವು ಬೇಸರ ಶ್ರೀರಾಮನ ಭಕ್ತರಲ್ಲಿ 2019ರವರೆಗೂ ಇತ್ತು. ಅಂತೂ ಆ ಕಾಲ ಕೂಡಿ ಬಂದಿದೆ. ಹೆಮ್ಮೆಯ ದೇಗುಲ ತಲೆಎತ್ತಿ ನಿಂತಿದೆ. ಆದ್ರೆ, ಈಗಿರೋ ಕುತೂಹಲ ಅಂದ್ರೆ, ರಾಮಮಂದಿರವನ್ನ ಅದೆಷ್ಟು ಭದ್ರವಾಗಿ ಕಟ್ಟಿದ್ದಾರೆ.. ಪ್ರಕೃತಿ ವಿಕೋಪಗಳು ಸಂಭವಿಸಿದ್ರೂ ಏನೂ ಆಗಲ್ಲ ಅಂತಾ ಯಾಕ್​ ಹೇಳ್ತಿದ್ದಾರೆ. ಅದೆಷ್ಟೆ ಮಳೆ ಬರ್ಲಿ, ಗಾಳಿ ಬೀಸಲಿ, ಭೂಮಿ ಕಂಪಿಸಲಿ ಶ್ರೀರಾಮನ ಮಂದಿರಕ್ಕೆ ಏನೇನೂ ಆಗೋದಿಲ್ಲ. ಮುಂದಿನ ಒಂದು ಸಾವಿರ ವರ್ಷಗಳ ಕಾಲ ದೇವಸ್ಥಾನದ ದುರಸ್ತಿ ಮಾಡೋ ಆಗತ್ಯವೂ ಇರೋದಿಲ್ಲ.

ಈ ದೇವಾಲಯ ಬರೋಬ್ಬರಿ 6.5ರಷ್ಟು ತೀವ್ರತೆಯ ಭೂಕಂಪವನ್ನು ಸುಲಭವಾಗಿ ಎದುರಿಸಬಲ್ಲದು. ಕಂಬಗಳ ಸುತ್ತಳತೆಯನ್ನ ಹೆಚ್ಚಿಸಿ, ಗೋಡೆಗಳ ಮೇಲೆ ಭಾರವಾದ ಕಲ್ಲುಗಳನ್ನ ಅಳವಡಿಸಿದ್ದೇವೆ. ದೇವಾಲಯದ ಅಡಿಪಾಯವನ್ನ ಭಾರವಾದ ಕಲ್ಲುಗಳಿಂದ ಅತ್ಯಂತ ಗಟ್ಟಿಗೊಳಿಸಲಾಗಿದೆ. ಇದು ಭೂಕಂಪದ ಸಮಯದಲ್ಲಿ ದೃಢವಾಗಿ ನಿಲ್ಲುವಂತೆ ಮತ್ತು ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತೆ.

-ಚಂಪತ್ ರೈ, ಪ್ರ. ಕಾರ್ಯಕದರ್ಶಿ, ಶ್ರೀರಾಮ ಜನ್ಮಭೂಮಿ ಟ್ರಸ್ಟ್‌

ಇಂತಾವೊಂದು ದೇವಸ್ಥಾನ ನಿರ್ಮಾಣಕ್ಕಾಗಿ ತಾಂತ್ರಿಕ ತಜ್ಞರ ನೆರವನ್ನೂ ಕಟ್ಟಡ ನಿರ್ಮಾಣದವರು ಪಡೆದಿದ್ದಾರೆ. ಅದೇ ಆಧಾರದ ಮೇಲೆ ಮಂದಿರವನ್ನೂ ನಿರ್ಮಾಣ ಮಾಡಿದ್ದಾರೆ. ಹೀಗಾಗಿಯೇ, ಭಾರೀ ಪ್ರಮಾಣದಲ್ಲಿ ಮಳೆಯಾದ್ರೂ ಏನೂ ಆಗಲ್ಲ, ಗಾಳಿ ಬೀಸಿದ್ರೂ ಏನೂ ಆಗಲ್ಲ, ಭೂಮಿ ಕಂಪನಿಸಿದ್ರೂ ದೇಗುಲ ಜಗ್ಗಲ್ಲ. ಅಷ್ಟೊಂದು ಚಾಣಾಕ್ಷ್ಯವಾಗಿ ದೇವಸ್ಥಾನವನ್ನು ಗಟ್ಟಿಯಾಗಿ ನಿರ್ಮಿಸಿಲಾಗಿದೆ. ಇನ್ನು, ಒಂದಲ್ಲ, ಎರಡಲ್ಲ ಸಾವಿರ ವರ್ಷದವರೆಗೂ ದೇವಸ್ಥಾನದ ದುರಸ್ತಿಯ ಅಗತ್ಯ ಇಲ್ಲವಂತೆ. ವಿಶೇಷ ಅಂದ್ರೆ, ದೇವಸ್ಥಾನಕ್ಕೆ ಚೂರೇ ಚೂರು ಕಬ್ಬಿಣ ಬಳಸಿಲ್ಲ ಅಂದ್ರೆ ನಂಬಲೇಬೇಕು.

