newsfirstkannada.com

ರಾಮಲಲ್ಲಾನ ಪ್ರಾಣ ಪ್ರತಿಷ್ಠಾನಗೆ ಕ್ಷಣಗಣನೆ.. ಅಂದು ಷೇರು ಮಾರುಕಟ್ಟೆಯಲ್ಲಿ ನಡೆಯಲ್ಲ ಯಾವುದೇ ವಹಿವಾಟು..!

Share :

Published January 20, 2024 at 7:32am

Update January 20, 2024 at 10:35am

    ಕಾರ್ಯಕ್ರಮದಲ್ಲಿ ಸಾವಿರಾರು ಗಣ್ಯರು ಸೇರಿ ಲಕ್ಷಾಂತರ ಭಕ್ತರು ಭಾಗಿ

    ರಾಮನೂರಿಗೆ ಬರುವ ಅತಿಥಿಗಳನ್ನ ಸ್ವಾಗತಿಸಲು ಸಜ್ಜಾದ ರಾಮನೂರು

    ಅಯೋಧ್ಯೆಯಲ್ಲಿ ಭಯೋತ್ಪಾದನಾ ನಿಗ್ರಹ ದಳದ ಕಮಾಂಡೋ ನಿಯೋಜನೆ

ಭರತಭೂಮಿಯಲ್ಲಿ ರಾಮನದ್ದೇ ಜಪ. ರಾಮಲಲ್ಲಾನ ಪ್ರಾಣ ಪ್ರತಿಷ್ಠಾನಕ್ಕೆ ಕ್ಷಣಗಣನೆ ಶುರುವಾಗಿದೆ. ಸೋಮವಾರ ಅಪರೂಪದ ಕ್ಷಣಕ್ಕೆ ಇಡೀ ವಿಶ್ವ ಸಾಕ್ಷಿ ಆಗ್ತಿದೆ. ಪ್ರಭುರಾಮನ ಮಂದಿರದ ಗರ್ಭ ಗುಡಿಯಲ್ಲಿ ಬಾಲರಾಮ ದರ್ಶನ ತೋರಲಿದ್ದಾನೆ. ಹೀಗಾಗಿ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಸಂಭ್ರಮ ಸಡಗರ ಮನೆ ಮಾಡಿದ್ದು, ಹಬ್ಬದ ವಾತಾವರಣ ಸೃಷ್ಟಿ ಆಗಿದೆ.

ಶತಮಾನಗಳ ಬಯಕೆ ಈಡೇರಿಕೆಗೆ ಗಂಟೆಗಳಷ್ಟೇ ಬಾಕಿ. ನಾಳೆ ಒಂದೇ ದಿನ ಉರುಳಿ ಸೂರ್ಯೋದಯ ಆಗುತ್ತಲೇ ದೇಶ ರಾಮೋತ್ಸವದಲ್ಲಿ ಮಿಂದೇಳಲಿದೆ. ಇಕ್ಷ್ವಾಕು ವಂಶದ ಪ್ರಭು ರಾಮ, ಅಯೋಧ್ಯೆಯಲ್ಲಿ ಭಕ್ತರ ದರ್ಶನ ತೋರಲಿದ್ದಾನೆ. ಇಡೀ ನಗರವೇ ವಿದ್ಯುತ್​ ದೀಪಗಳಿಂದ ಕಂಗೊಳಿಸ್ತಿದೆ. ಸೋಮವಾರ ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಇಡೀ ಭರತ ಭೂಮಿ ಕಾತರದಿಂದ ಕಾಯ್ದಿದೆ.

ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರು!

ಅಯೋಧ್ಯೆ ಮಧುವಣಗಿತ್ತಿಯಂತೆ ಸಿಂಗಾರಗೊಂಡಿದೆ. ರಾಮನೂರಿಗೆ ಬರುವ ಅತಿಥಿಗಳನ್ನ ಸ್ವಾಗತಿಸಲು ಸಜ್ಜಾಗಿ ನಿಂತಿದೆ. ಇಡೀ ರಾಮ ಮಂದಿರಕ್ಕೆ ದೀಪಗಳಿಂದ ಅಲಂಕರಿಸಲಾಗಿದೆ. ಸಂಜೆ ಹೊತ್ತು ಸರಯೂ ಘಾಟ್​​​ನಲ್ಲಿ ಸಂಧ್ಯಾ ಆರತಿ ಬೆಳಗಲಾಯ್ತು.

