/newsfirstlive-kannada/media/post_attachments/wp-content/uploads/2025/05/Ayush_Mhatre-1.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜೊತೆಗಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ 17 ವರ್ಷದ ಓಪನರ್ ಆಯುಷ್ ಮ್ಹಾತ್ರೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ಮಾಡಿದರೂ ಶತಕ ವಂಚಿತರಾಗಿದ್ದಾರೆ.
ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್ ಧೋನಿ ಅವರು ಮೊದಲ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಇದರಿಂದ ಆರ್ಸಿಬಿ ಮೊದಲ ಬ್ಯಾಟಿಂಗ್ ಮಾಡು ಅವಕಾಶ ಸಿಕ್ಕಿತ್ತು. ಈ ಅವಕಾಶವನ್ನು ಪ್ರತಿ ಕೈ ಚೆಲ್ಲುತ್ತಿದ್ದ ಆರ್ಸಿಬಿ ಈ ಬಾರಿ ಎರಡು ಕೈಗಳಿಂದ ತಬ್ಬಿಕೊಂಡಿತು. ಇದರಿಂದ ಕೊಹ್ಲಿ, ಬೆಥೆಲ್, ರೊಮಾರಿಯೋ ಶೆಫರ್ಡ್ ಅವರ ಭರ್ಜರಿ ಬ್ಯಾಟಿಂಗ್ನಿಂದ 20 ಓವರ್ಗಳಲ್ಲಿ 214 ರನ್ಗಳ ಗುರಿ ನೀಡಿತ್ತು.
ಈ ಗುರಿ ಬೆನ್ನಟ್ಟಿದ್ದ ಚೆನ್ನೈ ಆಟಗಾರರು ಅಮೋಘ ಬ್ಯಾಟಿಂಗ್ ಪ್ರದರ್ಶನ ಮಾಡಿದರು. ಓಪನರ್ ಆಗಿ ಕ್ರೀಸ್ಗೆ ಆಗಮಿಸಿದ ಆಯುಷ್ ಮ್ಹಾತ್ರೆ ಆರ್ಸಿಬಿ ಬೌಲರ್ಗಳನ್ನು ಮನಬಂದಂತೆ ಚಚ್ಚಿದರು. ಚಿನ್ನಸ್ವಾಮಿಯ ಮೂಲೆ ಮೂಲೆಗೂ ಬಾಲ್ಗಳನ್ನು ಕಳುಹಿಸಿದ ಯುವ ಆಟಗಾರ ಸೆಂಚುರಿ ಬಾರಿಸುವಲ್ಲಿ ಸ್ವಲ್ಪದಲರಲ್ಲೇ ಎಡವಿದರು ಎನ್ನಬಹುದು. ಈ ವೇಳೆ ತಂಡಕ್ಕ ರನ್ ಅವಶ್ಯಕತೆ ಇದ್ದ ಕಾರಣ ಟೆನ್ಷನ್ನಲ್ಲಿ ಹೊಡೆದ ಬಾಲ್ ಆರ್ಸಿಬಿ ಆಲ್ರೌಂಡರ್ ಕೈ ಸೇರಿತು.
ಇದನ್ನೂ ಓದಿ: ಚೆನ್ನೈ ವಿರುದ್ಧ ರಣರೋಚಕ ಪಂದ್ಯ.. ಕೇವಲ 2 ರನ್ನಿಂದ ಜಯಭೇರಿ ಬಾರಿಸಿದ RCB
ಇನ್ನು ಕೇವಲ 17 ವರ್ಷ 292 ದಿನಗಳು ತುಂಬಿರುವ ಚೆನ್ನೈ ಯಂಗ್ ಬ್ಯಾಟ್ಸ್ಮನ್ ಆಯುಷ್ ಮ್ಹಾತ್ರೆ ಬ್ಯಾಟಿಂಗ್ ನೋಡುಗರಿಗೆ ಹಬ್ಬದೂಟ ನೀಡಿತ್ತು. ಆರ್ಸಿಬಿ ನೀಡಿದ್ದ ರನ್ಗಳ ಗುರಿ ಸಮೀಪಕ್ಕೆ ಚೆನ್ನೈ ತಂಡ ಬರಲು ಆಯುಷ್ ಮ್ಹಾತ್ರೆ ಬ್ಯಾಟಿಂಗ್ ಕಾರಣ. ಈ ಪಂದ್ಯದಲ್ಲಿ ಕೇವಲ 48 ರನ್ಗಳನ್ನು ಎದುರಿಸಿದ ಆಯುಷ್, 9 ಬೌಂಡರಿ, ದೊಡ್ಡ ದೊಡ್ಡ 5 ಸಿಕ್ಸರ್ಗಳಿಂದ 94 ರನ್ಗಳನ್ನು ಗಳಿಸಿದ್ದರು. ಸೆಂಚುರಿ ಹೊಸ್ತಿಲಿನಲ್ಲಿದ್ದ ಯುವ ಬ್ಯಾಟರ್, ಲುಂಗಿ ಎನ್‌ಗಿಡಿ ಬೌಲಿಂಗ್ನಲ್ಲಿ ಬಿಗ್ ಶಾಟ್ ಹೊಡೆದರು. ಆದರೆ ಆ ಬಾಲ್ ನೇರ ಹೋಗಿ ಆಲ್ರೌಂಡರ್ ಕೃನಾಲ್ ಪಾಂಡ್ಯ ಕೈ ಸೇರಿತು.
ಆರ್ಸಿಬಿ ವಿರುದ್ಧ ಪಂದ್ಯ ಗೆಲ್ಲಿಸದೇ ಇರುವುದಕ್ಕೆ ಹಾಗೂ ತನ್ನ ಸೆಂಚುರಿ ಕೂಡ ಮಿಸ್ ಆಗಿದ್ದರಿಂದ ಆಯುಷ್ ಬೇಸರದಿಂದ ಹೊರ ನಡೆದರು. ಆಯುಷ್ ಔಟ್ ಆಗಿದ್ದೇ ಚೆನ್ನೈ ಸೋಲಿನ ಸುಳಿಗೆ ಸಿಲುಕಿತು. ಬೌಂಡರಿ ಲೈನ್ ದಾಟುತ್ತಿದ್ದಂತೆ ಚೆನ್ನೈ ತಂಡದ ಸಹ ಆಟಗಾರರು ಆಯುಷ್ಗೆ ವೆಲ್ ಬ್ಯಾಟಿಂಗ್ ಎಂದು ವಿಶ್ ಮಾಡಿ, ನೆಕ್ಸ್ಟ್ ಟೈಮ್ ಬೆಟರ್ ಲಕ್ ಎಂದು ಹೇಳಿದರು. ಈ ಪಂದ್ಯದಲ್ಲಿ ಆರ್ಸಿಬಿ ಕೇವಲ 2 ರನ್ಗಳಿಂದ ಗೆದ್ದು ಆಕಾಶ ಉದುರುವಂತೆ ಸಂಭ್ರಮಿಸಿತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