ಸಿಬಿಆರ್​​ಐ ತಜ್ಞರು ಭೂಕಂಪ, ಬಿರುಗಾಳಿ ಎಲ್ಲವನ್ನು ಅಂದಾಜು ಮಾಡಿ 2000 ವರ್ಷ ಇರಬೇಕು ಎಂದು ಅವರು ತಯಾರು ಮಾಡಿದ್ದಾರೆ. ಎರಡೂವರೆ ಕಾಲಂ ಇತ್ತು. ಆದರೆ ಅವರು 5 ಅಡಿ ಮಾಡಿದೇವು. ಹೀಗಾಗಿ ದೀರ್ಘಕಾಲ ಬಾಳಿಕೆ ಬರುತ್ತದೆ.

ಕರ್ನಾಟಕದ ಗ್ರೆನೈಟ್‌ ಕಲ್ಲು.. ದೇವಾಲಯ ಭದ್ರ!

ಪ್ರಕೃತಿ ವಿಕೋಪವನ್ನ ತಡೆಯೋ ನಿಟ್ಟಿನಲ್ಲಿ ಯಾವ್ಯಾವ ರೀತಿ ಭದ್ರತೆ ಕಲ್ಪಿಸಲು ಸಾಧ್ಯನೋ ಅದೆಲ್ಲವನ್ನೂ ಮಾಡಲಾಗಿದೆ. ನಾವಿಲ್ಲಿ ನಿಮಗೆ ಮತ್ತೊಂದು ಅಚ್ಚರಿಕ ವಿಷ್ಯ ಹೇಳಲೇಬೇಕು. ಅದೇನ್‌ ಅಂದ್ರೆ, ದೇವಾಲಯದ ನಿರ್ಮಾಣಕ್ಕೆ ಕಬ್ಬಿಣವನ್ನ ಬಳಸಲಾಗಿಲ್ಲ ಮತ್ತು ಅಡಿಪಾಯದಲ್ಲಿ ಕಾಂಕ್ರೀಟ್​​ನೂ ಹಾಕಿಲ್ಲ. ಇದು ಅಚ್ಚರಿಯಾದ್ರೂ ಸತ್ಯ. ಸುಮಾರು 400 ಅಡಿ ಉದ್ದ ಮತ್ತು ಮುನ್ನೂರು ಅಡಿ ಅಗಲದ ಬೃಹತ್ ಭೂಪ್ರದೇಶದಲ್ಲಿ 14 ಮೀಟರ್ ದಪ್ಪದ ಕೃತಕ ಬಂಡೆಯನ್ನು ದಪ್ಪ ರೋಲರ್ ಕಾಂಪ್ಯಾಕ್ಟ್ ಕಾಂಕ್ರೀಟ್ ಎರಕಹೊಯ್ದು ಅಡಿಪಾಯ ಮಾಡಲಾಗಿದೆ. 50 ಅಡಿ ಆಳದಲ್ಲಿ ಹಲವು ಪದರಗಳಲ್ಲಿ ಬೃಹತ್‌ ಬಂಡೆಯನ್ನೂ ನಿರ್ಮಿಸಲಾಗಿದೆ.