150 ವಿದ್ವಾಂಸರಿಂದ ವೇದ-ಮಂತ್ರ ಘೋಷ

ಇವತ್ತು ಮಂದಿರದಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿದ್ದು ಮುಖ್ಯವಾಗಿ ವಾಸ್ತು ಶಾಂತಿ ನೆರವೇರಲಿದೆ. ನಾಳೆ ಶಯಾಧಿವಸ್ ಆಚರಿಸಲಾಗ್ತಿದ್ದು, 22ರಂದು ಬೆಳಗ್ಗೆಯೇ ರಾಮಲಲ್ಲಾಗೆ ವಿಶೇಷ ಪೂಜೆ ಮತ್ತು ಮಹಾಮಸ್ತಕಾಭಿಷೇಕ ನಡೆಯಲಿದೆ. ಸೋಮವಾರದ ಪ್ರಾಣಪ್ರತಿಷ್ಠಾನ ಧಾರ್ಮಿಕ ಕಾರ್ಯಕ್ರಮದಲ್ಲಿ 150 ವಿದ್ವಾಂಸರು, ಸಂಜೆವರೆಗೂ ವೇದ-ಮಂತ್ರ-ಘೋಷ ಮೊಳಗಲಿದೆ.

ಅಹಿತಕರ ಘಟನೆ ನಡೆಯದಂತೆ ಭಾರೀ ಭದ್ರತೆ!

ಉಗ್ರರ ಬೆದರಿಕೆ ಹಿನ್ನೆಲೆ ಭದ್ರತೆಗಾಗಿ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಕಮಾಂಡೋಗಳ ನಿಯೋಜನೆ ಆಗಿದೆ. ಈಗಾಗಲೇ ಮೂವರು ಶಂಕಿತರನ್ನ ವಶಕ್ಕೆ ಪಡೆಯಲಾಗಿದೆ. ಹೀಗಾಗಿ ಲತಾ ಮಂಗೇಶ್ಕರ್​​​ ಚೌಕ್​​, ಅಯೋಧ್ಯಾ ಧಾಮ್​ ರೈಲ್ವೇ ನಿಲ್ದಾಣ, ವಿಮಾನ ನಿಲ್ದಾಣದ ಸುತ್ತಮುತ್ತ ಹದ್ದಿನ ಕಣ್ಣಿಡಲಾಗಿದೆ. ಕಾರ್ಯಕ್ರಮದಲ್ಲಿ ಸಾವಿರಾರು ಗಣ್ಯರು ಸೇರಿ ಲಕ್ಷಾಂತರ ಭಕ್ತರು ಭಾಗಿ ಆಗ್ತಿದ್ದು, ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.

ಮಹಾರಾಷ್ಟ್ರದಲ್ಲಿ ಸಾರ್ವಜನಿಕ ರಜೆ ಘೋಷಿಸಿದ ಸರ್ಕಾರ

ಇನ್ನು, ಲಕ್ಷಾಂತರ ಭಕ್ತರ ಆಗಮನ ಕಾರಣಕ್ಕೆ ಅಯೋಧ್ಯೆಯಲ್ಲಿ ವೈದ್ಯಕೀಯ ಸೇವೆಯನ್ನ ಉನ್ನತಿಗೆ ಏರಿಸಲಾಗಿದೆ. 120 ಹಾಸಿಗೆಗಳ ಆಸ್ಪತ್ರೆಯನ್ನ ಮೇಲ್ದರ್ಜೆಗೆ ಏರಿಸಲಾಗಿದೆ. ಜನವರಿ 22 ರಂದು ಕೆಲ ರಾಜ್ಯಗಳು ಅರ್ಧ ದಿನ ರಜೆ ಘೋಷಿಸಿದ್ದರೆ, ಮಹಾರಾಷ್ಟ್ರ ಮತ್ತು ಕೇಂದ್ರಾಡಳಿತ ಪ್ರದೇಶ ಪುದುಚೇರಿಯಲ್ಲಿ ಇಡೀ ದಿನ ಸಾರ್ವಜನಿಕ ರಜೆ ಘೋಷಿಸಲಾಗಿದೆ.

ಷೇರು ಮಾರುಕಟ್ಟೆಯಲ್ಲಿ ನಡೆಯಲ್ಲ ಯಾವುದೇ ವಹಿವಾಟು!

