newsfirstkannada.com

ರಾಮನೂರಿನಲ್ಲಿ ಮೊಳಗಲಿದೆ ಕನ್ನಡಿಗನ ಹಾಡು.. ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಬರೆದವರು ಯಾರು?

Share :

Published January 13, 2024 at 10:52am

  ಕನ್ನಡದ ಹಾಡನ್ನು ಸಮಾರಂಭದ ದಿನ ಪ್ಲೇ ಮಾಡುತ್ತಾ ರಾಮನ ಟ್ರಸ್ಟ್​?

  ಜನವರಿ 22 ರಂದು ಸಮಾರಂಭ ಹಿನ್ನೆಲೆಯಲ್ಲಿ ಹೆಚ್ಚಿದ ಪೊಲೀಸ್ ಭದ್ರತೆ

  ಈ ಬಗ್ಗೆ ಎಕ್ಸ್​ ಮೂಲಕ ಮಾಹಿತಿ ನೀಡಿರುವ ರಾಮ ಮಂದಿರದ ಟ್ರಸ್ಟ್..!

ಬೆಂಗಳೂರು: ಸುಂದರವಾಗಿ ನಿರ್ಮಾಣವಾಗುತ್ತಿರುವ ಅಯೋಧ್ಯೆಯ ರಾಮಮಂದಿರ ನಿತ್ಯ ಒಂದಿಲ್ಲ, ಒಂದು ಹೊಸ ವಿಷಯದಿಂದ ಸುದ್ದಿಯಾಗುತ್ತಿದೆ. ಬಂಗಾರದ ಬಾಗಿಲುಗಳು, ದೇಶದಲ್ಲೇ ಅತ್ಯಂತ ದೊಡ್ಡ ಘಂಟೆ, 22 ಭಾಷೆಗಳಲ್ಲಿ ಸೂಚನ ಫಲಕ ಅಳವಡಿಸುವಂಥ ಕಾರ್ಯಗಳು ನಡೆಯುತ್ತಿವೆ. ಈ ಎಲ್ಲದರ ಮಧ್ಯೆ ರಾಮನೂರಿನಲ್ಲಿ ಕನ್ನಡದ ಹಾಡಿನ ಕಲರವ ಮೊಳಗಲಿದೆ.

ಜನವರಿ 22 ರಂದು ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಇಡೀ ದೇಶವೇ ಎದುರು ನೋಡುತ್ತಿದೆ. ಕನ್ನಡಿಗರು ಹೆಮ್ಮೆ ಪಡುವಂತ ಸಂಗತಿ ಅಯೋಧ್ಯೆಯ ಮಂದಿರ ಟ್ರಸ್ಟ್ ಎಕ್ಸ್ ಮೂಲಕ ಮಾಹಿತಿ ನೀಡಿದೆ. ಅಯೋಧ್ಯೆಯಲ್ಲಿ ‘ಇನ್ನಷ್ಟು ಬೇಕೆನ್ನ ಹೃಯದಕ್ಕೆ ರಾಮ’ ಈ ಹಾಡು ಪ್ಲೇ ಆಗಲಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಗೀತೆ ರಚನಾಕಾರ ಗಜಾನನ ಶರ್ಮಾ ಫುಲ್ ಸಂತಸ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ನ್ಯೂಸ್ ಫಸ್ಟ್ ಜೊತೆ ಗಜಾನನ ಶರ್ಮಾ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಈ ಸುದ್ದಿ ಕೇಳಿ ನನ್ನ ಆನಂದಕ್ಕೆ ಪಾರವೇ ಇಲ್ಲದಂತೆ ಆಗಿದೆ. ರಾಮಚಂದ್ರಪುರ ಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಮಾತಿನಿಂದ ಈ ಗೀತೆ ಬರೆಯಲಾಯಿತು. ರಾಮಮಂದಿರ ಉದ್ಘಾಟನಾ ದಿನ ಪ್ಲೇ ಮಾಡುತ್ತಾರೋ, ಇಲ್ವೋ ಗೊತ್ತಿಲ್ಲ. ಅಯೋಧ್ಯೆಯಲ್ಲಿ ಹಾಡು ಮೊಳಗುತ್ತಿರುವುದು ತುಂಬಾ ಖುಷಿ ಸಂಗತಿ ಎಂದು ಹೇಳಿದ್ದಾರೆ.

ಗಜಾನನ ಶರ್ಮಾ ಅವರು ಮೂಲತಹ ಉತ್ತರ ಕರ್ನಾಟಕದವರಾದರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಲ್ಲಿ ಇವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಲ್ಲಿ ಅಧೀಕ್ಷಕ ಇಂಜಿನಿಯರ್ ಆಗಿದ್ದಾರೆ. ಇವರು ಸಾಹಿತಿನೂ ಹೌದು, ನಟರೂ ಹೌದು, ನಾಟಕಕಾರರೂ ಆಗಿದ್ದಾರೆ. ಇಷ್ಟೆಲ್ಲ ಹಾಗಿರೋ ಇವರು ಇನ್ನಷ್ಟು ಬೇಕೆನ್ನ ರಾಮ ಹಾಡನ್ನ ರಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮನೂರಿನಲ್ಲಿ ಮೊಳಗಲಿದೆ ಕನ್ನಡಿಗನ ಹಾಡು.. ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಬರೆದವರು ಯಾರು?

https://newsfirstlive.com/wp-content/uploads/2024/01/GAJANANA_SHARMA.jpg

Load More