ತನ್ನ ಅದ್ಭುತ ಗಾಯನದ ಮೂಲಕ ಜನಮನ್ನಣೆ ಪಡೆದಿರುವ ನಟಿ
ಬೆಂಗಳೂರಿಗೆ ಬರುವಷ್ಟರಲ್ಲಿ ವಿಡಿಯೋ 5 ಮಿಲಿಯನ್ ವೀವ್ಸ್
ಡ್ಯಾನ್ಸ್ ಮಾಡಿದ ಜಾಗ ಅಶ್ವತ್ಪುರ, ಅದಕ್ಕೆ ರಾಮನಿಗೆ ಥ್ಯಾಂಕ್ಸ್
ಆಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ಇನ್ನು ಬೆರಳೆಣಿಕೆ ದಿನ ಮಾತ್ರ ಇವೆ. ರಾಮನನ್ನ ಕಣ್ತುಂಬಿಕೊಳ್ಳಲು ಕೋಟ್ಯಾಂತರ ಭಕ್ತರು ಕಾತುರರಾಗಿದ್ದಾರೆ. ಇಂತಹ ಹೊತ್ತಲ್ಲಿ ನಮ್ಮನೆ ಯುವರಾಣಿ ಖ್ಯಾತಿಯ ಸೀರಿಯಲ್ ನಟಿ ಅಂಕಿತಾ ಅಮರ್ ಅವರಿಗೆ ಅಯೋಧ್ಯೆಗೆ ಹೋಗೋಕೆ ಅದೃಷ್ಟದ ಆಮಂತ್ರಣ ಸಿಕ್ಕಿದೆ. ಅದಕ್ಕೆ ಕಾರಣ ಆಗಿದ್ದು ಅದೊಂದು ನೃತ್ಯ.
ಅಂಕಿತಾ ಅಮರ್ ಅವರ ಮುಖ ಪರಿಚಯ ಬಹುಷಃ ಕನ್ನಡಿಗರಿಗೆಲ್ಲರಿಗೂ ಇದ್ದೇ ಇದೆ. ನಮ್ಮನೆ ಯುವರಾಣಿ ಖ್ಯಾತಿಯ ಸೀರಿಯಲ್ ನಟಿ ಅಂಕಿತಾ ಅಮರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇಷ್ಟೇ ಅಲ್ಲ ಆಗಾಗ ತನ್ನ ಅದ್ಭುತ ಗಾಯನದ ಮೂಲಕ ಜನಮನ್ನಣೆ ಪಡೆದವ್ರು ಈಕೆ. ಈಗ ಮತ್ತೊಂದು ಅದೃಷ್ಟ ಈಕೆಯ ಪಾಲಾಗಿದ್ದು, ಅಯೋಧ್ಯೆಯತ್ತ ಹೆಜ್ಜೆ ಹಾಕಲಿದ್ದಾರೆ ಅಂಕಿತಾ ಅಮರ್.
ಜನವರಿ 22ನೇ ತಾರೀನಂದು ರಾಮ ಮಂದಿರ ಉದ್ಘಾಟನೆಗೆ ನಾಡಿನ ನಾನಾ ಕಲಾವಿದರು ಗಣ್ಯಮಾನ್ಯರಿಗೆ ಆಹ್ವಾನ ಬಂದಿದೆ. ಅದ್ರಂತೆ ಅಂಕಿತಾ ಅಮರ್ ಅವರಿಗೂ ಅಯೋಧ್ಯೆ ರಾಮ ಮಂದಿರ ಟ್ರಸ್ಟ್‌ನಿಂದ ಆಮಂತ್ರಣ ಬಂದಿದೆ. ಅದಕ್ಕೆ ಕಾರಣವಾಗಿದ್ದು ಅವ್ರು ಮಾಡಿದ್ದ ಸಂಕೀರ್ತನಾ ಯಾತ್ರೆ.
ಅಂಕಿತಾ ಅಮರ್ ಅವರ ಈ ನಗರ ಸಂಕೀರ್ತನೆ, ಸೋಶಿಯಮ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿತ್ತು. ಇದೇ ನಗರ ಸಂಕೀರ್ತನ ಯಾತ್ರೆ ಈಗ ಅಯೋಧ್ಯೆ ರಾಮಮಂದಿರದ ಆಹ್ವಾನವನ್ನ ಅಂಕಿತಾಗೆ ತಂದುಕೊಟ್ಟಿದೆ.
ರಾಮನ ಮೇಲೆ ತುಂಬಾ ನಂಬಿಕೆ ಇದೆ. ಇಲ್ಲೇ ಕರ್ನಾಟಕದಲ್ಲಿ ಅಶ್ವತ್ಪುರ ಎಂಬ ಜಾಗ ಇದೆ. ಆ ಜಾಗದಲ್ಲಿರುವ ಶ್ರೀ ರಾಮ ತುಂಬಾ ಪ್ರಭಾವ ಬೀರುತ್ತಾನೆ. ಅಶ್ವತ್ಪುರದಲ್ಲಿ ಸಂಕೀರ್ತನೆ ಮಾಡಿ ಬೆಂಗಳೂರಿಗೆ ಬರುವಷ್ಟರಲ್ಲಿ ನಮ್ಮ ವಿಡಿಯೋ 5 ಮಿಲಿಯನ್ ವೀವ್ ಆಗಿತ್ತು. ನಾವು ಡ್ಯಾನ್ಸ್ ಮಾಡಿದಂತ ಜಾಗ ಅಶ್ವತ್ಪುರ. ಅದಕ್ಕೆ ರಾಮನಿಗೆ ಥ್ಯಾಂಕ್ಸ್. ನಮ್ಮ ಕ್ಲಾಸಿಗೆಲ್ಲ ಒಳ್ಳೆಯದೆ ಆಗಿದೆ.
ಅಂಕಿತಾ ಅಮರ್, ನಟಿ
ನಟಿ ಅಂಕಿತಾ ಮಾಡಿದ್ದ ನಗರ ಸಂಕೀರ್ತನೆ ನೋಡಿದ ರಾಮ ಮಂದಿರ ಟ್ರಸ್ಟ್, ಅಯೋಧ್ಯೆಯಲ್ಲಿ ರಾಮಮಂದಿರದ ಸುತ್ತಾ ಸಂಕೀರ್ತನೆ ಮಾಡುವ ಅವಕಾಶವನ್ನ ಅಂಕಿತಾಗೆ ನೀಡಿ ಆಹ್ವಾನಿಸಿದೆ. ಅಂಕಿತಾಗೆ ಇದಕ್ಕಿಂತ ಖುಷಿಯ ಸುದ್ದಿ ಇನ್ನೇನಿದೆ ಹೇಳಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