newsfirstkannada.com

ಉದ್ಘಾಟನೆಯಾದ ಮರುದಿನವೇ ಅಯೋಧ್ಯೆಗೆ ಬಂದಿದ್ನಂತೆ ರಾಮನ ಭಂಟ; ಸಂಜೆ 5.50ಕ್ಕೆ ನಡೀತು ಪವಾಡ ಎಂದ ಟ್ರಸ್ಟ್

Share :

Published January 25, 2024 at 7:18am

    ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ನಿಂದ ಮಾಹಿತಿ

    ದಕ್ಷಿಣ ದ್ವಾರದ ಮೂಲಕ ಗರ್ಭಗುಡಿ ಪ್ರವೇಶ ಆಗಿದ್ಯಂತೆ

    ಬಾಲರಾಮನ ದರ್ಶನ ಪಡೆದನಾ ಹನುಮಂತಾ?

ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಬಳಿಕ ಅಯೋಧ್ಯೆಯಲ್ಲಿ ವಿಸ್ಮಯಕಾರಿ ಘಟನೆಯೊಂದು ನಡೆದಿರುವುದಾಗಿ ಶ್ರೀರಾಮಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

ಪ್ರಾಣಪ್ರತಿಷ್ಠಾಪನೆಯ ಮಾರನೇ ದಿನ ಸಂಜೆ 5.50 ರ ಸುಮಾರಿಗೆ ಕೋತಿಯೊಂದು ದಕ್ಷಿಣ ದ್ವಾರದ ಮೂಲಕ ಗರ್ಭಗುಡಿಯನ್ನು ಪ್ರವೇಶಿಸಿದೆ. ಒಳಹೋಗುತ್ತಿದ್ದಂತೆ ಬಾಲರಾಮನ ಉತ್ಸವ ಮೂರ್ತಿಯ ಬಳಿ ಹೋಗಿದೆ. ಇದರಿಂದ ಆತಂಕಗೊಂಡ ಭದ್ರತಾ ಸಿಬ್ಬಂದಿಯು, ಕೋತಿಯು ವಿಗ್ರಹವನ್ನು ನೆಲಕ್ಕೆ ಬೀಳಿಸಬಹುದೆಂಬ ಭಯದಿಂದ ಮಂಗನತ್ತ ಓಡಿದ್ದಾರೆ.

ನಂತರ ಅದು ಏನು ಮಾಡದೇ ಶಾಂತವಾಗಿ ಉತ್ತರ ದ್ವಾರದಿಂದ ಹೊರನಡೆದಿದೆ. ಘಟನೆಯನ್ನು ಬಾಲರಾಮನ ದರ್ಶನಕ್ಕಾಗಿ ಭಗವಾನ್ ಹನುಮಂತನು ಬಂದಿದ್ದಾನೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉದ್ಘಾಟನೆಯಾದ ಮರುದಿನವೇ ಅಯೋಧ್ಯೆಗೆ ಬಂದಿದ್ನಂತೆ ರಾಮನ ಭಂಟ; ಸಂಜೆ 5.50ಕ್ಕೆ ನಡೀತು ಪವಾಡ ಎಂದ ಟ್ರಸ್ಟ್

https://newsfirstlive.com/wp-content/uploads/2024/01/Ramalala-PM-modi.jpg

Load More