newsfirstkannada.com

Video: ರಾಮಮಂದಿರ ಲೋಕಾರ್ಪಣೆ ಸಮಾರಂಭ.. ಸ್ಪೆಷಲ್ ನೃತ್ಯ ಮಾಡಿದ ರಾಧಿಕಾ ಕುಮಾರಸ್ವಾಮಿ

Share :

Published January 22, 2024 at 11:36am

  ಇಂದು ರಾಮಮಂದಿರಲ್ಲಿ ನಡೆಯುವ ರಾಮನ ಪ್ರತಿಷ್ಠಾಪನೆ ಕಾರ್ಯಕ್ರಮ

  ಶ್ರೀರಾಮನ ಹಾಡಿಗೆ ನೃತ್ಯ ಮಾಡಿರುವ ಸ್ಯಾಂಡಲ್​ವುಡ್​ ಬ್ಯೂಟಿ ರಾಧಿಕಾ

  ಸಿನಿಮಾ, ರಾಜಕೀಯ ಗಣ್ಯರು ರಾಮಮಂದಿರ ಸಮಾರಂಭದಲ್ಲಿ ಭಾಗಿ

ಇಂದು ರಾಮಮಂದಿರದಲ್ಲಿ ರಾಮಲಲ್ಲಾ ಮೂರ್ತಿ ವಿರಾಜಮಾನನಾಗಿ ಪ್ರತಿಷ್ಠಾಪನೆ ಆಗಲಿದೆ. ನೂರಾರು ವರ್ಷಗಳ ರಾಮಭಕ್ತರ ಕನಸು ಈಡೇರಲಿದೆ. ಸದ್ಯ ಇಡೀ ದೇಶದ ಚಿತ್ತ ಗರ್ಭಗುಡಿಯಲ್ಲಿ ಶುಭಾ ಮುಹೂರ್ತದಲ್ಲಿ ಪ್ರತಿಷ್ಠಾಪನೆ ಆಗಲಿರುವ ಮೇಲೆ ನೆಟ್ಟಿದೆ. ಈ ಹಿನ್ನೆಲೆಯಲ್ಲಿ ರಾಮನ ಹಾಡಿಗೆ ಸ್ಯಾಂಡಲ್​ವುಡ್​ ಬ್ಯೂಟಿ ನಟಿ ರಾಧಿಕಾ ಕುಮಾರಸ್ವಾಮಿ ಅವರು ಸ್ಪೆಷಲ್ ಆಗಿ ನೃತ್ಯ ಮಾಡಿದ್ದಾರೆ.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ಇಂದು ಸಂಭ್ರಮದಿಂದ ನೆರವೇರುವ ಮುನ್ನವೇ ನಟಿ ರಾಧಿಕಾ ಅವರು ರಾಮನ ಹಾಡಿಗೆ ಮನಮೋಹಕವಾಗಿ ನೃತ್ಯ ಮಾಡಿದ್ದಾರೆ. ರಾಧಿಕಾ ಅವರು ರಾಮಮಂದಿರ ಲೋಕಾರ್ಪಣೆ ಹಿನ್ನೆಲೆಯಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ತಮ್ಮ ಮನೆಯ ದೇವರ ಕೋಣೆಯನ್ನು ಹೂವುಗಳಿಂದ, ದೀಪಾಗಳಿಂದ ಅಲಂಕಾರ ಮಾಡಿದ್ದಾರೆ. ಅದರಲ್ಲಿ ರಾಮನಿಗೆ ವಿಶೇಷವಾದ ರೀತಿಯಲ್ಲಿ ಶೃಂಗಾರಗೊಳಿಸಿದ್ದಾರೆ.

ಬಳಿಕ ರಾಮದೇವರಿಗೆ ವಿಶೇಷವಾದ ರೀತಿಯಲ್ಲಿ ಪೂಜೆ ಸಲ್ಲಿಸಿ ಬಳಿಕ ದೇವರ ಮುಂಭಾಗದಲ್ಲೇ ಕುಳಿತು ರಾಧಿಕಾ ಅವರು ನೃತ್ಯ ಮಾಡಿದ್ದಾರೆ. ಶ್ರೀರಾಮನ ಕೆಲ ಭಂಗಿಗಳನ್ನ ತೋರಿಸಿದ್ದಾರೆ. ಹಣೆ ಮೇಲಿನ ಕುಂಕುಮ ಇಡುವುದು, ಬಿಲ್ಲು ಎಳೆದು ಬಿಡುವುದಂತಹ ಭಂಗಿಗಳನ್ನ ತಮ್ಮ ನೃತ್ಯದಲ್ಲಿ ತೋರಿಸಿದ್ದಾರೆ. ರಾಧಿಕಾ ಅವರು ಮಾಡಿರುವ ಡ್ಯಾನ್ಸ್​ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್​ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Video: ರಾಮಮಂದಿರ ಲೋಕಾರ್ಪಣೆ ಸಮಾರಂಭ.. ಸ್ಪೆಷಲ್ ನೃತ್ಯ ಮಾಡಿದ ರಾಧಿಕಾ ಕುಮಾರಸ್ವಾಮಿ

https://newsfirstlive.com/wp-content/uploads/2024/01/RADHIKA.jpg

Load More