ರಾಮನವಮಿ ಆಚರಣೆಗೆ ಸಕಲ ರೀತಿಯಲ್ಲಿ ಸಜ್ಜಾದ ಅಯೋಧ್ಯೆ.. ಬೇಸಿಗೆ ನೀಗಿಸಲು ಭಕ್ತರಿಗೆ ಮಾಡಲಾಗಿರುವ ವ್ಯವಸ್ಥೆ ಏನು?

author-image
Gopal Kulkarni
Updated On
ರಾಮನವಮಿ ಆಚರಣೆಗೆ ಸಕಲ ರೀತಿಯಲ್ಲಿ ಸಜ್ಜಾದ ಅಯೋಧ್ಯೆ.. ಬೇಸಿಗೆ ನೀಗಿಸಲು ಭಕ್ತರಿಗೆ ಮಾಡಲಾಗಿರುವ ವ್ಯವಸ್ಥೆ ಏನು?
Advertisment
  • ಶ್ರೀರಾಮನವಮಿಯಂದು ಅಯೋಧ್ಯೆಗೆ ಹರಿದು ಬರಲಿದೆ ಭಕ್ತಸಾಗರ
  • ಭಕ್ತಾದಿಗಳನ್ನು ಬಿಸಿಲಿನಿಂದ ರಕ್ಷಿಸಲು ಆಡಳಿತ ಮಂಡಳಿಯ ಸಿದ್ಧತೆ
  • ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಾಡುತ್ತಿರುವ ವ್ಯವಸ್ಥೆಗಳು ಏನು?

ಅಯೋಧ್ಯ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಈಗಾಗಲೇ ರಾಮನವಮಿ ಉತ್ಸವಕ್ಕೆ ಸಕಲ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ ಅಲ್ಲಿನ ಅಧಿಕಾರಿಗಳು ಹೇಳುವ ಪ್ರಕಾರ ರಾಮನವಮಿ ಉತ್ಸವದ ಶುಭಾರಂಭ ವಸಂತ ನವರಾತ್ರಿಯ ಪ್ರಥಮ ದಿನ ಅಂದ್ರೆ ಶುಕ್ಲ ಪ್ರತಿಪಾದ ಅನುಸಾರ 30ನೇ ಮಾರ್ಚರಂದು ನಡೆಯುತ್ತದೆ. ಆದರೆ ಪರಂಪರರೆಯ ಅನುಸಾರವಾಗಿ ಸಪ್ತಮಿ ಪೂರ್ವದಿಂದ ಆಂಭವಾಗುತ್ತಿದೆ. ಆದರೂ ಕೂಡ ಇಲ್ಲಿ ರಾಮಮಂದಿರದಲ್ಲಿ ರಾಮಲ್ಲಲ್ಲಾ ಪ್ರತಿಷ್ಠಾಪನೆಯ ಮೊದಲೇ ಶುರುವಾಗಿತ್ತು. ಪ್ರಾಣಪ್ರತಿಷ್ಠಾಪನೆಯ ನಂತರ ನಿತ್ಯವೂ ಜಾತ್ರೆಯ ಉತ್ಸವ ನಡೆಯುತ್ತಿರುವ ರೀತಿಯಲ್ಲಿ ಅಯೋಧ್ಯೆಯ ರಾಮಮಂದಿರ ಕಾಣುತ್ತಿದೆ. ಹೀಗಾಗಿ ರಾಮನವಮಿಯ ದಿನ ಇಷ್ಟೇ ಜನ ಬರುತ್ತಾರೆ ಎಂದು ಈಗಲೇ ಅಂದಾಜು ಮಾಡುವುದು ಬೇಗನೇ ಆದಂತೆ ಆಗುತ್ತದೆ ಎಂದು ಹೇಳಿದ್ದಾರೆ.

ಹೀಗಾಗಿಯೇ ಇಂದಿನಿಂದಲೇ ರಾಮನವಮಿ ಉತ್ಸವದ ಆಚರಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಉತ್ತರಭಾರತದಲ್ಲಿ ಸದ್ಯವಿಪರೀತ ಬೇಸಿಗೆಯಿದ್ದು. ಭಕ್ತಾದಿಗಳಿಗೆ ಸಮಸ್ಯೆಯಾಗದಿರಲಿ ಎಂದು ಅವರು ನಡೆದು ಬರುವ ಮಂದಿರದ ಹಾದಿಯಲ್ಲಿ ಈಗಾಗಲೇ ರೆಡ್ ಕಾರ್ಪೆಟ್ ಹಾಕಲು ಶುರು ಮಾಡಿದ್ದೇವೆ.

ಇದನ್ನೂ ಓದಿ: ಏಷ್ಯಾದ ಸರ್ವ ಶ್ರೇಷ್ಠ 50 ರೆಸ್ಟೋರೆಂಟ್​ಗಳ ಪಟ್ಟಿಯಲ್ಲಿ ಭಾರತದ 2 ರೆಸ್ಟೋರೆಂಟ್​ಗಳು ಸೇರ್ಪಡೆ! ಯಾವುವು?

