newsfirstkannada.com

ಕಬ್ಬಿಣ ಅಲ್ಲವೇ ಅಲ್ಲ.. ರಾಮ ಮಂದಿರಕ್ಕೆ ಬಳಸಿದ್ದು ಕರ್ನಾಟಕದ ಗ್ರೆನೈಟ್‌ ಕಲ್ಲು; ಕಾರಣವೇನು?

Share :

Published January 18, 2024 at 9:19pm

  ಅಯೋಧ್ಯೆ ಮಂದಿರಕ್ಕಾಗಿ ವಿಶ್ವದ ಶ್ರೇಷ್ಠ ತಂತ್ರಜ್ಞರಿಂದ ಸತತ ಶ್ರಮ!

  ರಾಮಮಂದಿರ ನೋಡೋದಕ್ಕೆ ಎರಡು ಕಣ್ಣುಗಳೂ ಸಾಕಾಗೋದಿಲ್ಲ

  ಸುಮಾರು 3,500 ಮಂದಿ ದೇಗುಲ ತಲೆ ಎತ್ತುವುದಕ್ಕೆ ಶ್ರಮಪಟ್ಟಿದ್ದಾರೆ

ಅಯೋಧ್ಯೆಯ ರಾಮಮಂದಿರದ ಹಿಂದೆ ರಾಜಕಾರಣವಿಲ್ಲ. ಜಾತಿ-ಮತದ ಮೀಸಲು ವ್ಯಾಪ್ತಿಯಿಲ್ಲ. ಅದು ಬರೀ ದೇವಮಂದಿರ ಅನ್ನೋದಕ್ಕಿಂತ, ರಾಷ್ಟ್ರೀಯ ಮಂದಿರ ಅನ್ನೋ ಭಾವನೆ ಸೃಷ್ಟಿ ಮಾಡ್ತಿದೆ. ಈ ಐತಿಹಾಸಿಕ ಪುಣ್ಯಸ್ಥಳಕ್ಕಾಗಿ ವಿಶ್ವಶ್ರೇಷ್ಠ ತಂತ್ರಜ್ಞರು ಹಗಲು ರಾತ್ರಿ ಎನ್ನದೇ ಕಾರ್ಯ ನಿರ್ವಹಿಸಿದ್ದಾರೆ. ಪ್ರಾಚೀನ ಪರಂಪರೆ ಆಧುನಿಕ ವಿಜ್ಞಾನದ ಸಮ್ಮಿಲನವಿದೆ. ಅಷ್ಟಕ್ಕೂ, ರಾಮಮಂದಿರದ ಮತ್ತಷ್ಟು ವಿಶೇಷತೆಗಳೇನು?.

ಸಿಂಗಾರಗೊಂಡಿರೋ, ಜಗಮಗಿಸ್ತಿರೋ ಅಯೋಧ್ಯೆಯನ್ನ ನೋಡ್ತಾ ಇದ್ರೆ, ಒಮ್ಮೆಯಾದ್ರೂ ರಾಮನ ಜನ್ಮಸ್ಥಳಕ್ಕೆ ಹೋಗ್ಬೇಕು, ರಾಮನ ದರ್ಶನ ಪಡೀಬೇಕು ಅನ್ನೋ ಮನೋಭಾವ ಎಲ್ಲರಲ್ಲೂ ಮೂಡೋದ್ರಲ್ಲಿ ಅನುಮಾನವಿಲ್ಲ.. ಅಲ್ಲಿರೋ ಭಕ್ತಪಥ, ರಾಮಪಥದಲ್ಲಿ ಸಂಚಾರ ಮಾಡೋ ಆಸೆ ಚಿಮ್ಮುತ್ತೆ. ರಾಮಾಯಣದಲ್ಲಿ ಕೇಳಿರೋ ಅಯೋಧ್ಯೆಗೂ ಈಗ ಝಗಮಗಿಸ್ತಿರೋ ಅಯೋಧ್ಯೆಗೂ ಹೋಲಿಕೆ ಇದೆಯಾ ಅನ್ನೋ ಭಾವನೆ ಉಕ್ಕುತ್ತೆ. ಯಾಕಂದ್ರೆ, ರಾಮಜನ್ಮ ಭೂಮಿಯಲ್ಲಿ ದೇವಾಲಯ ಅಷ್ಟೊಂದು ಅದ್ಭುತವಾಗಿ, ಸುಂದರವಾಗಿ ಮೂಡಿ ಬಂದಿದೆ. ಇಲ್ಲಿ ನಿರ್ಮಾಣವಾಗಿರೋ ಏರ್ಪೋಟ್‌, ವಿಮಾನ ನಿಲ್ದಾಣ, ಅಭಿವೃದ್ಧಿಗೊಂಡಿರೋ ರಸ್ತೆಗಳು ಇವೆಲ್ಲವೂ ರಾಮನೂರಿಗೆ ಕೈಬೀಸಿ ಕರೆಯುವಂತಿವೆ.

ಪ್ರಾಚೀನ ಪರಂಪರೆ, ಆಧುನಿಕ ವಿಜ್ಞಾನದ ಸಮ್ಮಿಲನ!

ಸದ್ಯ, ಅಯೋಧ್ಯೆಯ ರಾಮಮಂದಿರವನ್ನ ನೋಡೋದಕ್ಕೆ ಎರಡು ಕಣ್ಣುಗಳೂ ಸಾಕಾಗೋದಿಲ್ಲ.. ಯಾಕಂದ್ರೆ, ರಾಮ ಮಂದಿರ ವಿಶ್ವದಲ್ಲಿ ಯಾವುದೇ ಹಿಂದೂ ಮಂದಿರವೂ ನಿರ್ಮಾಣವಾಗದ ರೀತಿಯಲ್ಲಿ ವಿಶೇಷವಾಗಿ ನಿರ್ಮಾಣವಾಗಿರೋದೇ ಇದಕ್ಕೆ ಕಾರಣ. 2020 ಆಗಸ್ಟ್‌ 5 ರಂದು ಅಡಿಪಾಯ ಹಾಕಿದ್ಮೇಲೆ ಪ್ರತಿ ನಿತ್ಯ ಏನಿಲ್ಲ ಅಂದರೂ ಸುಮಾರು 3,500 ಮಂದಿ ದೇಗುಲ ತಲೆ ಎತ್ತುವುದಕ್ಕಾಗಿ ಶ್ರಮಪಟ್ಟಿದ್ದಾರೆ. ಇವರ ಜೊತೆ ಐಐಟಿಯಂತಹ ಶ್ರೇಷ್ಠ ಕಾಲೇಜುಗಳಲ್ಲಿ ಅಧ್ಯಯನ ಮಾಡಿರೋ ಇಂಜಿನಿಯರ್‌ಗಳೂ ಕಾರ್ಯನಿರ್ವಹಣೆ ಮಾಡಿದ್ದಾರೆ. ಅದೆಷ್ಟೋ ಇಂಜಿನಿಯರ್‌ಗಳು ಒಂದೇ ಒಂದು ರೂಪಾಯಿ ಸಂಬಳ ಪಡೆಯದೇ ಶ್ರೀರಾಮ ಮಂದಿರಕ್ಕೆ ಅಳಿಲು ಸೇವೆ ಸಲ್ಲಿಸಿದ್ದಾರೆ. ಇನ್ನು ದೇಶದಲ್ಲಿ ಸುಮಾರು 11ರಿಂದ 12 ಕೋಟಿ ಮಂದಿ ದೇಣಿಗೆ ಕೊಟ್ಟಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಜನ ದೇಣಿಗೆ ನೀಡಿದ್ದು ರಾಮಮಂದಿರಕ್ಕೆ ಮಾತ್ರ ಅಂದ್ರೆ ಖಂಡಿತ ತಪ್ಪಾಗೋದಿಲ್ಲ.

ವಿಜ್ಞಾನ ತಂತ್ರಜ್ಞಾನದ ವಿಚಾರಕ್ಕೆ ಬರುವುದಾದ್ರೆ, ಇಲ್ಲಿ ಪ್ರಾಚೀನ ಪರಂಪರೆ, ಆಧುನಿಕ ವಿಜ್ಞಾನದ ಸಮ್ಮಿಲನವಿದೆ. ಅಂದ್ರೆ, ಹಿಂದಿನ ಕಾಲದಲ್ಲಿ ದೇವಸ್ಥಾನ ನಿರ್ಮಾಣದಲ್ಲಿ ಯಾವ ರೀತಿಯ ತಂತ್ರಗಳನ್ನ ಬಳಸುತ್ತಿದ್ದರೋ ಅದೆಲ್ಲವನ್ನು ಮಂದಿರ ನಿರ್ಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ. ಅಂದ್ರೆ, ಮಂದಿರಕ್ಕೆ ಸೀಮೆಂಟ್‌ ಬಳಕೆ ಮಾಡದೇ ಕಲ್ಲಿನಿಂದಲೇ ನಿರ್ಮಿಸಲಾಗಿದೆ. ಯಾಕಂದ್ರೆ, ಸಿಮೆಂಟ್​​​ನ ಆಯಸ್ಸು ಸುಮಾರು 100 ವರ್ಷ ಅಂತಾ ಅಂದಾಜಿಸಲಾಗುತ್ತೆ. ಆದ್ರೆ, ಕಲ್ಲಿನ ಆಯಸ್ಸು ಸಾವಿರ ವರ್ಷವಾದ್ರೂ ಹಾಗೆಯೇ ಇರುತ್ತೆ. ಹೀಗಾಗಿ ದೇಗುಲ ನಿರ್ಮಾಣಕ್ಕೆ ಸಿಮೆಂಟ್‌ ಬಳಕೆ ಮಾಡಿಲ್ಲ. ಕೇವಲ ಕಲ್ಲಿನ ಜೋಡಣೆಗೆ ಮಾತ್ರ ವೈಟ್‌ ಸಿಮೆಂಟ್‌ ಉಪಯೋಗಿಸಲಾಗಿದೆ.

ಜೈ ಶ್ರೀರಾಮ್‌!

 • ಮಂದಿರದ 3 ಅಂತಸ್ತುಗಳಲ್ಲಿ 46 ಬಾಗಿಲು ನಿರ್ಮಾಣ!
 • 18 ಬಾಗಿಲುಗಳಿಗೆ ಚಿನ್ನ ಲೇಪನ, 100 ಕೆಜಿ ಚಿನ್ನ ಬಳಕೆ!
 • ಮಹಾರಾಷ್ಟ್ರದ ತೇಗದ ಮರ ಬಳಕೆ, 1000 ವರ್ಷ ಭದ್ರ!
 • ಬಾಗಿಲ ಮೇಲೆ ಕಮಲ, ಗಜ, ದೇವಿಯ ಚಿತ್ರಗಳ ಕೆತ್ತನೆ!
 • ದೇವಸ್ಥಾನದಲ್ಲಿ ಇರಲಿದೆ 4,400 ಕೆಜಿಯ ಬೃಹತ್‌ ಘಂಟೆ!
 • ಈ ಘಂಟೆಯು 6 ಅಡಿ ಎತ್ತರ, 5 ಅಡಿ ಅಗಲಿ ಇರಲಿದೆ!
 • ಘಂಟೆಗೆ ಅಷ್ಟಧಾತು ಬಳಕೆ, ಮೌಲ್ಯ 25 ಲಕ್ಷ ರೂಪಾಯಿ!

ಇಟ್ಟಿಗೆಯಲ್ಲಿ ರಾಮನ ಜೀವನ, ಗೋಡೆಯಲ್ಲಿ ಲಂಕಾ ದಹನ!

ಇನ್ನು, ನಾಗರ ಶೈಲಿಯಲ್ಲಿ ನಿರ್ಮಾಣವಾಗಿರೋ ದೇವಾಲಯದ ಎರಡನೇ ಮಹಡಿ ಮತ್ತು ಮೂರನೇ ಮಹಡಿಯ ಕೆಲಸಗಳು ಇನ್ನೂ ನಡೀತಿವೆ. ವಿಶೇಷ ಅಂದ್ರೆ, ದೇವಸ್ಥಾನದಲ್ಲಿ ಬಳಕೆಯಾಗಿರೋ ಪ್ರತಿಯೊಂದು ಕಲ್ಲಿನಲ್ಲೂ, ಪ್ರತಿಯೊಂದು ಇಟ್ಟಿಗೆಯಲ್ಲೂ ರಾಮನ ಜೀವನ ತೋರಿಸಲಾಗಿದೆ. ಹಾಗೆಯೇ, ಒಳಾಂಗಣ ಗೋಡೆಗಳ ಮೇಲೆ ಲಂಕಾ ದಹನ ಚಿತ್ರಿಸಲಾಗಿದೆ. ಅಂದ್ರೆ ಶೀರಾಮ ಲಂಕಾಗೆ ಹೋಗುವುದರಿಂದ ರಾವಣನ ಸಂಹಾರ ಮಾಡಿ ಸೀತೆಯನ್ನು ಅಯೋಧ್ಯೆಗೆ ಕರ್ಕೊಂಡ್‌ ಬರುವ ವರೆಗಿನ ಚಿತ್ರಗಳು ಗೋಡೆಯ ಮೇಲೆ ರೂಪಗೊಂಡಿವೆ.

