newsfirstkannada.com

PHOTO: ಬಣ್ಣ, ಬಣ್ಣದ ಹೂಗಳಿಂದ ಅಲಂಕಾರ.. ಅಯೋಧ್ಯೆ ರಾಮಮಂದಿರ ನೋಡೋದೇ ಪರಮಾನಂದ!

Share :

Published January 20, 2024 at 1:26pm

    ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಳ್ಳುತ್ತಿರುವ ಮಂದಿರ

    ಅಯೋಧ್ಯೆಯ ರಾಮಮಂದಿರದ ದೃಶ್ಯ ನಿಜಕ್ಕೂ ಮನಮೋಹಕ

    ಪ್ರಾಣ ಪ್ರತಿಷ್ಠಾಪನೆಗಾಗಿ ಸಜ್ಜಾಗಿರುವ ರಾಮನ ಅರಮನೆ ಸಿಂಗಾರ

ರಾಮಜನ್ಮಭೂಮಿ ಅಯೋಧ್ಯೆ ಭವ್ಯ ರಾಮಮಂದಿರದ ಲೋಕಾರ್ಪಣೆಗೆ ಸಜ್ಜಾಗುತ್ತಿದೆ. ಇನ್ನು ಕೆಲವೇ ಗಂಟೆಗಳಲ್ಲಿ ಬರೋಬ್ಬರಿ 500 ವರ್ಷಗಳ ಬಳಿಕ ದೈವಿಕ ನಗರಿಯಲ್ಲಿ ಶ್ರೀರಾಮನ ಮಂದಿರ ಉದ್ಘಾಟನೆಯಾಗುತ್ತಿದೆ.

ಜನವರಿ 22ರಂದು ರಾಮಮಂದಿರದ ಉದ್ಘಾಟನೆ ಹಿನ್ನೆಲೆಯಲ್ಲಿ ಅಂತಿಮ ಹಂತದ ಸಿದ್ಧತೆಗಳನ್ನು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಕೈಗೊಳ್ಳುತ್ತಿದೆ.

ಬಣ್ಣ, ಬಣ್ಣದ ಹೂವುಗಳಿಂದ ಅಲಂಕಾರಗೊಂಡಿರುವ ಅಯೋಧ್ಯೆ ರಾಮಮಂದಿರ ಮನಸೂರೆಗೊಳಿಸುತ್ತಿದೆ.

ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಆಗುತ್ತಿದ್ದು, ಈಗಾಗಲೇ ಪೂಜಾ ವಿಧಿ ವಿಧಾನಗಳು ನಡೆಯುತ್ತಿದೆ. ಪ್ರಾಣ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ರಾಮಮಂದಿರದ ಹೊರಾಂಗಣವನ್ನು ಸುಂದರವಾಗಿ ಅಲಂಕಾರಗೊಳಿಸಲಾಗುತ್ತಿದೆ.

ಮಂದಿರ ಲೋಕಾರ್ಪಣೆಗೆ ಕೆಲವೇ ಗಂಟೆಗಳು ಬಾಕಿ ಇರುವಾಗ ಅಯೋಧ್ಯೆಯ ರಾಮಮಂದಿರದ ಭವ್ಯ ದೃಶ್ಯಗಳನ್ನು ಬಿಡುಗಡೆ ಮಾಡಲಾಗಿದೆ.

ಬಣ್ಣ ಬಣ್ಣದ ಹೂವುಗಳಿಂದ ಅಲಂಕೃತಗೊಳ್ಳುತ್ತಿರುವ ಅಯೋಧ್ಯೆಯ ರಾಮಮಂದಿರದ ದೃಶ್ಯ ಮನಮೋಹಕವಾಗಿದೆ.

ಅಯೋಧ್ಯೆ ರಾಮಮಂದಿರದ ಒಳಭಾಗದ ದೃಶ್ಯ ಕಣ್ಮನ ಸೆಳೆಯುತ್ತಿದ್ದು, ಪ್ರಾಣ ಪ್ರತಿಷ್ಠಾಪನೆಗಾಗಿ ರಾಮನ ಅರಮನೆ ಸಿಂಗಾರಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PHOTO: ಬಣ್ಣ, ಬಣ್ಣದ ಹೂಗಳಿಂದ ಅಲಂಕಾರ.. ಅಯೋಧ್ಯೆ ರಾಮಮಂದಿರ ನೋಡೋದೇ ಪರಮಾನಂದ!

https://newsfirstlive.com/wp-content/uploads/2024/01/Ayodhya-Rama-Mandira-1.jpg

Load More