ಸದ್ಯ ಇರುವ ತಾಪಮಾನ ನೋಡಿದರೆ ಇದು ಮುಂದೆ ಇನ್ನೂ ಜಾಸ್ತಿ ಆಗುವ ಸಾಧ್ಯತೆ ಇದೆ. ಇದರಿಂದಾಗಿ ಬರುವ ಭಕ್ತಾದಿಗಳಿಗೆ ಹೀಟ್ ಸ್ಟ್ರೋಕ್ ಆಗುವ ಸಾಧ್ಯತೆಯೂ ಕೂಡ ಇರುತ್ತಾರೆ. ಅದರಿಂದ ಅವರನ್ನು ಪಾರು ಮಾಡಲು ಮೇಲಾವರಣನ್ನು ಸೂರ್ಯನ ಬಿಸಿಲು ಬೀಳದಂತೆ ಪರದೆಯಿಂದ ಕಟ್ಟಲಾಗುವುದು. ಇದಕ್ಕೂ ಮೊದಲು ದೇವಸ್ಥಾನದ ಎಲ್ಲಾ ಕಡೆ ಕಾರ್ಪೆಟ್ ಹಾಕಲಾಗುವುದು. ಇದರೊಂದಿಗೆ ಭಕ್ತಾದಿಗಳಿಗೆ ಸ್ವಚ್ಛ ನೀರು ಸಿಗಲೆಂದು ದರ್ಶನ ಮಾರ್ಗದ ಅನೇಕ ಕಡೆಗಳಲ್ಲಿ ನಲ್ಲಿಗಳ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಭಕ್ತಾದಿಗಳಿಗೆ ಕುಡಿಯುವ ನೀರು ಬೇಗ ಸಿಗುವಂತಾಗುತ್ತದೆ. ಇನ್ನು ಭಕ್ತಾದಿಗಳು ಬೇಸಿಗೆ ಬೇಗೆಯಿಂದಾಗಿ ಸೆಕೆಯಿಂದ ಬಳಲಬಾರದು ಎಂದು ಭಕ್ತರು ಬರುವ ಮಾರ್ಗಗಳಲ್ಲಿ ಅನೇಕ ಕೂಲರ್​ಗಳನ್ನು ಅಳವಡಿಸುವ ಕಾರ್ಯ ಈಗಾಗಲೇ ಶುರು ಮಾಡಿಕೊಂಡಿದ್ದೇವೆ ಎಂದು ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್‌.. ಕಾಶ್ಮೀರಕ್ಕೆ ನೇರ ರೈಲು ಮಾರ್ಗ ಉದ್ಘಾಟನೆ ಯಾವಾಗ; ಏನಿದರ ವಿಶೇಷತೆಗಳು?

ಈಗಾಗಲೇ ವಿಪರೀತ ಬಿಸಿಲಿನ ಕಾರಣದಿಂದಾಗಿ ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಏಪ್ರಿಲ್ ತಿಂಗಳಲ್ಲಿ ಬಿಸಿಲು ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ತಾಪಮಾನ ಹೆಚ್ಚುವುದರಿಂದ ಬಿಸಿಗಾಳಿ ಬೀಸುತ್ತದೆ. ಹೀಗಾಗಿ ಹಲವು ಆರೋಗ್ಯ ಸಮಸ್ಯೆಗಳು ಬರುತ್ತವೆ. ಹೀಗಾಗಿ ಭಕ್ತಾದಿಗಳಿಗೆ ಈ ಸಮಸ್ಯೆ ಆಗದಿರುವಂತೆ ಕೋಲ್ಡ್​ ರೂಮ್​​ಗಳ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ. ಹಿಂದಿನ ಬಾರಿಯೂ ಕೂಡ ಇದರ ವ್ಯವಸ್ಥೆಯನ್ನು ಮಾಡಲಾಗಿತ್ತು. ಆಗ ಇದನ್ನು ಹೀಟ್​​ವೇವ್​ ಟ್ರೀಟ್ಮೆಂಟ್ ಎಂದು ಕರೆಯುತ್ತಿದ್ದರು ಈಗ ಕೋಲ್ಡ್​ ರೂಮ್ ಎಂದು ಕರೆಯಲಾಗುತ್ತಿದೆ. ಕೋಲ್ಡ್​ ರೂಮ್​ನಲ್ಲಿ ಎಂಟು ಬೆಡ್​ಗಳು ಹಾಗೂ ಎರಡು ಎಸಿ ಮತ್ತು ನಾಲ್ಕು ಫ್ಯಾನ್​ಗಳ ವ್ಯವಸ್ಥೆಗಳಿರುತ್ತದೆ. ಇವೆಲ್ಲವನ್ನೂ ಕೂಡ ಜಿಲ್ಲಾಸ್ಪತ್ರೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ತೆಗೆದುಕೊಂಡ ನಿರ್ಧಾರಗಳಾಗಿವೆ ಎಂದು ಆಡಳಿತ ಮಂಡಳಿ ಹೇಳಿದೆ

ಅಂದಹಾಗೆ ಈ ಬಾರಿ ಶ್ರೀರಾಮನವಮಿಯ ಉತ್ಸವವನ್ನು ಏಪ್ರಿಲ್ 6 ರಂದು ಆಚರಣೆ ಮಾಡಲಾಗುತ್ತದೆ. ಅಂದು ಅಯೋಧ್ಯೆಗೆ ಭಕ್ತಸಾಗರವೇ ಹರಿದು ಬರುವ ನಿರೀಕ್ಷೆಯಿದೆ ಹೀಗಾಗಿ ಅವರಿಗೆ ಯಾವುದೇ ರೀತಿಯಲ್ಲಿ ಸಮಸ್ಯೆಗಳು ಉಂಟಾಗದಂತೆ ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment