newsfirstkannada.com

ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯ ಅದ್ಧೂರಿ ಮೆರವಣಿಗೆ.. ರಾಮನ ಕಣ್ಣುಗಳಿಗೆ ಬಟ್ಟೆ ಏಕೆ ಕಟ್ಟಿರ್ತಾರೆ?

Share :

Published January 17, 2024 at 9:18am

Update January 17, 2024 at 9:24am

  ರಾಮಮಂದಿರದ ಕಾಂಪ್ಲೆಕ್ಸ್​ನ‌ 70 ಎಕರೆ ಜಾಗದಲ್ಲಿ ಮೆರವಣಿಗೆ

  ಯಜಮಾನ ಪ್ರಾಯಶ್ಚಿತ ಪೂಜೆ ನೆರವೇರಿಸಲಿದ್ದಾರೆ PM ಮೋದಿ

  ಗಣೇಶ್ವರ ಶಾಸ್ತ್ರಿ‌ದ್ರಾವಿಡ್ ಸೇರಿ ವಿವಿಧ ಪೂಜಾ ವಿಧಿವಿಧಾನ

ಅಯೋಧ್ಯೆ: ರಾಮ ಮಂದಿರದ ಕಾಂಪ್ಲೆಕ್ಸ್​ನ‌ 70 ಎಕರೆ ಜಾಗದಲ್ಲಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ಮೂರ್ತಿಯ ಮೆರವಣಿಗೆ ಇಂದು ಮಾಡಲಾಗುತ್ತದೆ. ಆದರೆ ರಾಮನ ಮೂರ್ತಿಯ ಕಣ್ಣು‌ ತೆಗೆಯುವ ಶಾಸ್ತ್ರ ನಡೆಯದ ಕಾರಣ ಕಣ್ಣಿಗೆ ಬಟ್ಟೆ ಕಟ್ಟಿ ಮೆರವಣಿಗೆ ಮಾಡಿ ಬಳಿಕ ಮಂದಿರದ ಒಳಗೆ ತೆಗೆದುಕೊಂಡು ಹೋಗುತ್ತಾರೆ ಎಂದು ಹೇಳಲಾಗಿದೆ.

ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಆಗಲಿರುವ ಮೂರ್ತಿಯ ದರ್ಶನ ಭಕ್ತರಿಗೆ ಇಂದೇ ಆಗಲಿದೆ. ಸದ್ಯ ಮೂರ್ತಿಯ ಕಣ್ಣು‌ ತೆಗೆಯುವ ಶಾಸ್ತ್ರ ನಡೆಯದಿದ್ದಕ್ಕೆ ಕಣ್ಣಿಗೆ ಬಟ್ಟೆ ಕಟ್ಟಿ ಮೆರವಣಿಗೆ ಮಾಡಲಾಗುತ್ತದೆ. ಮೊದಲು ಅಯೋಧ್ಯೆಯ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲು ಪ್ಲಾನ್ ಮಾಡಲಾಗಿತ್ತು. ಆದರೆ ಭದ್ರತೆ ಕಾರಣದಿಂದ ಮಂದಿರದ ಕಾಂಪ್ಲೆಕ್ಸ್​ನಲ್ಲಿ ಮಾತ್ರ ಮೆರವಣಿಗೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ಬಳಿಕ ರಾಮಮಂದಿರದ ಮಂದಿರದ ಒಳಗೆ ಮೂರ್ತಿ ಇಡಲಿದ್ದಾರೆ. ಜನವರಿ 22 ರಂದು ಮೂರ್ತಿಯ ಪ್ರಾಣ ಪ್ರತಿಷ್ಠೆ ಅಧಿಕೃತವಾಗಿ ನಡೆಯಲಿದೆ. ಇಂದು ಯಜಮಾನ ಪ್ರಾಯಶ್ಚಿತ ಪೂಜೆ ಇರುತ್ತದೆ. ಇದರ ಜೊತೆಗೆ ಭಕ್ತರು ಮಂಗಳ ಕಳಸದಲ್ಲಿ ಸರಯೂ ನದಿ ನೀರು ತಂದು ಮಂದಿರವನ್ನ ತಲುಪಲಿದ್ದಾರೆ. 121 ಅರ್ಚಕರ ತಂಡದಿಂದ ಧಾರ್ಮಿಕ ವಿಧಿ ವಿಧಾನ ಪ್ರಕ್ರಿಯೆ ನೆರವೇರಲಿದ್ದು ಪ್ರಧಾನಿ ಮೋದಿಯವರು ಮುಖ್ಯ ಯಜಮಾನನಾಗಿ ಪೂಜೆ ಸಲ್ಲಿಸಲಿದ್ದಾರೆ. ಈ ಬಗ್ಗೆ ಕಾಶಿಯ ಲಕ್ಷ್ಮಿಕಾಂತ್ ದೀಕ್ಷಿತ್​ರಿಂದ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಅಯೋಧ್ಯೆಯ ರಾಮಮಂದಿರದಲ್ಲಿ ಕರ್ಮಕುಟಿಯ ತಪಸ್ಸು, ಪೂಜೆಗಳು ನಡೆಯಲಿವೆ. ಇಂದಿನಿಂದ ಜ.22 ರವರೆಗೆ ಗಣೇಶ್ವರ ಶಾಸ್ತ್ರಿ‌ದ್ರಾವಿಡ್ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನ ಲಕ್ಷ್ಮಿಕಾಂತ್ ದೀಕ್ಷಿತ್ ನೇತೃತ್ವದಲ್ಲಿ ನರವೇರುತ್ತವೆ. ವೈದಿಕ ತಂಡದಿಂದ ಪೂಜಾ ವಿಧಿ ವಿಧಾನಗಳು ಮಂದಿರಲ್ಲಿ ಜರುಗಲಿವೆ. ಇಂದು ಪ್ರಾಯಶ್ಚಿತ ಪ್ರಾರ್ಥನೆ, ವಿಷ್ಣು ಪೂಜೆ, ಗೋದಾನ ಮಾಡಲಾಗುತ್ತೆ. ಬಳಿಕ ಮೂರ್ತಿಯನ್ನು ಶುದ್ಧಗೊಳಿಸಿ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗುತ್ತದೆ ಎಂದು ಅಯೋಧ್ಯೆಯಲ್ಲಿ ಲಕ್ಷ್ಮಿಕಾಂತ್ ದೀಕ್ಷಿತ್ ಹೇಳಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿಯ ಅದ್ಧೂರಿ ಮೆರವಣಿಗೆ.. ರಾಮನ ಕಣ್ಣುಗಳಿಗೆ ಬಟ್ಟೆ ಏಕೆ ಕಟ್ಟಿರ್ತಾರೆ?

https://newsfirstlive.com/wp-content/uploads/2024/01/rama.jpg

Load More