newsfirstkannada.com

WATCH: ಅಯೋಧ್ಯೆಯಲ್ಲಿ ನೂಕುನುಗ್ಗಲು; ಭಕ್ತರನ್ನ ಕಂಟ್ರೋಲ್ ಮಾಡಲು ಪೊಲೀಸರ ಹರಸಾಹಸ

Share :

Published January 23, 2024 at 3:34pm

    ಭಕ್ತಾದಿಗಳನ್ನ ನಿಯಂತ್ರಿಸಲು ಹರಸಾಹಸ‌ ಪಡುತ್ತಿರುವ ಪೋಲಿಸರು

    ಮೊದಲ ದಿನದ ಮೊದಲ ದರ್ಶನಕ್ಕೆ ಭಾರೀ ಪ್ರಮಾಣದಲ್ಲಿ ಬಂಧ ಜನ

    ಮಗುವನ್ನ ಹುಡುಕಿಕೊಡುವಂತೆ ಪೊಲೀಸರ ಮುಂದೆ ತಾಯಿ ಕಣ್ಣೀರು

ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ನೆರವೇರಿದ ಬಳಿಕ ರಾಮಮಂದಿರದ ದರ್ಶನಕ್ಕೆ ಭಕ್ತ ಸಾಗರವೇ ಹರಿದು ಬಂದಿದೆ. ಬೆಳಗ್ಗೆಯಿಂದಲೇ ಶ್ರೀರಾಮನ ದರ್ಶನಕ್ಕಾಗಿ ಭಕ್ತರನ್ನು ಮಂದಿರದ ಒಳಕ್ಕೆ ಬಿಡಲಾಗುತ್ತಿದೆ. ಆದರೆ ಭಾರೀ ಪ್ರಮಾಣದಲ್ಲಿ ಭಕ್ತಾದಿಗಳು ಆಗಮಿಸಿದ ಹಿನ್ನೆಲೆಯಲ್ಲಿ ನೂಕುನುಗ್ಗಲು ಉಂಟಾಗಿದೆ.

ಅಯೋಧ್ಯೆಯ ರಾಮಮಂದಿರದಲ್ಲಿನ ಬಾಲರಾಮನ ದರ್ಶನ ಪಡೆಯಲು ಲಕ್ಷಾಂತರ ಪ್ರಮಾಣದಲ್ಲಿ ರಾಮಭಕ್ತರು ಆಗಮಿಸಿದ್ದಾರೆ. ಇಂತಹ ದೊಡ್ಡ ಜನಸಂದಣಿಯಲ್ಲಿ ಮಹಿಳೆಯೊಬ್ಬರು ತನ್ನ ಮಗುವನ್ನ ಕಳೆದುಕೊಂಡು ಕಣ್ಣೀರು ಹಾಕುತ್ತಿದ್ದಾರೆ. ಮಗುವನ್ನು ಹುಡುಕಿಕೊಡುವಂತೆ ಪೊಲೀಸರ ಮುಂದೆ ತಾಯಿ ಗೋಗರೆದಿದ್ದಾಳೆ.

ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ರಾಮಲಲ್ಲಾ ದರ್ಶನ ಪಡೆಯಲು ಮೊದಲ ದಿನವೇ ನೂಕುನುಗ್ಗಲು ಉಂಟಾಗಿದೆ. ಹೊಸದಾಗಿ ನಿರ್ಮಿಸಿದ್ದ ರಾಮ ಕಾರಿಡಾರ್​ನ ಗೇಟ್ ಅನ್ನು ಭಕ್ತರು ಹಾಳು ಮಾಡಿದ್ದಾರೆ. ಅಯೋಧ್ಯೆ ರಾಮಭಕ್ತರು ಸಾಗರದಂತೆ ಹರಿದು ಬಂದಿದ್ದಾರೆ. ಇಂದು ಮುಂಜಾನೆ ದೇವಾಲಯದ ಬಾಗಿಲು ತೆರೆಯುವ ಮೊದಲೇ 3 ಗಂಟೆಯಿಂದ ಮಂದಿರದ ಆವರಣದಲ್ಲಿ ಭಾರೀ ಪ್ರಮಾಣದಲ್ಲಿ ಭಕ್ತರು ಜಮಾಯಿಸಿದ್ದರು. 500 ವರ್ಷದ ಬಳಿಕ ರಾಮಲಲ್ಲಾ ದರ್ಶನಕ್ಕೆ ನೂಕುನುಗ್ಗಲು ಉಂಟಾಗಿದ್ದು ಇಂದು 1 ಲಕ್ಷಕ್ಕೂ ಹೆಚ್ಚು ಜನರು ರಾಮಲಲ್ಲಾ ದರ್ಶನ ಪಡೆಯುವ ಸಾಧ್ಯತೆ ಇದೆ.

ರಾಮ ದರ್ಶನಕ್ಕೆ ಭಕ್ತ ಸಾಗರ ಹರಿದು ಬಂದಿದ್ದು ಭಕ್ತರನ್ನ ಕಂಟ್ರೋಲ್ ಮಾಡಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ. ಲಕ್ಷ ಗಟ್ಟಲೇ ಜನರು ಆಗಮಿಸಿದ್ದು ಅಯೋಧ್ಯೆಗೆ ಬರುವ ವಾಹನಗಳ ಮಾರ್ಗವನ್ನು ಬದಲಾವಣೆ ಮಾಡಲಾಗುತ್ತಿದೆ. ವಾಹನಗಳನ್ನ ಅಯೋಧ್ಯೆ ಒಳ ಪ್ರವೇಶಿಸಲು ಬಿಡುತ್ತಿಲ್ಲ. ಬೇರೆ ಮಾರ್ಗಗಳಿಗೆ ಪೊಲೀಸರು ಬದಲಾವಣೆ ಮಾಡುತ್ತಿದ್ದಾರೆ. ಆದ್ರೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ಜನರನ್ನು ನಿಯಂತ್ರಣ ಮಾಡಲು ಮತ್ತಷ್ಟು ಪೊಲೀಸರನ್ನು ಕರೆಯಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

WATCH: ಅಯೋಧ್ಯೆಯಲ್ಲಿ ನೂಕುನುಗ್ಗಲು; ಭಕ್ತರನ್ನ ಕಂಟ್ರೋಲ್ ಮಾಡಲು ಪೊಲೀಸರ ಹರಸಾಹಸ

https://newsfirstlive.com/wp-content/uploads/2024/01/AYODHYA_NEW.jpg

Load More