ಪ್ರತಿಯೊಂದು ರಾಜ್ಯಕ್ಕೂ ಒಂದಲ್ಲ ಒಂದು ರೀತಿಯ ಲಿಂಕ್

ಇನ್ನು ಮಂದಿರ ನಿರ್ಮಾಣಕ್ಕೂ ದೇಶದ ಪ್ರತಿಯೊಂದು ರಾಜ್ಯಕ್ಕೂ ಒಂದಲ್ಲ ಒಂದು ರೀತಿಯ ಲಿಂಕ್​ ಇದ್ದೇ ಇರುತ್ತೆ. ಒಂದು ರಾಜ್ಯದಿಂದ ಕಲ್ಲು ಹೋಗಿದ್ರೆ, ಮತ್ತೊಂದು ರಾಜ್ಯದಿಂದ ಇನ್ನೋನೋ ವಸ್ತು ಸರಬರಾಜಾಗಿರುತ್ತೆ. ಅದೇ ರೀತಿ ರಾಮಮಂದಿರದ ಅಡಿಪಾಯಕ್ಕೆ ಕರ್ನಾಟಕದ ಗ್ರೆನೈಟ್ ಕಲ್ಲುಗಳನ್ನೂ ಬಳಸಲಾಗಿದೆ. ಅದು ನೀರಿನ ಸೋರಿಕೆಯನ್ನ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದಕ್ಕಾಗಿಯೇ ದೇಶದ ಎಂಟು ಹೆಸರಾಂತ ತಾಂತ್ರಿಕ ಸಂಸ್ಥೆಗಳ ನೆರವು ಪಡೆಯಲಾಗಿದೆ. ಬೃಹತ್‌ ಕೃತಕ ಬಂಡೆಯ ಮೇಲೆ 21 ಅಡಿ ಎತ್ತರದ ಸ್ತಂಭ ನಿರ್ಮಿಸಲಾಗಿದೆ. ಸ್ತಂಭದ ಮೇಲೆ ದೇವಾಲಯ ಆಕಾರ ಪಡೆದಿದೆ. ಅಷ್ಟೇ ಅಲ್ಲ, ರಾಮಮಂದಿರವನ್ನ ಪ್ರಕೃತಿ ವಿಕೋಪದಿಂದ ರಕ್ಷಿಸಲು ದೇವಾಲಯದ ಮೂರು ಕಡೆ 16 ಅಡಿ ಎತ್ತರದ ಗೋಡೆಯನ್ನೂ ನಿರ್ಮಿಸಲಾಗಿದೆ. ಉತ್ತರ, ದಕ್ಷಿಣ ಮತ್ತು ಪಶ್ಚಿಮ ದಿಕ್ಕುಗಳಲ್ಲಿ ಗೋಡೆಗಳನ್ನು ರೂಪಿಸಲಾಗಿದೆ. ದೇವಾಲಯದ ನಾಲ್ಕು ದಿಕ್ಕುಗಳಲ್ಲಿಯೂ ಸುಮಾರು 40 ಅಡಿ ಆಳದ ತಡೆಗೋಡೆ ಇವಾಗಿವೆ. ಇವು ಏನು ಮಾಡುತ್ತವೆ ಅಂದ್ರೆ ಪ್ರಕೃತಿ ವಿಕೋಪ ಉಂಟಾದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತೆ. ಉದಾಹರಣೆಗೆ ಹೇಳ್ಬೇಕು ಅಂದ್ರೆ ದೇವಸ್ಥಾನದ ಸಮೀಪವೇ ಇರೋ ಸರಯೂ ನದಿ ಭಾರೀ ಮಳೆಗೆ ಉಕ್ಕಿ ಬಂದರೂ ದೇವಸ್ಥಾನಕ್ಕೆ ಹಾನಿಯಾಗದಂತೆ ತಡೆಯುತ್ತವಂತೆ.

ಶ್ರೀರಾಮ ಮಂದಿರದ ವಿಶೇಷತೆ ಬಗ್ಗೆ ಎಷ್ಟು ಹೇಳಿದ್ರೂ ಮುಗಿಯೋದಿಲ್ಲ. ಯಾಕಂದ್ರೆ, ಅಷ್ಟೊಂದು ಪ್ರೀತಿ ಮತ್ತು ಪಕ್ಕಾ ಲೆಕ್ಕಾಚಾರಗಳಿಂದ ಬಾಲರಾಮನ ದೇಗುಲವನ್ನ ಕಟ್ಟಲಾಗಿದೆ. ಈಗಾಗ್ಲೇ ದೇವಸ್ಥಾನದ ಅಡಿಪಾಯವನ್ನ ಹೇಗೆ ನಿರ್ಮಿಸಲಾಗಿದೆ. ಭೂಕಂಪಕ್ಕೂ ಜಗ್ಗದೇ ದೇಗುಲ ಅದೇಗೆ ನಿಂತಿರುತ್ತೆ ಅನ್ನೋ ಬಗ್ಗೆ ನಿಮಗ್ಗೆ ಎತ್ತಿ ನಿಂತಿದೆ ಅನ್ನೋದನ್ನ ಹೇಳಿದ್ದೇವೆ. ಇನ್ನು ಶ್ರೀರಾಮ ನವಮಿಗೆ ಸೂರ್ಯನ ರಶ್ಮೀಗಳು 5 ದಿನಗಳ ಕಾಲ ರಾಮನ ವಿಗೃಹದ ಮೇಲೆ ಹೇಗೆ ಬೀಳುವಂತೆ ನಿರ್ಮಿಸಲಾಗಿದೆ? ದೇವಸ್ಥಾನದ ಪ್ರಾಂಗಣದಲ್ಲಿ ಇನ್ನು ಯಾವ ಯಾವ ದೇವಸ್ಥಾನಳು ಇವೆ ಅನ್ನೋದು ಕೂಡ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಭೂಕಂಪಕ್ಕೂ ಜಗ್ಗಲ್ಲ, ಬಿರುಗಾಳಿ ಬಂದ್ರೂ ಬೀಳಲ್ಲ.. 2 ಸಾವಿರ ವರ್ಷ ಇರುತ್ತೆ ರಾಮ ಮಂದಿರ!

https://newsfirstlive.com/wp-content/uploads/2024/01/RAM_TEMPLE-3.jpg

Load More