newsfirstkannada.com

ರಾಮ ಮಂದಿರಕ್ಕೆ ಮೊದಲು ದಲಿತರನ್ನ ಬಿಡಿ, ದಲಿತ ಅರ್ಚಕರನ್ನು ನೇಮಿಸಿ- ಸಚಿವ ಕೆ.ಎನ್.ರಾಜಣ್ಣ ಆಗ್ರಹ

Share :

Published January 13, 2024 at 1:48pm

Update January 13, 2024 at 1:49pm

    ಅಯೋಧ್ಯೆಯಲ್ಲಿ ಜ.22ರಂದು ರಾಮಮಂದಿರ ಲೋಕಾರ್ಪಣೆ

    ಹಿಂದೂಗಳನ್ನು ಬಿಜೆಪಿಯವರು ಗುತ್ತಿಗೆ ತೆಗೆದುಕೊಂಡಿದ್ದಾರಾ?

    ರಾಮಮಂದಿರಕ್ಕೆ ಒಬ್ಬ ದಲಿತ ಅರ್ಚಕರನ್ನು ನೇಮಿಸಲು ಹೇಳಿ

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೆ ಇನ್ನೇನು ಕೆಲವೇ ದಿನಗಳು ಉಳಿದಿದ್ದು ಇದರ ಬೆನ್ನಲ್ಲೇ ರಾಮಮಂದಿರಕ್ಕೆ ಮೊದಲು ದಲಿತರನ್ನು ಬಿಟ್ಟುಕೊಂಡು, ದಲಿತ ಅರ್ಚಕರನ್ನು ನೇಮಿಸಿ ಎಂದು ಸಹಕಾರ ಸಚಿವ ರಾಜಣ್ಣ ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಹಕಾರ ಸಚಿವ ರಾಜಣ್ಣ.. ರಾಮಮಂದಿರ ಲೋಕಾರ್ಪಣೆಯಾದ ಮೇಲೆ ರಾಮಮಂದಿರಕ್ಕೆ ಹೋಗುತ್ತೇವೆ ಎಂದು ಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿರುವ ರಾಜಣ್ಣ ಬಿಜೆಪಿಗರು ಹಿಂದೂಗಳನ್ನು ಗುತ್ತಿಗೆ ತೆಗೆದುಕೊಂಡಿದ್ದಾರಾ, ಜಾಗೀರು ಕೊಡಲಾಗಿದೆಯಾ ಎಂದು ಪ್ರಶ್ನಿಸಿದ್ದಾರೆ.

ವೋಟಿಗಾಗಿ ಪದೇಪದೆ ಹಿಂದೂ ಹಿಂದೂ ಎಂದು ಬಿಜೆಪಿ ಹೇಳುತ್ತಿದೆ. ಡಾ.ಬಿ.ಆರ್​ ಅಂಬೇಡ್ಕರ್ ಅವರು ಹಿಂದೂವಾಗಿ ಸಾಯುವುದಿಲ್ಲ ಎಂದಿದ್ದೇಕೆ? ಈ ರೀತಿಯಾಗಿ ಹಿಂದೂಗಳು ತಮ್ಮ ಸ್ವಾರ್ಥಕ್ಕೆ ಎಲ್ಲ ಬಳಕೆ ಮಾಡಿಕೊಳ್ತಾರೆ ಎಂದು. ರಾಮಮಂದಿರಕ್ಕೆ ಮೊದಲು ದಲಿತರನ್ನು ಬಿಡಿ, ಅಲ್ಲಿ ಒಬ್ಬ ದಲಿತ ಅರ್ಚಕನನ್ನು ನೇಮಿಸಲು ಹೇಳಿ. ದಲಿತರು ಹಿಂದೂಗಳಿಗೆ ಏನು ಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದರು.

ಇದೇ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ನಾನು, ಹೆಚ್​.ಸಿಮಹದೇವಪ್ಪ, ಈಶ್ವರ್ ಖಂಡ್ರೆ ಸೇರಿ ಐವರು ಸಚಿವರು ಸೇರಿ ಭೇಟಿಯಾಗಿದ್ದೇವೆ. ಲೋಕಸಭಾ ಎಲೆಕ್ಷನ್​ ಕುರಿತು ನಮ್ಮೆಲ್ಲಿ ಉತ್ಸಾಹ ಇನ್ನಷ್ಟು ಇಮ್ಮಡಿಗೊಂಡಿದ್ದು ಹೆಚ್ಚು ಸ್ಥಾನಗಳನ್ನು ನಾವು ಗೆಲ್ಲಬೇಕಿದೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮ ಮಂದಿರಕ್ಕೆ ಮೊದಲು ದಲಿತರನ್ನ ಬಿಡಿ, ದಲಿತ ಅರ್ಚಕರನ್ನು ನೇಮಿಸಿ- ಸಚಿವ ಕೆ.ಎನ್.ರಾಜಣ್ಣ ಆಗ್ರಹ

https://newsfirstlive.com/wp-content/uploads/2024/01/KN_RAJANNA.jpg

Load More