/newsfirstlive-kannada/media/post_attachments/wp-content/uploads/2025/07/MAHESH_KUMAR_DIRECTOR_1.jpg)
ಬೆಂಗಳೂರು: ಸ್ಯಾಂಡಲ್ವುಡ್ನ ಸೂಪರ್ ಹಿಟ್ ಮೂವಿ ನೀನಾಸಂ ಸತೀಶ್ ಅವರು ನಟಿಸಿದ್ದ ಅಯೋಗ್ಯ ಸಿನಿಮಾ ನಿರ್ದೇಶಕ ಮಹೇಶ್ ಕುಮಾರ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರು ಮೂಲದ ಚೈತ್ರಾ ಎನ್ನುವರ ಜೊತೆ ಸಂಭ್ರಮದಿಂದ ಮದುವೆಯಾಗಿದ್ದಾರೆ.
ನಿರ್ದೇಶಕ ಮಹೇಶ್ ಕುಮಾರ್ ಹಾಗೂ ಚೈತ್ರಾ ಅವರು ವಿವಾಹವಾಗಿದ್ದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಮೈಸೂರಿನ ಜಯಮ್ಮ, ಗೋವಿಂದೇ ಗೌಡ ಕಲ್ಯಾಣ ಮಂಟಪದಲ್ಲಿ ಸಂಭ್ರಮದಿಂದ ಹೊಸ ಬಾಳಿಗೆ ಎಂಟ್ರಿ ಕೊಟ್ಟಿದ್ದಾರೆ. ಗುರು, ಹಿರಿಯರು ಹಾಗೂ ಎರಡು ಕಡೆಯ ಕುಟುಂಬಸ್ಥರ ಸಮ್ಮುಖದಲ್ಲಿ ನಿರ್ದೇಶಕ ಮಹೇಶ್ ಕುಮಾರ್ ಹಾಗೂ ಚೈತ್ರಾ ಅವರು ಮದುವೆ ಆಗಿದ್ದಾರೆ.
ಮಹೇಶ್ ಕುಮಾರ್ ಅವರು ಮೈಸೂರು ಮೂಲದ ಚೈತ್ರಾರನ್ನ ವಿವಾಹವಾಗಿದ್ದಾರೆ. ಚೈತ್ರಾ ಅವರು ಎಂ.ಎ ಎಕನಾಮಿಕ್ಸ್ ಪದವಿ ಪಡೆದಿದ್ದಾರೆ. ಮನೆಯವರು ನೋಡಿ, ಮೆಚ್ಚಿದ ಹುಡುಗಿ ಜೊತೆ ಮಹೇಶ್ ಅವರು ಹಸೆಮಣೆ ಏರಿದ್ದಾರೆ. ಸದ್ಯಕ್ಕೆ ಅಯೋಗ್ಯ 2 ಸಿನಿಮಾ ನಿರ್ದೇಶನದಲ್ಲಿ ಮಹೇಶ್ ಅವರು ಬ್ಯುಸಿಯಾಗಿದ್ದಾರೆ.
ಇದನ್ನೂ ಓದಿ:‘ನನ್ನ ಖುಷಿಗೆ ನೀನೇ ಕಾರಣ’.. ರಿಷಭ್ ಪಂತ್ 10 ವರ್ಷದ ಲವ್ ಬ್ರೇಕಪ್, ಏನಾಯಿತು?
ಅಯೋಗ್ಯ ಹಾಗೂ ಮದಗಜ ಸಿನಿಮಾಗಳ ನಿರ್ದೇಶನ ಮಾಡಿ ಪ್ರಖ್ಯಾತಿ ಪಡೆದಿರುವ ನಿರ್ದೇಶಕ ಮಹೇಶ್ ಕುಮಾರ್ ತಮ್ಮ ಮೊದಲ ಪ್ರಯತ್ನದಲ್ಲೇ ಅಯೋಗ್ಯ ಸಿನಿಮಾದಿಂದ ಹೆಸರು ಪಡೆದರು. ಇದರಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಶೈಲಿಯಲ್ಲಿ ಸಿನಿಮಾಗಳನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಮಹೇಶ್ ಕುಮಾರ್ ಅವರ ಮದುವೆಯ ಫೋಟೋ ನೋಡಿ ಆಪ್ತರು, ಸ್ಯಾಂಡಲ್ವುಡ್ನ ಸ್ನೇಹಿತರು ಶುಭ ಹಾರೈಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