ವಿಶೇಷ ಅಂದ್ರೆ ಆ ದಿನ ಷೇರು ಮಾರುಕಟ್ಟೆಯಲ್ಲಿ ಯಾವುದೇ ವಹಿವಾಟು ನಡೆಯುವುದಿಲ್ಲ. ಷೇರು ಮಾರುಕಟ್ಟೆಗೂ ರಜೆ ಘೋಷಿಸಲಾಗಿದೆ.. ಸೆಬಿ, ಬಿಎಸ್‌ಐ ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರಗಳು ಈ ನಿರ್ಧಾರವನ್ನ ತೆಗೆದುಕೊಂಡಿವೆ.. ಸರ್ಕಾರಿ ಬ್ಯಾಂಕ್‌ಗಳು ಮತ್ತು ಸರ್ಕಾರಿ ವಿಮಾ ಕಂಪನಿಗಳಿಗೂ ರಜೆ ನೀಡಲಾಗಿದೆ..

ಬಾಲರಾಮನಿಗೆ 56 ಬಗೆಯ ಸಿಹಿ ತಿನಿಸುಗಳ ನೈವೇದ್ಯ

ಇನ್ನು, ಲಖನೌದ ರಾಮ ಭಕ್ತರೊಬ್ಬರು ರಾಮಲಲ್ಲಾನಿಗಾಗಿ 56 ಬಗೆಯ ಸಿಹಿ ತಿನಿಸುಗಳನ್ನು ಸಿದ್ಧಪಡಿಸಿದ್ದು, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಅರ್ಚಕರಿಗೆ ಅರ್ಪಿಸಿದ್ದಾರೆ.. ಪ್ರಾಣ ಪ್ರತಿಷ್ಠಾಪನೆ ಮುಗಿದ ನಂತರ, ಶ್ರೀರಾಮನಿಗೆ ಈ ಸಿಹಿತಿನಿಸುಗಳನ್ನೆ ನೈವೇದ್ಯವಾಗಿ ನೀಡಲಾಗ್ತಿದೆ.

ಅಯೋಧ್ಯೆಯ ಭವ್ಯ ಮಂದಿರಕ್ಕೆ 400 ಕೆಜಿ ತೂಕದ ವಿಶ್ವದ ಅತಿದೊಡ್ಡ ಬೀಗ ಅಯೋಧ್ಯೆಗೆ ರವಾನೆ ಆಗಿದೆ. ಅಲಿಗಢದಲ್ಲಿ ನೊರಂಗಾಬಾದ್ ನಿವಾಸಿ ಮಹಾಮಂಡಲೇಶ್ವರ ಅನ್ನಪೂರ್ಣ ಭಾರತಿ ಪುರಿ ಈ ಬೀಗಕ್ಕೆ ವಿಧಿವಿಧಾನದಂತೆ ಪೂಜೆ ಸಲ್ಲಿಸಿದ್ದಾರೆ.. ಸತ್ಯ ಪ್ರಕಾಶ್ ಶರ್ಮಾ ಮತ್ತು ಅವರ ಪತ್ನಿ ರುಕ್ಮಿಣಿ ಶರ್ಮಾ ಎಂಬ ವೃದ್ಧ ದಂಪತಿ 2 ವರ್ಷಗಳ ಹಿಂದೆ ಬೀಗವನ್ನು ತಯಾರಿಸಿದ್ದರು.

ಇತ್ತ, ರಾಯ್​ಬರೇಲಿಯ ರಾಮಭಕ್ತರೊಬ್ಬರು ಭಕ್ತಿಯ ಪರಾಕಾಷ್ಟೇ ಮೆರೆದಿದ್ದಾರೆ. ತಮ್ಮ ಜಡೆಯನ್ನ ಬಳಸಿ ರಾಮನ ರಥವನ್ನ ಎಳೆದುಕೊಂಡು ಅಯೋಧ್ಯೆ ಆಗಮಿಸ್ತಿದ್ದಾರೆ. ಬರೋಬ್ಬರಿ 566 ಕಿಲೋ ಮೀಟರ್​​​ ಪ್ರಯಾಣ ಬೆಳಸಿ ಆಯೋಧ್ಯೆಗೆ ಪ್ರಯಾಣ ಬೆಳಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮಲಲ್ಲಾನ ಪ್ರಾಣ ಪ್ರತಿಷ್ಠಾನಗೆ ಕ್ಷಣಗಣನೆ.. ಅಂದು ಷೇರು ಮಾರುಕಟ್ಟೆಯಲ್ಲಿ ನಡೆಯಲ್ಲ ಯಾವುದೇ ವಹಿವಾಟು..!

https://newsfirstlive.com/wp-content/uploads/2024/01/RAM_PHOTO.jpg

Load More