ಮಕ್ರಾನ ಕಲ್ಲುಗಳಿಂದ ದೇವಾಲಯದ ಮಹಡಿಗಳು ನಿರ್ಮಾಣ

ರಾಮ ಮಂದಿರದ ಇನ್ನೊಂದ್‌ ವಿಶೇಷ ಅಂದ್ರೆ, ಇಡೀ ದೇಶವೇ ಇದರಲ್ಲಿ ಒಂದಲ್ಲ ಒಂದು ರೂಪದಲ್ಲಿ ಭಾಗಿಯಾಗಿರೋದು. ಹೌದು, ಮಹಾರಾಷ್ಟ್ರದ ಮರ, ರಾಜಸ್ಥಾನದ ಕಲ್ಲುಗಳು, ದಕ್ಷಿಣದ ಪುರೋಹಿತರು, ಗುಜರಾತ್‌ನ ವಾಸ್ತುಶಿಲ್ಪಿಗಳ ಸಹಿತ ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ರಾಜಸ್ಥಾನ, ಒಡಿಶಾ ಮತ್ತು ಮಧ್ಯಪ್ರದೇಶದ ಕುಶಲಕರ್ಮಿಗಳು ಕಲ್ಲುಗಳನ್ನು ಕೆತ್ತುವ ಕಾರ್ಯವನ್ನ ಬಹಳ ಕಾಲ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ದೇವಾಲಯದ ಮಹಡಿಗಳನ್ನು ಮಕ್ರಾನ ಕಲ್ಲುಗಳಿಂದ ಮಾಡಲಾಗಿದ್ದು, ಅದರಲ್ಲಿ ಗ್ರಾನೈಟ್ ಅನ್ನು ತೆಲಂಗಾಣ ಮತ್ತು ಕರ್ನಾಟಕದಿಂದ ಬಳಸಲಾಗಿದೆ. ಈ ರೀತಿಯಾಗಿ ದೇಶದ ಪ್ರತಿಯೊಂದು ಭಾಗದ ಜನರು ಒಂದಲ್ಲ ಒಂದು ರೀತಿಯಲ್ಲಿ ರಾಮ ಮಂದಿರ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ. ಹಾಗೇ ಪ್ರತಿಯೊಂದು ರಾಜ್ಯದ ವಸ್ತುವೂ ಮಂದಿರ ನಿರ್ಮಾಣದಲ್ಲಿ ಬಳಕೆ ಮಾಡಿಕೊಳ್ಳಲಾಗಿದೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗಿರೋ ಭವ್ಯ ರಾಮ ಮಂದಿರಕ್ಕೆ ಇಷ್ಟೆಲ್ಲ ವಿಶೇಷತೆ ಇದೆ ಅಂದ್ರೆ, ಯಾರ್​​ ತಾನೇ ಭೇಟಿ ಮಾಡೋದಕ್ಕೆ ಹಿಂದೇಟು ಹಾಕ್ತಾರೆ ಹೇಳಿ. ಎಂಥವರಿಗಾದ್ರೂ ಜೀವನದಲ್ಲಿ ಒಮ್ಮೆಯಾದ್ರೂ ಭಗವಾನ್​ ರಾಮಲಲ್ಲಾನ ದರ್ಶನ ಮಾಡ್ಬೇಕು, ಬಾಲ ರಾಮನ ದರ್ಶನ ಪಡೀಬೇಕು ಅನ್ನೋ ಮನಸ್ಸು ಮೂಡದೇ ಇರೋದಿಲ್ಲ. ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಆದ್ಮೇಲೆ ಯಾರೂ ತಡಮಾಡದೇ ಅಯೋಧ್ಯೆಗೆ ಭೇಟಿ ಕೊಟ್ಟು ಜಾನಕಿವಲ್ಲಭವ ದರ್ಶನ ಪಡೆಯಿರಿ ಅನ್ನೋದೇ ನಮ್ಮ ಹಾರೈಕೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಬ್ಬಿಣ ಅಲ್ಲವೇ ಅಲ್ಲ.. ರಾಮ ಮಂದಿರಕ್ಕೆ ಬಳಸಿದ್ದು ಕರ್ನಾಟಕದ ಗ್ರೆನೈಟ್‌ ಕಲ್ಲು; ಕಾರಣವೇನು?

https://newsfirstlive.com/wp-content/uploads/2024/01/RAM_TEMPLE_5.jpg

Load More